Asianet Suvarna News Asianet Suvarna News

ಎಲೆಕ್ಷನ್‌ಗೆ ಸಿದ್ಧರಾಗಿ: ಲೋಕಸಭೆ ಚುನಾವಣೆಗೆ ಈಗಲೇ ಪ್ರಧಾನಿ ರಣಕಹಳೆ

ದಿಲ್ಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಯಶಸ್ವಿ ತರೆ, ಯವಸಮೂಹ, ಸಮಾಜದ ಎಲ್ಲಾ ವರ್ಗಗಳನ್ನು ತಲುಪುವ ಯತ್ನ ಮಾಡಿ, ‘ಅಮೃತ ಕಾಲ’ವನ್ನು ‘ಕರ್ತವ್ಯದ ಕಾಲ’ವಾಗಿ ಬದಲಾಯಿಸಿ ಅಭಿವೃದ್ಧಿ ಮಾಡಿ: ನರೇಂದ್ರ ಮೋದಿ. 

Get Ready for Elections Says PM Narendra Modi grg
Author
First Published Jan 18, 2023, 3:00 AM IST

ನವದೆಹಲಿ(ಜ.18):  2024ರ ಲೋಕಸಭಾ ಚುನಾವಣೆಗೆ ಬಿಜೆಪಿಯ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನು ಕೇವಲ 400 ದಿನ ಮಾತ್ರವೇ ಬಾಕಿ ಇದೆ. ಮತದಾರರನ್ನು ತಲುಪಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಇನ್ನಷ್ಟು ಶ್ರಮ ಪಡಬೇಕು. ಉಳಿದ ಸಮಯದಲ್ಲಿ ನಾವು ಮತದಾರರಿಗೆ ಸಾಧ್ಯವಿರುವ ಎಲ್ಲಾ ಸೇವೆ ಮಾಡಬೇಕು, ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಬೇಕು ಎಂದು ಕರೆ ಕೊಟ್ಟಿದ್ದಾರೆ.

ಇಲ್ಲಿ ಮಂಗಳವಾರ ಮುಕ್ತಾಯಗೊಂಡ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಗಡಿ ಭಾಗ ಸೇರಿದಂತೆ ಗ್ರಾಮಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಪಕ್ಷ ಹೆಚ್ಚು ಗಮನ ಕೊಡಬೇಕು. ಪಕ್ಷದ ನಾಯಕರು, ಸಮಾಜದ ಎಲ್ಲಾ ವರ್ಗಗಳ ಜನರನ್ನು ತಲುಪಬೇಕು. ಬಿಜೆಪಿ ಇದೀಗ ಕೇವಲ ರಾಜಕೀಯ ಆಂದೋಲನವಾಗಿ ಉಳಿದಿಲ್ಲ, ಬದಲಾಗಿ ಜನರ ಆರ್ಥಿಕ-ಸಾಮಾಜಿಕ ಕಲ್ಯಾಣದ ಗುರಿಯೊಂದಿಗೆ ಸಾಮಾಜಿಕ ಆಂದೋಲನವಾಗಿ ಬದಲಾಗಿದೆ. ನಾವೀಗ ‘ಅಮೃತ ಕಾಲ’ದಲ್ಲಿ ಇದ್ದೇವೆ. ಅದನ್ನು ‘ಕರ್ತವ್ಯ ಕಾಲ’ಕ್ಕೆ ಕೊಂಡೊಯ್ದಾಗ ಮಾತ್ರವೇ ಅಭಿವೃದ್ಧಿಯಲ್ಲಿ ಹೊಸ ಶಖೆ ಬರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖವಾಗಬೇಕು’ ಎಂದು ಕರೆಕೊಟ್ಟರು.

ಬಿಎಸ್‌ವೈ ಜತೆ ಮೋದಿ ಮಾತುಕತೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೀತಾ ಚರ್ಚೆ..?

ಇದೇ ವೇಳೆ ‘ಈ ಬಾರಿ 18-25ರ ವಯೋಮಾನದ ಯುವಸಮೂಹದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಕಾರಣ, ಅವರಿಗೆ ಇತಿಹಾಸದ ಹೆಚ್ಚಿನ ಅರಿವು, ಹಿಂದಿನ ಸರ್ಕಾರಗಳ ದುರಾಡಳಿತ ಹಾಗೂ ನಾವು ಉತ್ತಮ ಆಡಳಿತದ ಕಡೆಗೆ ಹೇಗೆ ಹೆಜ್ಜೆ ಹಾಕುತ್ತಿದ್ದೇವೆ ಎಂಬುದರ ಅರಿವು ಇರುವುದಿಲ್ಲ. ಹೀಗಾಗಿ ಅವರಿಗೆ ನಾವು ಈ ವಿಷಯದ ಅರಿವು ಮೂಡಿಸಿ, ಉತ್ತಮ ಆಡಳಿತಕ್ಕಾಗಿ ಪ್ರಜಾಸತಾತ್ಮಕವಾಗಿ ಮಾರ್ಗದಲ್ಲಿ ಹೇಗೆ ಹೊಸ ಆಡಳಿತ ಭಾಗವಾಗಬಹುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅಷ್ಟುಮಾತ್ರವಲ್ಲ, ಚುನಾವಣಾ ದೃಷ್ಟಿಕೋನವನ್ನು ಬದಿಗೊತ್ತಿ ಅಲ್ಪಸಂಖ್ಯಾತ ಬೋಹ್ರಾ, ಪಸ್ಮಂದಾ ಮತ್ತು ಸಿಖ್‌ ಸಮುದಾಯವನ್ನು ತಲುಪುವ ಯತ್ನ ಮಾಡಬೇಕು’ ಎಂದು ಕರೆಕೊಟ್ಟರು. 2 ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ಹಿರಿಯ ನಾಯಕರು, ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸೇರಿ 350ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.

Follow Us:
Download App:
  • android
  • ios