Asianet Suvarna News Asianet Suvarna News

Goa Election 2022 : ಕಾಂಗ್ರೆಸ್ ದುರಾಡಳಿತದ ಕಾರಣದಿಂದಾಗಿ ನಾನು ರಾಜಕೀಯಕ್ಕೆ ಬಂದೆ ಎಂದ ಕೇಜ್ರಿವಾಲ್!

ಗೋವಾದಲ್ಲಿ ದೆಹಲಿ ಮುಖ್ಯಮಂತ್ರಿಯ ಭರ್ಜರಿ ಪ್ರಚಾರ
ತಾವು ರಾಜಕೀಯಕ್ಕೆ ಬಂದ ಕಾರಣ ವಿವರಿಸಿದ ಅರವಿಂದ್ ಕೇಜ್ರಿವಾಲ್
ಜನಪರವಾಗಿ ಕೆಲಸ ಮಾಡಲು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ ಎಂದು ಟೀಕೆ

Goa Election 2022 News Congress is the reason why I joined politics says Delhi Chief Minister Arvind Kejriwal san
Author
Bengaluru, First Published Feb 4, 2022, 8:25 PM IST | Last Updated Feb 4, 2022, 8:25 PM IST

ಪಣಜಿ (ಫೆ. 4): ದೆಹಲಿಯಲ್ಲಿ (Delhi) ಕಾಂಗ್ರೆಸ್ ಪಕ್ಷ (Congress Party) ತೋರಿದ ದುರಾಡಳಿತದ ಕಾರಣದಿಂದಾಗಿಯೇ ನಾನು ರಾಜಕೀಯಕ್ಕೆ(Politics) ಬರಬೇಕಾಯಿತು. ಇಲ್ಲದೇ ಇದಲ್ಲಿ ರಾಜಕೀಯಕ್ಕೆ ಬರುವ ಯಾವ ಉದ್ದೇಶವೂ ಇದ್ದಿರಲಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi Chief Minister Arvind Kejriwal )ಶುಕ್ರವಾರ ಹೇಳಿದ್ದಾರೆ. ಗೋವಾ ವಿಧಾಸಭೆ (Goa Election) ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಬಂದಿರುವ ಅರವಿಂದ್ ಕೇಜ್ರಿವಾಲ್ ತಾವು ರಾಜಕೀಯ ಬಂದ ಕಾರಣವನ್ನು ವಿವರಿಸಿದರು.

ಫೆಬ್ರವರಿ 14 ರಂದು ಗೋವಾದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. "ದೆಹಲಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಲು ಕಾಂಗ್ರೆಸ್ ವಿಫಲವಾಗಿತ್ತು. ಅದಕ್ಕಾಗಿಯೇ ನನ್ನಂಥ ಹಲವರು ರಾಜಕೀಯಕ್ಕೆ ಬರುವ ಮಾರ್ಗವನ್ನು ಆರಿಸಿಕೊಳ್ಳಬೇಕಾಯಿತು' ಎಂದು ಹೇಳಿದ್ದಾರೆ. ಗೋವಾ ಕಾಂಗ್ರೆಸ್ ಅರವಿಂದ್ ಕೇಜ್ರಿವಾಲ್ ಅವರನ್ನು ಚೋಟಾ ಮೋದಿ (Chhota Modi) ಎಂದು ಕರೆದು ಟೀಕೆ ಮಾಡಿದ ಬೆನ್ನಲ್ಲಿಯೇ ಅರವಿಂದ್ ಕೇಜ್ರಿವಾಲ್ ಈ ಮಾತನ್ನು ಹೇಳಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ (Congress general secretary Randeep Singh Surjewala) ಅವರು, ಕರಾವಳಿ ರಾಜ್ಯದಲ್ಲಿ ಸೋಲುವ ಸಾಧ್ಯತೆಯಿರುವ ಹಾಲಿ ಬಿಜೆಪಿಗೆ "ಕವರ್ ಫೈರ್" ನೀಡಲು ಕೇಜ್ರಿವಾಲ್ ಅವರ ಎಎಪಿ ಗೋವಾದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಹೇಳಿದ್ದರು.

ಸುರ್ಜೇವಾಲಾ ಅವರ ಟೀಕೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, "ಅವರು ಏನು ಬೇಕಾದರೂ ಹೇಳಲಿ, ಇದರಿಂದ ಏನೂ ವ್ಯತ್ಯಾಸವಾಗುವುದಿಲ್ಲ" "ವಾಸ್ತವವಾಗಿ, ಅವರ (ಸುರ್ಜೇವಾಲಾ) ಕನಸಿನಲ್ಲಿಯೂ ಸಹ, ಅವರು ನನ್ನನ್ನು ದೆವ್ವದಂತೆ ಕಾಣುತ್ತಾರೆ. ಎಲ್ಲಾ ಸಮಯದಲ್ಲೂ, 24 ಗಂಟೆಗಳು, ಅವರ ಮನಸ್ಸಿನಲ್ಲಿ ನಾನಿದ್ದೇನೆ. ಅವರು (ಕಾಂಗ್ರೆಸ್ ನಾಯಕರು) ಯಾವಾಗಲೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ." ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ನನ್ನ ಮೇಲೆ ಮಾತಿನ ದಾಳಿ ಮಾಡುವ ಬದಲಾಗಿ, ಜನರ ಪರವಾಗಿ ಕೆಲಸ ಮಾಡಿದ್ದರೆ, ಹೀಗೆಲ್ಲಾ ಹೇಳುವ ಅವಕಾಶವೇ ಬರುತ್ತಿರಲಿಲ್ಲ. ಅವರು ಜನರಿಗಾಗಿ ಕೆಲಸ ಮಾಡಿದ್ದರೆ, ರಾಜಕೀಯದಲ್ಲಿ ಕೇಜ್ರಿವಾಲ್ ಎನ್ನುವ ವ್ಯಕ್ತಿ ಬರುವ ಅಗತ್ಯವೇ ಇರಲಿಲ್ಲ ಎಂದರು. ನಮ್ಮ ಪಕ್ಷ ಒಳ್ಳೆಯ ಕೆಲಸ ಮಾಡುತ್ತಿದೆ ಎನ್ನುವ ಕಾರಣಕ್ಕಾಗಿಯೇ ನಮ್ಮ ಪಕ್ಷವನ್ನು ಜನ ಇಷ್ಟಪಡುತ್ತಾರೆ ಎಂದು ಹೇಳಿದರು.

Loyalty Oath : "ದೇವ್ರ ಮೇಲೆ ಆಣೆ ಮಾಡಿ ಹೇಳಿ, ಬೇರೆ ಪಕ್ಷಕ್ಕೆ ಹೋಗಲ್ಲ ಅಂತ" ಮಣಿಪುರ, ಗೋವಾದಲ್ಲಿ ಪ್ರಮಾಣ ಪವರ್
ಇದೇ ವೇಳೆ ತಮ್ಮ ಪಕ್ಷದ ನಡೆಯನ್ನು ಕಾಂಗ್ರೆಸ್ ಪಕ್ಷವು ನಕಲು ಮಾಡಿದೆ ಎಂದು ಕೇಜ್ರಿವಾಲ್ ಟೀಕೆ ಮಾಡಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಕಾನೂನು ಅಫಡವಿಟ್ ಗೆ ಸಹಿ ಹಾಕಿ ಪ್ರತಿಜ್ಞೆ ಮಾಡಿದ ಕೆಲವೇ ದಿನಗಳಲ್ಲಿ ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೂ ಕೂಡ ಕಾನೂನು ಅಫಡವಿಟ್ ಗೆ ಸಹಿ ಹಾಕಿದ್ದಲ್ಲದೆ, ಪಕ್ಷಕ್ಕೆ ನಿಷ್ಠರಾಗುವ ಪ್ರಮಾಣವನ್ನೂ ಮಾಡಿದರು. ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಫಿಡವಿಟ್ ಗಳಿ ಸಹಿ ಹಾಕಿದ್ದರು.

Goa Election : ಮಾಸೆರೆಟಿ ಕಾರಿನ ಮಾಲೀಕ ಗೋವಾದಲ್ಲಿ ಆಪ್ ಸಿಎಂ ಅಭ್ಯರ್ಥಿ!
"ಅವರು (ರಾಹುಲ್ ಗಾಂಧಿ) ನಮ್ಮ ಒಳ್ಳೆಯ ಕೆಲಸವನ್ನು ನಕಲು ಮಾಡಲಿ. ಕಾಂಗ್ರೆಸ್ ಅವರು ಅಧಿಕಾರದಲ್ಲಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿಯೂ ನಮ್ಮ ಯೋಜನೆಗಳನ್ನು ಜಾರಿಗೆ ತರಬೇಕೆಂದು ನಾವು ಬಯಸುತ್ತೇವೆ" ಎಂದು ಅವರು ಹೇಳಿದರು. ಕಾಂಗ್ರೆಸ್ ಎಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಲಿ, ನಂತರ ನಾನು ರಾಜಕೀಯ ಪಕ್ಷವನ್ನು ನಡೆಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಇನ್ನೊಂದೆಡೆ ಗೋವಾದಲ್ಲಿ ಮನೆ ಮನೆ ಪ್ರಚಾರದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಾಗೇನಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ, ಕಡುಬಡವರಿಗೆ ಪ್ರತಿ ತಿಂಗಳು 6 ಸಾವಿರ ರೂಪಾಯಿಯನ್ನು ನೇರ ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios