Asianet Suvarna News Asianet Suvarna News

ಕರ್ನಾಟಕದ ಮತ್ತೋರ್ವ ಬಿಜೆಪಿ ಶಾಸಕನಿಗೆ ಕೊರೋನಾ ದೃಢ: ಕಚೇರಿ, ಮನೆ ಸೀಲ್‌ಡೌನ್

ಸಾಮಾನ್ಯ ಜನರಿಗೆ ವಕ್ಕರಿಸಿಕೊಳ್ಳುತ್ತಿದ್ದ ಕೊರೋನಾ ಇದೀಗ ಜನಪ್ರತಿನಿಧಿಗಳಿಗೆ ಅಟ್ಯಾಕ್ ಆಗುತ್ತಿದ್ದು, ಇಂದು (ಭಾನುವಾರ) ಬಿಜೆಪಿ ಶಾಸಕರೊಬ್ಬರಿಗೆ ಕೊರೋನಾ ದೃಢಪಟ್ಟಿದೆ.

gangavathi BJP MLA Paranna Munavalli Tests positive for coronavirus
Author
Bengaluru, First Published Jul 19, 2020, 6:43 PM IST
  • Facebook
  • Twitter
  • Whatsapp

ಕೊಪ್ಪಳ, (ಜುಲೈ.19): ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ.

ಇಂದು.(ಭಾನುವಾರ) ಮಧ್ಯಾಹ್ನ  ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಸೋಂಕು ತಾಗಿರುವ ತಿಳಿದಿದೆ. ಆದ್ರೆ,  ಅವರಿಗೆ ಸೊಂಕು ಹೇಗೆ ತಗುಲಿತು ಮತ್ತು ಅವರ ಪ್ರಾಥಮಿಕ ಸಂರ್ಪಕದಲ್ಲಿ ಯಾರ್ಯಾರು ಇದ್ದರು ಎಂದು ಇನ್ನೂ ತಿಳಿದು ಬಂದಿಲ್ಲ.  

ಕೊರೋನಾ ವೈರಸ್‌ಗೆ ತುತ್ತಾದ ಕರ್ನಾಟಕದ ಪ್ರಮುಖ ರಾಜಕಾರಣಿಗಳಿವರು

ಕಳೆದ ದಿನಗಳಿಂದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪ್ರತಿ ದಿನ ಹಲವಾರು ಕಾರ್ಯಕರ್ತರನ್ನ ಭೇಟಿ ಮಾಡಿದ್ದು, ಅವರಿಗೆಲ್ಲ ಇದೀಗ ಆತಂಕ ಶುರುವಾಗಿದೆ.

ಇನ್ನು  ಶಾಸಕ ಪರಣ್ಣ ಮುನವಳ್ಳಿ ಗೆ ಕೋವಿಡ್ ಸೋಂಕು ತಾಗಿರುವ ಕಾರಣ ಶಾಸಕರ ಗನ್ ಮ್ಯಾನ್, ವಾಹನ ಚಾಲಕ ಸೇರಿ ಸಂಪರ್ಕಿತರ ಗಂಟಲು ದ್ರವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ನಿಗದಿತ ಸಮಯದ ವರೆಗೆ ಶಾಸಕರ ನಿವಾಸದ ಕಚೇರಿ ಮತ್ತು ತಾ.ಪಂ.ನಲ್ಲಿರುವ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

Follow Us:
Download App:
  • android
  • ios