ಸತತ 40 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗಾಂ​ಧಿಗಳ ಜೊತೆ ಇದ್ದ ಗುಲಾಂ ನಬಿ ಮೊದಲ ಬಾರಿಗೆ ಪ್ರವಾಹದ ವಿರುದ್ಧ ಈಜುತ್ತಿದ್ದಾರೆ. ಹೀಗಾಗಿ ಪ್ರವಾಹದ ಜೊತೆಗಿರುವ ಕಾಂಗ್ರೆಸ್‌ನ ಅಜಾದ್‌ ಅವರೇ ಬೆಳೆಸಿದ ಯುವ ನಾಯಕರು ಗುಲಾಂ ನಬಿ ಅವರನ್ನು ಬಹಿರಂಗವಾಗಿ ಬಯ್ಯುತ್ತಿದ್ದಾರೆ. 

ನವದೆಹಲಿ (ಸೆ. 11): ಸತತ 40 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗಾಂ​ಧಿಗಳ ಜೊತೆ ಇದ್ದ ಗುಲಾಂ ನಬಿ ಮೊದಲ ಬಾರಿಗೆ ಪ್ರವಾಹದ ವಿರುದ್ಧ ಈಜುತ್ತಿದ್ದಾರೆ. ಹೀಗಾಗಿ ಪ್ರವಾಹದ ಜೊತೆಗಿರುವ ಕಾಂಗ್ರೆಸ್‌ನ ಅಜಾದ್‌ ಅವರೇ ಬೆಳೆಸಿದ ಯುವ ನಾಯಕರು ಗುಲಾಂ ನಬಿ ಅವರನ್ನು ಬಹಿರಂಗವಾಗಿ ಬಯ್ಯುತ್ತಿದ್ದಾರೆ.

ಹೀಗಾಗಿ ಏಕಾಂಗಿ ಆಗಿರುವ ಗುಲಾಂ ನಬಿ 40 ವರ್ಷದ ತನ್ನ ಕಾಂಗ್ರೆಸ್‌ ಜೀವನದ ಬಗ್ಗೆ ಪುಸ್ತಕ ಬರೆಯಲು ಹೊರಟಿದ್ದಾರೆ. ಇಂದಿರಾ, ಸಂಜಯ್‌, ರಾಜೀವ್‌ ಮತ್ತು ಸೋನಿಯಾ ಗಾಂಧಿ​ ಜೊತೆ ಚೆನ್ನಾಗಿದ್ದ ಗುಲಾಂ ನಬಿ ಅವರನ್ನು ಕಂಡರೆ ರಾಹುಲ್‌ಗೆ ಆಗೋಲ್ಲ. ಈಗಂತೂ ರಾಜ್ಯಸಭಾ ವಿರೋಧ​ ಪಕ್ಷದ ನಾಯಕನ ಸ್ಥಾನದಿಂದ ಕೂಡ ಗುಲಾಂ ನಬಿ ಅವರನ್ನು ಕಾಂಗ್ರೆಸ್‌ ಕೆಳಗಿಳಿಸುತ್ತಿದೆ. ಮೋದಿ ಇರಲಿ, ಗಾಂಧಿ​ಗಳಿರಲಿ, ಲಾಲು, ಸ್ಟಾಲಿನ್‌, ಠಾಕ್ರೆ, ಪಟ್ನಾಯಕ್‌, ಮಮತಾ, ಕೇಜ್ರಿವಾಲ್‌ ಹೀಗೆ ಯಾವೊಬ್ಬ ನಾಯಕನ ವಿರುದ್ಧ ಮಾತನಾಡಿದರೂ ಹಾಗೆ ಮಾತನಾಡಿದವರಿಗೆ ಉಳಿಗಾಲವಿಲ್ಲ.

ಬಿಹಾರದಲ್ಲಿ ಬಿಜೆಪಿ ಲೆಕ್ಕಾಚಾರ ವರ್ಕೌಟ್ ಆಗುತ್ತಾ?

ಸಿಂಧಿಯಾ ಕಾ ಉಡುಗೊರೆ

ಗ್ವಾಲಿಯರ್‌ನ ‘ಮಹಾರಾಜ’ ಜ್ಯೋತಿರಾದಿತ್ಯ ಸಿಂಧಿಯಾರನ್ನು ಬಿಜೆಪಿಗೆ ತಂದು ಮಧ್ಯಪ್ರದೇಶ ಕಾಂಗ್ರೆಸ್‌ ಸರ್ಕಾರ ಉರುಳಿಸಿದ್ದಕ್ಕಾಗಿ ವಕ್ತಾರ ಸಯ್ಯದ್‌ ಜಫರ್‌ ಇಸ್ಲಾಂಗೆ ಬಿಜೆಪಿ ರಾಜ್ಯಸಭಾ ಸ್ಥಾನದ ಉಡುಗೊರೆ ನೀಡಿದೆ. ಮುಂಬೈನಲ್ಲಿ ಬ್ಯಾಂಕರ್‌ ಆಗಿದ್ದ ಜಫರ್‌ ಮತ್ತು ಜ್ಯೋತಿರಾದಿತ್ಯ ಶಾಲಾ ದಿನಗಳಿಂದ ಚಿರಪರಿಚಿತರು. ಬಿಜೆಪಿ ಸೇರುವುದಕ್ಕಿಂತ ಮುಂಚೆ ಜಫರ್‌ ಇಸ್ಲಾಂ ಕಾಂಗ್ರೆಸ್‌ನ ಅಜಯ್‌ ಮಾಕನ್‌ ಮತ್ತು ದಿಗ್ವಿಜಯ ಸಿಂಗ್‌ ಜೊತೆ ಚುನಾವಣಾ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್‌ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ