Asianet Suvarna News Asianet Suvarna News

ಪ್ರಧಾನಿ ಮೋದಿ ಭೇಟಿಗೆ ಸಮಯ ಕೊಡಿಸಿ: ಸಿಎಂ ಸಿದ್ದರಾಮಯ್ಯ

ರಾಜ್ಯದ ನೀರಾವರಿ ಯೋಜನೆ, ಬಾಕಿ ಇರುವ ಯೋಜನೆಗಳಿಗೆ ಅನುಮತಿ, ಅನುದಾನಕ್ಕಾಗಿ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ರಾಜ್ಯ ಸರ್ಕಾರ ಸಿದ್ಧವಿದ್ದು, ಪ್ರಧಾನ ಮಂತ್ರಿಗಳಿಂದ ನೀವು (ವಿಪಕ್ಷ) ಸಮಯ ಕೊಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Give time to meet PM Narendra Modi Says CM Siddaramaiah gvd
Author
First Published Dec 16, 2023, 5:01 PM IST

ವಿಧಾನಸಭೆ (ಡಿ.16): ರಾಜ್ಯದ ನೀರಾವರಿ ಯೋಜನೆ, ಬಾಕಿ ಇರುವ ಯೋಜನೆಗಳಿಗೆ ಅನುಮತಿ, ಅನುದಾನಕ್ಕಾಗಿ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ರಾಜ್ಯ ಸರ್ಕಾರ ಸಿದ್ಧವಿದ್ದು, ಪ್ರಧಾನ ಮಂತ್ರಿಗಳಿಂದ ನೀವು (ವಿಪಕ್ಷ) ಸಮಯ ಕೊಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಡೆದ ವಿಶೇಷ ಚರ್ಚೆಯ ಬಳಿಕ ಉತ್ತರ ನೀಡುತ್ತಿದ್ದ ಅವರು, ಕೃಷ್ಣಾ ಭಾಗ್ಯ ಜಲ ನಿಗಮ ೩ನೇ ಹಂತದಲ್ಲಿ ೧೩೦ ಟಿಎಂಸಿ ನೀರು ಬಳಸಬೇಕು ಎಂಬ ಆದೇಶವಿದೆ. ಆದರೆ ಅಫಿಡವಿಟ್ ಹಾಕಿಲ್ಲ. 

ಬ್ರಿಜೇಶ್ ಕುಮಾರ್‌ನ್ಯಾಯಾಧಿಕರಣ ವರದಿ ಕೊಟ್ಟು ೧೩ ವರ್ಷಗಳಾಗಿವೆ. ಈವರೆಗೂ ಗೆಜೆಟ್ ಅಧಿಸೂಚನೆ ಆಗಿಲ್ಲ. ಗೆಜೆಟ್ ನೋಟಿಫಿಕೇಶನ್ ಆಗದೇ ಆಲಮಟ್ಟಿ ಜಲಾಶಯದ ಎತ್ತರವನ್ನು ೫೨೪ ಮೀಟರ್‌ಗೆ ಏರಿಸಲು ಸಾಧ್ಯವಿಲ್ಲ. ಮಹದಾಯಿ ಕುರಿತಂತೆ ಪರಿಸರ ಇಲಾಖೆಯಿಂದ ಅನುಮತಿ ದೊರೆಯಬೇಕಿದೆ. ಅನುಮತಿ ದೊರೆತರೆ ನಾಳೆಯಿಂದ ಮಹದಾಯಿ ಯೋಜನೆಯ ಕಾಮಗಾರಿ ಶುರು ಮಾಡುತ್ತೇವೆ. ಕೇಂದ್ರ ಸರ್ಕಾರ ಈ ಕೆಲಸಗಳನ್ನು ಮಾಡಬೇಕು ಎಂದರು.

ಆಗ ಪ್ರತಿಪಕ್ಷದ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕೇಂದ್ರದ ಬಳಿ ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಿ. ಎಲ್ಲರೂ ಸೇರಿ ಒತ್ತಡ ಹೇರೋಣ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ನಾವು ಸಿದ್ಧ. ಆದರೆ ಪ್ರಧಾನಮಂತ್ರಿಗಳು ನಮಗೆ ಸಮಯವನ್ನು ಕೊಡುವುದಿಲ್ಲ. ಆದಕಾರಣ ಪ್ರತಿ ಪಕ್ಷವೂ ಪ್ರಧಾನಮಂತ್ರಿಗಳಿಂದ ಸಮಯ ಕೊಡಿಸಬೇಕು. ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗುತ್ತೇವೆ. 

ಉಮಾಶ್ರೀ ನೋಡಿದಾಗಲೆಲ್ಲಾ ಮಾಲಾಶ್ರೀ ಅಂತೀನಿ: ವಿಶ್ವನಾಥ್

ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆ ಹಾಗೂ ಕೇಂದ್ರದಿಂದ ಬರಬೇಕಾದ ಅನುದಾನದ ಬಗ್ಗೆಯೂ ಚರ್ಚಿಸಿಕೊಂಡು ಬರಬಹುದು. ಕೇಂದ್ರದ ಮೇಲೆ ಒತ್ತಡ ಹೇರಬಹುದು ಎಂದರು. ಅದಕ್ಕೆ ಯತ್ನಾಳ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಪ್ರತಿಪಕ್ಷದ ನಾಯಕ ಆರ್.ಅಶೋಕ ನೇತೃತ್ವ ವಹಿಸಿಕೊಂಡು ಸಮಯ ನಿಗದಿಪಡಿಸಬೇಕೆಂದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು  ಧ್ವನಿಗೂಡಿಸಿದರು.

Latest Videos
Follow Us:
Download App:
  • android
  • ios