ಪುತ್ರ ಸದ್ದಾಂ ಜೊತೆಗೂಡಿ ಜಮ್ಮು ಕಾಶ್ಮೀರದಲ್ಲಿ ಗುಲಾಂ ನಬಿ ಹೊಸ ಪಕ್ಷ ಸ್ಥಾಪನೆ!

ಕಾಂಗ್ರೆಸ್‌ ಪಕ್ಷಕ್ಕೆ ವಿದಾಯ ಹೇಳಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್‌, ಪುತ್ರನೊಂದಿಗೆ ಹೊಸ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.  ಜಮ್ಮು ಕಾಶ್ಮೀರದ ರಾಜಕಾರಣದಲ್ಲಿ ಗುಲಾಂ ನಬಿ ಆಜಾದ್‌ ದೊಡ್ಡ ಹೆಸರು. ಅದಲ್ಲದೆ, ಅವರ ಹೆಸರೇ ಒಂದು ಪಕ್ಷದ ರೀತಿಯಲ್ಲಿ ಕಾರ್ಯನಿರ್ವಹನೆ ಮಾಡುತ್ತದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಅವರ ಈ ನಿರ್ಧಾರ ದೊಡ್ಡ ಬದಲಾವಣೆ ತರುವುದಂತೂ ನಿಶ್ಚಯವಾಗಿದೆ.

Ghulam Nabi Azad will form a new party with son on the lines of Captain know how much profit and loss for BJP san

ನವದೆಹಲಿ (ಆ. 26): ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಮುಂದೇನು ಎನ್ನುವ ಊಹಾಪೋಹಗಳ ಸುದ್ದಿ ಹರಿದಾಡುವ ಮುನ್ನವೇ ಸ್ಪಷ್ಟೀಕರಣ ನೀಡಿದ್ದು, ನಾನು ಯಾವುದೇ ಪಕ್ಷಕ್ಕೂ ಸೇರುತ್ತಿಲ್ಲ. ನನ್ನದೇ ಅದ ಹೊಸ ಪಕ್ಷವನ್ನು ಸ್ಥಾಪನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದು ಬಿಜೆಪಿ ರಚಿಸುತ್ತಿರುವ 'ಕ್ಯಾಪ್ಟನ್‌ ಪಾರ್ಟ್‌-2' ಎಂದೇ ಬಿಂಬಿಸಲಾಗಿದೆ. ಪಂಜಾಬ್‌ನಲ್ಲಿ ಇದೇ ರೀತಿಯ ರಾಜಕಾರಣದಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್ ಕೊನೆಗೆ ತಮ್ಮದೇ ಆದ ಪಕ್ಷವನ್ನು ಸ್ಥಾಪನೆ ಮಾಡಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಈ ರಾಜಕೀಯ ಇನ್ನಿಂಗ್ಸ್ ಅನ್ನು ಗುಲಾಂ ನಬಿ ಆಜಾದ್ ತಮ್ಮ ಪುತ್ರ ಸದ್ದಾಂ ಜೊತೆಗೆ ಆರಂಭಿಸಲಿದ್ದಾರೆ. ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ಅವರ ಹಿಡಿತವು ಬಿಜೆಪಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದು ರಾಜಕೀಯ ವಿಶ್ಲೇಷಕರು ನಂಬಿದ್ದಾರೆ. ಬಿಜೆಪಿಯ ಚಿಹ್ನೆಯ ಮೇಲೆ ಚುನಾವಣೆ ನಡೆಯದಿರಬಹುದು ಎಂಬುದು ಬೇರೆ ವಿಷಯ, ಆದರೆ ಬಿಜೆಪಿ ಮತ್ತು ಗುಲಾಂ ನಬಿ ನಡುವೆ ರಾಜಕೀಯ ಇತ್ಯರ್ಥದ ಸಾಧ್ಯತೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ಮುಂಬರುವ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಅಧಿಕಾರ ಹಿಡಿಯಲೇಬೇಕು ಎನ್ನುವ ಗುರಿಯಲ್ಲಿರುವ ಬಿಜೆಪಿ, ಗುಲಾಂ ನಬಿ ಆಜಾದ್‌ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಸ್ವತಂತ್ರವಾಗಿ ಚುನಾವಣಾ ರಾಜಕೀಯ: ರಾಜೀನಾಮೆಯ ನಂತರ ಗುಲಾಂ ನಬಿ ಆಜಾದ್ ಅವರ ಮುಂದಿನ ಹೆಜ್ಜೆ ಏನು ಎಂಬ ಊಹಾಪೋಹಗಳು ಹೆಚ್ಚಾಗಿವೆ. ರಾಜೀನಾಮೆ ನೀಡಿದ ನಂತರ, ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದ ಜನರ ಕುರಿತಾಗಿ ಮಾತನಾಡುತ್ತಾ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಹೇಳಿದ್ದರು. ಇದೇ ವೇಳೆ ಖಾಸಗಿ ವಾಹಿನಿಯೊಂದರೊಂದಿಗಿನ ಸಂವಾದದಲ್ಲಿ ಆಜಾದ್ ಅವರು ತಮ್ಮ ಹೊಸ ಪಕ್ಷವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಿರಿಯ ರಾಜಕೀಯ ವಿಶ್ಲೇಷಕ ಮತ್ತು ಪತ್ರಕರ್ತ ಹುಸೇನ್ ಜಹಾಂಗೀರ್ ಅವರ ಪ್ರಕಾರ, ಕಾಶ್ಮೀರದ ಎಲ್ಲಾ ರಾಜಕೀಯ ಸಂಘಟನೆಗಳು ಮತ್ತು ದೊಡ್ಡ ನಾಯಕರಲ್ಲಿ ಗುಲಾಂ ನಬಿ ಆಜಾದ್ ಅವರನ್ನು ಸ್ವೀಕರಾರ್ಹ ವ್ಯಕ್ತಿ ಎಂದು ಹೇಳುತ್ತಾರೆ. ಜಹಾಂಗೀರ್ ಹೇಳುವಂತೆ ಕಾಶ್ಮೀರದಲ್ಲಿ ತನ್ನ ಸಡಿಲ ನೀತಿಗಳಿಂದಾಗಿ ಕಾಂಗ್ರೆಸ್ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಎಂಬುದು ಬೇರೆ ವಿಷಯ, ಆದರೆ ಈಗ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಗುಲಾಂ ನಬಿ ಅವರು ಮುಕ್ತವಾಗಿ ಕಾರ್ಯನಿರ್ವಹಿಸಬಹುದು. ಇನ್ನು ಕೆಲವೇ ತಿಂಗಳುಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇರ್ಪಡುವ ಮೂಲಕ ಗುಲಾಂ ನಬಿ ಆಜಾದ್ ಅವರು ಕಾಶ್ಮೀರದಲ್ಲಿ ತಮ್ಮ ಹೊಸ ರಾಜಕೀಯ ಇನ್ನಿಂಗ್ಸ್ ಅನ್ನು ಸ್ವತಂತ್ರವಾಗಿ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಹಾಗಿದ್ದರೂ, ಗುಲಾಂ ನಬಿ ಆಜಾದ್ ಅವರು ಸ್ವತಃ ಬಹಳ ದೊಡ್ಡ ವ್ಯಕ್ತಿ ಮತ್ತು ಸ್ವತಃ ದೊಡ್ಡ "ರಾಜಕೀಯ ಪಕ್ಷ" ಎನ್ನುವುದು ಜಹಾಂಗೀರ್‌ ಅಭಿಪ್ರಾಯ. ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಮಟ್ಟದಲ್ಲಿ ರಾಜಕೀಯ ಸಂಘಟನೆಯನ್ನು ಸ್ಥಾಪಿಸುವುದು ಮಾತ್ರವಲ್ಲದೆ ಚುನಾವಣೆಯಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದ್ದಾರೆ ಎಂಬುದು ಖಚಿತವಾಗಿದೆ ಎಂದು ಜಹಾಂಗೀರ್ ಹೇಳುತ್ತಾರೆ.

ಕಾಂಗ್ರೆಸ್‌ ಪಕ್ಷ ರಿಮೋಟ್‌ ಕಂಟ್ರೋಲ್‌ನಲ್ಲಿದೆ...ಗುಲಾಂ ನಬಿ ರಾಜೀನಾಮೆ ಪತ್ರದ 'ಆಜಾದ್‌' ಮಾತು!

ಕಾಶ್ಮೀರದ ರಾಜಕೀಯ ಮತ್ತು ಗುಲಾಂ ನಬಿ ಆಜಾದ್ ಅವರ ಸಂಪೂರ್ಣ ರಾಜಕೀಯ ಪಯಣವನ್ನು ದೀರ್ಘಕಾಲದಿಂದ ಸೂಕ್ಷ್ಮವಾಗಿ ಗಮನಿಸುತ್ತಿರುವ ಹಿರಿಯ ರಾಜಕೀಯ ವಿಶ್ಲೇಷಕ ಎಸ್.ಎನ್.ಕೌಲ್, ಮುಂಬರುವ ಚುನಾವಣೆಯಲ್ಲಿ ಗುಲಾಂ ನಬಿ ಆಜಾದ್ ಅವರು ತಮ್ಮ ಪುತ್ರ ಸದ್ದಾಂ ಜೊತೆಗೆ ಕಾಶ್ಮೀರದಲ್ಲಿ ಹೊಸ ಪಕ್ಷವನ್ನು ಈಗಾಗಲೇ ಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ವಿಧಾನಸಭಾ ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಇದೇ ವಿಷಯ ಜಮ್ಮು-ಕಾಶ್ಮೀರದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ ಪಕ್ಷವನ್ನು ತೊರೆದ ಹಿರಿಯ ನಾಯಕ ಗುಲಾಂ ನಬಿ ಅಜಾದ್‌!

ಜಮ್ಮು ಮತ್ತು ಕಾಶ್ಮೀರದ ಹಿರಿಯ ಪತ್ರಕರ್ತರೊಬ್ಬರು ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ನಾಯಕರೊಂದಿಗೆ ಸ್ವಲ್ಪ ಸಮಯದವರೆಗೆ ಸಂಪರ್ಕದಲ್ಲಿದ್ದರು ಮತ್ತು ಅವರ ಅನಾರೋಗ್ಯದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಜನರು ದೆಹಲಿಯ ನಿವಾಸದಲ್ಲಿದ್ದರು ಎಂದು ಹೇಳುತ್ತಾರೆ. ಹಾಗಿದ್ದರೂ, ಈ ಪಾತ್ರವು ಕಾಂಗ್ರೆಸ್ ಪಕ್ಷದ್ದಾಗಿದೆಯೇ ಅಥವಾ ಅವರ ಸ್ವಂತ ರಾಜಕೀಯ ಇನ್ನಿಂಗ್ಸ್‌ನಿಂದ ಎಂದು ಖಚಿತವಾಗಿಲ್ಲ. ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವತಂತ್ರ ಪಕ್ಷವನ್ನು ರಚಿಸುವ ಮೂಲಕ ಚುನಾವಣಾ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಅನುಭವದ ಲಾಭವನ್ನು ಪಡೆಯಬಹುದು ಎಂದು ಹಿರಿಯ ಪತ್ರಕರ್ತ ಜಹಾಂಗೀರ್ ನಂಬಿದ್ದಾರೆ.

Latest Videos
Follow Us:
Download App:
  • android
  • ios