ಗುವಾಹಟಿ( ಆ. 23) ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಲೇ ಇದೆ. ಒಂದು ಕಡೆ ಹೊಸ ಅಧ್ಯಕ್ಷರ ಆಯ್ಕೆಗೆ ಒಲವು ತೋರಿರುವ ಸೋನಿಯಾ ಗಾಂಧಿ ಸಭೆಯನ್ನು ಕರೆದಿದ್ದಾರೆ.

ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಕರ್ನಾಟಕ ಕಾಂಗ್ರೆಸ್ ಗಾಂಧಿ ಕುಟುಂಬಕ್ಕೆ ಜೈ ಎಂದಿದೆ. ಆದರೆ ಗುಗವಾಟಿಯ ನಾಯಕರೊಬ್ಬರು ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಯೇ ಸೂಕ್ತ ಎಂದು ಹೇಳಿದ್ದು ಅದಕ್ಕೆ ಕಾರಣವನ್ನು ನೀಡಿದ್ದಾರೆ.

ರಾಹುಲ್​ ಗಾಂಧಿಯವರನ್ನೇ ಮತ್ತೆ ಕಾಂಗ್ರೆಸ್​ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಕೂಗಿಗೆ ಅಸ್ಸಾಂ ಕಾಂಗ್ರೆಸ್​ ಅಧ್ಯಕ್ಷ ರಿಪುನ್​ ಬೋರಾ ಜೈ ಎಂದಿದ್ದಾರೆ.  ರಾಹುಲ್​ ಗಾಂಧಿಯವರನ್ನೇ ಕಾಂಗ್ರೆಸ್​ ಅಧ್ಯಕ್ಷನನ್ನಾಗಿ ನೇಮಕ ಮಾಡಬೇಕು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಹುಲ್​ ಗಾಂಧಿ ಅವರೊಬ್ಬರಿಗೇ ಮಾತ್ರ ಭಯ ಪಡುತ್ತಾರೆ! ಎಂದು ಹೇಳಿದ್ದಾರೆ.

ಗಾಂಧಿಗಳ ಕೊಂಡಾಡಿದ ಪಂಜಾಬ್ ಸಿಎಂ, ರಾಜೀವ್-ಇಂದಿರಾ ದೇಶಕ್ಕಾಗಿ ಪ್ರಾಣ ಕೊಟ್ಟರು!

ರಾಹುಲ್ ಗೆ ಭಯಪಡುವ ಕಾರಣಕ್ಕೆ ಅವರ ಮೇಲೆ ಇಲ್ಲದ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಆರ್ ಎಸ್‌ಎಸ್ ಮತ್ತು ನರೇಂದ್ರ ಮೋದಿಗೆ ರಾಹುಲ್ ಸವಾಲು ಹಾಕಿಕೊಂಡೇ ಬಂದಿದ್ದಾರೆ ಎಂದು ಹೇಳುತ್ತ ಇವರು ಗಾಂಧಿ ಫ್ಯಾಮಿಲಿಗೆ ವಿಧೇಯತೆ ತೋರಿಸಿದ್ದಾರೆ.

ಸೋನಿಯಾ ಗಾಂಧಿ ಅವರಿಗೆ ರಾಹುಲ್ ಅವರನ್ನೇ ಅಧ್ಯಕ್ಷರನ್ನಾಗಿಸಿ ಎಂದು ಪತ್ರ ಬರೆದಿದ್ದೇನೆ. ಐದು ಅಂಶಗಳ ಕಾರ್ಯಕ್ರಮ ಇಟ್ಟುಕೊಂಡು ಪಕ್ಷವನ್ನು ಬಲಿಷ್ಠಮಾಡಬೇಕಿದೆ. ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಮುಖಂಡ ಹೇಳಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾದ ನಂತರ ರಾಹುಲ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು.