ರಾಯಚೂರು: ಕಾಂಗ್ರೆಸ್ ಸೇರಿದ 2 ತಿಂಗಳಲ್ಲೇ ಸಂಸದರಾದ ನಿವೃತ್ತ ಐಎಎಸ್ ಅಧಿಕಾರಿ..!

ಕಾಂಗ್ರೆಸ್ ಸೇರ್ಪಡೆ ಆದ ಕೆಲವೇ ದಿನಗಳಲ್ಲಿ ‌ಕಾಂಗ್ರೆಸ್ ನಿಂದ ರಾಯಚೂರು ‌ಲೋಕಸಭಾ ಕ್ಷೇತ್ರದ ಟಿಕೆಟ್ ಸಹ ಘೋಷಣೆ ಮಾಡಿದ್ರು. ಐಎಎಸ್ ಅಧಿಕಾರಿಯಾಗಿ ಮೆರೆದ ಜಿ.ಕುಮಾರ ‌ನಾಯಕ ಅವರಿಗೆ ಆರಂಭದಲ್ಲಿ ಸ್ವಲ್ಪ ಮುಜುಗರಗೊಂಡರು. ಆದ್ರೆ ಆಸಕ್ತಿ ಇದ್ರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಜಿ.ಕುಮಾರ ನಾಯಕ ಅವರೇ ಸಾಕ್ಷಿ. ಆ ಸಾಕ್ಷಿಯ ಫಲವೇ ಲೋಕಸಭಾ ಫಲಿತಾಂಶ ಅಂದ್ರೆ ತಪ್ಪಾಗಲಾರದು.

G Kumar Naik Elected As New MP of Raichur Lok Sabha Constituency grg

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್,  ರಾಯಚೂರು

ರಾಯಚೂರು(ಜೂ.05):  ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ‌ನಾಯಕಗೆ ಸೋಲಿಸಿ ಮೊಟ್ಟ ಮೊದಲ ಬಾರಿಗೆ ಐಎಎಸ್ ನಿವೃತ್ತ ಅಧಿಕಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ‌ನಾಯಕ, ತಮ್ಮ ನಿವೃತ್ತಿ ಬಳಿಕ ರಾಜಕೀಯ ಪ್ರವೇಶ ‌ಮಾಡಬೇಕು ಎಂದು ಚಿಂತನೆ ಮಾಡಿ ಕಳೆದ ಎರಡು ತಿಂಗಳ ಹಿಂದೆ ಅಷ್ಟೇ ಕಾಂಗ್ರೆಸ್ ಸೇರ್ಪಡೆಯಾದ್ರು. ಕಾಂಗ್ರೆಸ್ ಗೆ ಬಂದ ನಿವೃತ್ತ ಐಎಎಸ್ ಅಧಿಕಾರಿಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಭವ್ಯ ಸ್ವಾಗತ ನೀಡಿದ್ರು. 

ಕಾಂಗ್ರೆಸ್ ಸೇರ್ಪಡೆ ಆದ ಕೆಲವೇ ದಿನಗಳಲ್ಲಿ ‌ಕಾಂಗ್ರೆಸ್ ನಿಂದ ರಾಯಚೂರು ‌ಲೋಕಸಭಾ ಕ್ಷೇತ್ರದ ಟಿಕೆಟ್ ಸಹ ಘೋಷಣೆ ಮಾಡಿದ್ರು. ಐಎಎಸ್ ಅಧಿಕಾರಿಯಾಗಿ ಮೆರೆದ ಜಿ.ಕುಮಾರ ‌ನಾಯಕ ಅವರಿಗೆ ಆರಂಭದಲ್ಲಿ ಸ್ವಲ್ಪ ಮುಜುಗರಗೊಂಡರು. ಆದ್ರೆ ಆಸಕ್ತಿ ಇದ್ರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಜಿ.ಕುಮಾರ ನಾಯಕ ಅವರೇ ಸಾಕ್ಷಿ. ಆ ಸಾಕ್ಷಿಯ ಫಲವೇ ಲೋಕಸಭಾ ಫಲಿತಾಂಶ ಅಂದ್ರೆ ತಪ್ಪಾಗಲಾರದು.

ಧಾರವಾಡದಲ್ಲಿ ದಾಖಲೆಯ 5ನೇ ಗೆಲುವು ಸಾಧಿಸಿದ ಜೋಶಿ..!

ಕರ್ಮ ಭೂಮಿಯಲ್ಲಿಯೇ ರಾಜಕೀಯ ಪ್ರವೇಶ ಮಾಡಿದ ಜಿ.ಕುಮಾರ ‌ನಾಯಕ

ರಾಯಚೂರು ಜಿಲ್ಲೆಗೆ ಬರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಜಿಲ್ಲೆಯಲ್ಲಿ ಇರುವ ಹೊಂದಾಣಿಕೆ ರಾಜಕೀಯದಿಂದ ಬೇಸತ್ತು. ಯಾವಾಗ ರಾಯಚೂರು ಬಿಟ್ಟು ಹೊರಗೆ ಹೋಗುತ್ತಿವ೩ ಎಂದು ಗೋಳಾಡುವುದು ಸಾಮಾನ್ಯ. ಆದ್ರೆ ಇಂತಹ ಹೊಂದಾಣಿಕೆ ರಾಜಕೀಯ ವ್ಯವಸ್ಥೆಯಲ್ಲಿ ಜಿ.ಕುಮಾರ ನಾಯಕ ಅವರು ಮೂರು ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅಲ್ಲದೇ ಕೆಪಿಟಿಸಿಎಲ್ ಎಂಡಿಯಾಗಿ, ರಾಯಚೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಆಗಿ ಹೀಗೆ ಸುಮಾರು 12-13 ವರ್ಷಗಳ ‌ಕಾಲ ರಾಯಚೂರು ಜಿಲ್ಲೆಗೆ ಸಂಬಂಧಿಸಿದ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಜಿ.ಕುಮಾರ ನಾಯಕಗೆ ಇತ್ತು. ಕಳೆದ ಆರು ತಿಂಗಳ ಹಿಂದೆ ಅಷ್ಟೇ ‌ಐಎಎಸ್ ನಿಂದ ಜಿ.ಕುಮಾರ ನಾಯಕ ನಿವೃತ್ತಿ ಹೊಂದಿದ್ರು. ನಿವೃತ್ತಿ ಬಳಿಕ ಸರ್ಕಾರದಲ್ಲಿ ಬೇರೆ ಹುದ್ದೆಗಳಿಗೆ ಆಹ್ವಾನ ಸಹ ಇತ್ತು. ಆದ್ರೆ ಅದು ಎಲ್ಲವೂ ಬಿಟ್ಟು ‌ಸ್ವ ಆಸಕ್ತಿಯಿಂದ ಕಾಂಗ್ರೆಸ್ ಸೇರ್ಪಡೆ ಆಗಿ ರಾಜಕೀಯ ಪ್ರವೇಶ ಮಾಡಿದ್ರು. ಯಾವ ಜಿಲ್ಲೆಯಲ್ಲಿ ‌ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ರೂ ಅದೇ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಪಡೆದು ಜಿ.ಕುಮಾರ ನಾಯಕ ಸ್ಪರ್ಧೆ ಮಾಡಿ ಈಗ ಜಯಗಳಿಸಿದ್ದಾರೆ.

ಕಾಂಗ್ರೆಸ್ ಸೇರಿ 2 ತಿಂಗಳಲ್ಲಿಯೇ ಸಂಸದರಾದ ನಿವೃತ್ತ ಐಎಎಸ್ ಅಧಿಕಾರಿ

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಚರ್ಚೆ ಕ್ಷೇತ್ರದಲ್ಲಿ ಶುರುವಾಗಿತ್ತು‌. ಇಂತಹ ವೇಳೆಯಲ್ಲಿ ಯಾವುದೇ ಸದ್ದುಗದ್ದವಿಲ್ಲದೆ ನಿಧಾನವಾಗಿ ನಿವೃತ್ತ ಐಎಎಸ್ ಅಧಿಕಾರಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದರು. ಆ ವೇಳೆಯಲ್ಲಿ ಯಾರು ಕೂಡ ಜಿ. ಕುಮಾರ್ ನಾಯಕ ಲೋಕಸಭೆ ಚುನಾವಣೆ ಸ್ಪರ್ಧೆ ಮಾಡುತ್ತಾರೆ ಎಂದು ಭಾವಿಸಿರಲಿಲ್ಲ.‌ ಆದ್ರೆ ಜಿ. ಕುಮಾರ ನಾಯಕ ಗಟ್ಟಿಯಾಗಿ ಕ್ಷೇತ್ರದಲ್ಲಿ ಸುತ್ತಾಟ ಕಾಂಗ್ರೆಸ್ ಸೇರ್ಪಡೆಯಾಗಿದ್ರು. ಆಗ ಕಾಂಗ್ರೆಸ್ ವಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ‌ನಾಯಕ ಎಂಬುದು ಅಧಿಕೃತವಾಯ್ತು. ಮೂಲತಃ ಬೆಂಗಳೂರಿನಲ್ಲಿ ನೆಲೆಸಿರುವ ಜಿ.ಕುಮಾರ ‌ನಾಯಕ ಐಎಎಸ್ ಅಧಿಕಾರಿ ಆಗಿದ ವೇಳೆ ರಾಯಚೂರಿನಲ್ಲಿ ಸಭೆ- ಸಮಾರಂಭ ಇದ್ದಾಗ ಹೈದರಾಬಾದ್ ವರೆಗೆ ವಿಮಾನದಲ್ಲಿ ಪ್ರಯಾಣ ಮಾಡಿ, ಹೈದರಾಬಾದ್ ನಿಂದ ಕಾರಿನಲ್ಲಿ ರಾಯಚೂರಿಗೆ ಬರುತ್ತಿದ್ರು. ಅಷ್ಟು ಐಷಾರಾಮಿ ಜೀವನ ಅನುಭವಿಸಿದ ಜಿ.ಕುಮಾರ ‌ನಾಯಕ, ಎಲ್ಲವೂ ಬಿಟ್ಟು ಊರಿ ಬಿಸಿಲಿನಲ್ಲಿ ಇಡೀ ಕ್ಷೇತ್ರ ಸುತ್ತಾಟ ಮಾಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಂಡರು. ಅವರ ಜೊತೆಗೆ ಲೋಕಸಭಾ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ಸಹ ಈ ಲೋಕಸಭಾ ಚುನಾವಣೆ ಪ್ರತಿಷ್ಠೆಯಾಗಿ ಪರಿಗಣಿಸಿ ನಿವೃತ್ತ ಐಎಎಸ್ ಅಧಿಕಾರಿಗೆ ಸಂಸದರಾಗಿ ಆಯ್ಕೆ ಮಾಡಿದ್ದಾರೆ.

ಹತ್ತಾರು ಆರೋಪಗಳ ನಡುವೆಗಳ ನಡುವೆ ಗೆದ್ದ ಜಿ.ಕುಮಾರ ‌ನಾಯಕ

ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ‌ನಾಯಕ ಸ್ಥಳೀಯರು, ಆದ್ರೆ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ‌ನಾಯಕ ಹೊರಗಿನವರು, ಜಿಲ್ಲಾಧಿಕಾರಿ ಆಗಿದ್ದ ವೇಳೆ ಜಿಲ್ಲೆ ಲೂಟಿ ಮಾಡಿದವರು. ರಾಯಚೂರಿನ ಬಿಸಿಲು ಹೆಚ್ಚಳಕ್ಕೆ ಜಿ.ಕುಮಾರ ‌ನಾಯಕ ಕಾರಣವೆಂದು ಹೀಗೆ ಹತ್ತಾರು ಆರೋಪಗಳು ಜಿ.ಕುಮಾರ ‌ನಾಯಕ ವಿರುದ್ಧ ಕೇಳಿಬಂದವು. ಆದ್ರೆ ಜಿ.ಕುಮಾರ ‌ನಾಯಕ ಮಾತ್ರ ಯಾವ ಆರೋಪಗಳಿಗೂ ತಲೆಕೆಡಿಸಿಕೊಳ್ಳದೇ ತಾವು ಆಯ್ತು..ತಮ್ಮ ಪ್ರಚಾರ ಆಯ್ತು ಅಂತ ಕ್ಷೇತ್ರ ಸುತ್ತಾಟ ಮಾಡುತ್ತಾ ಮತದಾರರ ಮನ ಸೆಳೆದು ಜಯಭೇರಿ ಬಾರಿಸಿದ್ದಾರೆ.

ಬಣ ರಾಜಕೀಯ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ ಅಪ್ಪ- ಮಗ

ರಾಯಚೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ತುಂಬಾ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ತಾಂಡವಾಡುತ್ತಿದೆ. ಈ ಬಣ ರಾಜಕೀಯ ಶಮನ ಮಾಡಲು ಆಗದೇ ಕಾಂಗ್ರೆಸ್ ಹೈಕಮಾಂಡ್ ಸಹ ಸುಮ್ಮನೇ ಆಗಿದೆ. ಆದ್ರೂ ಇಂತಹ ಬಣ ರಾಜಕೀಯ ‌ನಡುವೆಯೂ ಸಚಿವ ಎನ್.ಎಸ್. ಬೋಸರಾಜು ಮತ್ತು ಅವರ ಮಗ ರವಿ ಬೋಸರಾಜು ಜಿ.ಕುಮಾರ ನಾಯಕ ಬೆಂಬಲಕ್ಕೆ ‌ನಿಂತು ಇಡೀ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಮಾಡಿದ್ರು. ಅದರ ಫಲವಾಗಿ ಜಿ.ಕುಮಾರ ‌ನಾಯಕ 79,781ಕ್ಕೂ ಅಧಿಕ ಮತಗಳಿಂದ ‌ಜಯಗಳಿಸಲು ಸಾಧ್ಯವಾಯ್ತು. 

ಕೈ ನಾಯಕರಿಗೆ ಸವಾಲ್ ಆಗಿದ್ದ ಲೋಕಸಭಾ ಕ್ಷೇತ್ರದ ಗೆಲುವು

ರಾಯಚೂರು ‌ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ‌ಮನೆವೊಂದು ಮೂರು ಬಾಗಿಲು ‌ಆಗಿದೆ. ಆದ್ರೆ ಇಂತಹ ಮನೆವೊಂದು ಮೂರು ಬಾಗಿಲು ಆಗಿದ್ರೂ, ಹೈಕಮಾಂಡ್ ಎಲ್ಲರಿಗೂ ಖಡಕ್ ವಾರ್ನಿಂಗ್ ನೀಡಿ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು. ಯಾವುದೇ ಬಣ ರಾಜಕೀಯ ಇದ್ರೂ ಅದು ಚುನಾವಣೆಯಲ್ಲಿ ಮಾಡಬೇಡಿ ಎಂದು ಸಂದೇಶ ರವಾನಿಸಿತ್ತು. ಅದರ ಫಲವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ  ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆ ಸೋತ ಅಭ್ಯರ್ಥಿಗಳು ತಾವೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂಬಂತೆ ಓಡಾಟ ‌ಮಾಡಿ ಜಿ.ಕುಮಾರ ‌ನಾಯಕ ಗೆಲುವಿಗೆ ಶ್ರಮಿಸಿದರು. ಹೀಗಾಗಿ 8 ವಿಧಾನಸಭಾ ಕ್ಷೇತ್ರದ ಪೈಕಿ 7 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ.

ಜಿ.ಕುಮಾರ್ ‌ನಾಯಕ ಕೈ ಹಿಡಿದ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿ ಅದು ಜಾರಿಗೆ ತಂದಿದೆ. ಆ ಗ್ಯಾರಂಟಿ ಲಾಭ ಪಡೆಯುತ್ತಿರುವ ಮತದಾರರು ತಮ್ಮ ಮತವನ್ನ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಮೂಲ ಕಾರಣವಾಗಿದೆ. ಅಲ್ಲದೇ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತ್ತಷ್ಟು ಗ್ಯಾರಂಟಿ ಯೋಜನೆಗಳು ಸಿಗಬಹುದು ಎಂಬ ಆಶಾ ಮನೋಭಾವದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಜನರು ‌ಮತ ನೀಡಿರುವುದು ‌ಇಲ್ಲಿ ಕಂಡು ಬರುತ್ತಿದೆ. 

ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತ ಪಡೆದ ಜಿ.ಕುಮಾರ ನಾಯಕ

ರಾಯಚೂರು ‌ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 8 ವಿಧಾನಸಭಾ ಕ್ಷೇತ್ರದ ‌ಪೈಕಿ 5 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಳೆದ ಚುನಾವಣೆಯಲ್ಲಿ ಜಯಗಳಿಸಿ ಶಾಸಕರು ಆಗಿದ್ದಾರೆ. ಇಂತಹ ವೇಳೆಯಲ್ಲಿ ಲೋಕಸಭಾ ಚುನಾವಣೆ ಬಂದಿದ್ದು, ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ ಅಭ್ಯರ್ಥಿ ಗೆಲುವಿಗೆ ಇದು ಸಹಕಾರಿ ಆಗಿದೆ. ಇನ್ನೂ ವಿಧಾನಸಭಾ ‌ಕ್ಷೇತ್ರವಾರು ನೋಡುವುದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಅಂಚೆ ಮತಗಳು 5019 ಇದ್ರೆ, 12,95,635 ಮತಗಳು ಜನರು ತಮ್ಮ ಹಕ್ಕು ಚಲಾವಣೆ ಮಾಡಿದ್ರು‌. ಹೀಗಾಗಿ ಒಟ್ಟು 13 ಲಕ್ಷದ 665 ಮತಗಳು ಚಲಾವಣೆ ಆಗಿದ್ದವು, ಅವುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ‌ನಾಯಕ 6,70,966 ಮತಗಳು ಪಡೆದು ಜಯಭೇರಿ ಬಾರಿಸಿದರು. ಇನ್ನೂ ಬಿಜೆಪಿಯಿಂದ ಸ್ಪರ್ಧೆ ಮಾಡಿದ ರಾಜಾ ಅಮರೇಶ್ವರ ‌ನಾಯಕ ಸಹ 5,91,185 ಮತಗಳು ಗಳಿಸಿದ್ದಾರೆ. 8 ವಿಧಾನಸಭಾ ಕ್ಷೇತ್ರದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ‌ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ‌ನಾಯಕ 78,272 ಮತಗಳು ಪಡೆದರೆ ಬಿಜೆಪಿ ‌ಅಭ್ಯರ್ಥಿ ರಾಜಾ ಅಮರೇಶ್ವರ ‌ನಾಯಕ 83,233 ಮತಗಳು ಪಡೆದ 4961 ಮತಗಳು ಮುನ್ನಡೆ ಸಾಧಿಸಿದೆ. ಅದು ಬಿಟ್ಟರೆ ಇನ್ನುಳಿದ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಕ್ಕಿದೆ. ರಾಯಚೂರು ನಗರದಲ್ಲಿ ಕಾಂಗ್ರೆಸ್  78,844 ಮತಗಳು ಗಳಿಸಿದ್ರೆ,ಬಿಜೆಪಿ 69,595 ಮತಗಳು ಪಡೆದುಕೊಂಡಿದೆ.9249 ಕಾಂಗ್ರೆಸ್ ಗೆ ಲೀಡ್ ಸಿಕ್ಕಿದೆ. ಇನ್ನೂ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ 76,641 ಮತಗಳು ಬಂದ್ರೆ  ಬಿಜೆಪಿಗೆ 72,979 ಮತಗಳು ದಕ್ಕಿವೆ. ಸುಮಾರು ‌3,662 ಕಾಂಗ್ರೆಸ್ ಲೀಡ್ ಆಗಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ‌ಹೀನಾಯ ಸೋಲು ಆಗಿತ್ತು. ಆದ್ರೆ ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಗೆ  80,923 ಮತಗಳು ಬಂದಿವೆ, ಅಲ್ಲಿ ಬಿಜೆಪಿಗೆ 58,584, ಇಡೀ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಲೀಡ್ ಅಂದರೆ 22,339  ದೇವದುರ್ಗ ಕ್ಷೇತ್ರದಲ್ಲಿ ‌ಕಾಂಗ್ರೆಸ್ ಗೆ ಸಿಕ್ಕಿದೆ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ 88,515 ಮತಗಳು ಪಡೆದರೆ, ಬಿಜೆಪಿ 70,091 ಮತ ಗಳಿಸಿದೆ.ಸುಮಾರು 18,424 ಕಾಂಗ್ರೆಸ್ ಗೆ ಲೀಡ್ ಆಗಿದೆ. ಯಾದಗಿರಿ ಜಿಲ್ಲೆಯ ‌ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಲೀಡ್ ‌ಆಗಿದೆ.

ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 75,705 ಮತಗಳು ಬಂದ್ರೆ ಬಿಜೆಪಿಗೆ 69,983 ಮತಗಳು ದಕ್ಕಿವೆ. ಕಾಂಗ್ರೆಸ್ ಗೆ 5722 ಲೀಡ್ ಆಗಿದೆ. ಇನ್ನೂ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ
ಕಾಂಗ್ರೆಸ್ ಗೆ 78,050 ಸಿಕ್ಕರೆ  ಬಿಜೆಪಿಗೆ 68,465 ಮತಗಳು ಬಂದಿವೆ. 9585 ಕಾಂಗ್ರೆಸ್ ಲೀಡ್ ಆಗಿದೆ. ಇತ್ತ ಸುರುಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡುವೆಯೂ ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಬಹುಮತ ಗಳಿಸಿದೆ. ಕಾಂಗ್ರೆಸ್ ಗೆ 1,12,463 ಬಂದ್ರೆ ಬಿಜೆಪಿಗೆ 95,903 ಮತಗಳು ಮಾತ್ರ ಸಿಕ್ಕಿವೆ.16,560 ಕಾಂಗ್ರೆಸ್ ಗೆ ಲೀಡ್ ಆಗಿದೆ.

ಜಗದೀಶ್‌ ಶೆಟ್ಟರ್‌ಗೆ ರಾಜಕೀಯ ಮರುಜನ್ಮ ನೀಡಿದ ಬೆಳಗಾವಿ..!

ಒಟ್ಟಾರೆ ರಾಯಚೂರು ‌ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್  6,70,966 ಮತಗಳು ಪಡೆದು 79,781 ಅಂತರದಿಂದ ಭರ್ಜರಿ ‌ಜಯಗಳಿಸಿದ್ದಾರೆ.

ಸಾಕಷ್ಟು ನಿರೀಕ್ಷೆ ಇಟ್ಟು ಜಿ.ಕುಮಾರ ‌ನಾಯಕಗೆ ಗೆಲ್ಲಿಸಿದ ರಾಯಚೂರು ಕ್ಷೇತ್ರದ ‌ಜನತೆ

ಕಾಂಗ್ರೆಸ್ ನ ಗ್ಯಾರಂಟಿ ಒಂದು ಕಡೆ ಆಗಿದ್ರೆ, ರಾಯಚೂರಿನ ಜನರು ಜಿ.ಕುಮಾರ ‌ನಾಯಕ ಬಗ್ಗೆ ‌ಸಾಕಷ್ಟು ನಿರೀಕ್ಷೆ ‌ಇಟ್ಟುಕೊಂಡಿದ್ದಾರೆ. ಜಿ.ಕುಮಾರ್ ‌ನಾಯಕ ಒಬ್ಬ ನಿವೃತ್ತ ‌ಐಎಎಸ್ ಅಧಿಕಾರಿ, ಹಿಂದೂಳಿದ ರಾಯಚೂರು ಲೋಕಸಭಾ ಕ್ಷೇತ್ರ ಅಭಿವೃದ್ಧಿಗೆ ಅವರ ಕೊಡುಗೆ ಇರುತ್ತೆ.ಕ್ಷೇತ್ರದಲ್ಲಿ ಹತ್ತಾರು ರೀತಿಯ ಜಲ್ವಂತ ಸಮಸ್ಯೆಗಳು ಇವೆ. ಆ ಸಮಸ್ಯೆಗಳ ಮುಕ್ತಿಗಾಗಿ ಜಿ.ಕುಮಾರ ‌ನಾಯಕ ಶ್ರಮವಹಿಸುತ್ತಾರೆ ಎಂಬ ಭರವಸೆಯೊಂದಿಗೆ ಜಿ.ಕುಮಾರ ‌ನಾಯಕ ಬಗ್ಗೆ ಹತ್ತಾರು ಆಪಾದನೆಗಳು ಬಂದ್ರೂ ಸಹ ಮತದಾರರು ಗಟ್ಟಿ ಮನಸ್ಸು ‌ಮಾಡಿ ಒಬ್ಬ ಬುದ್ಧಿವಂತನ್ನ ಲೋಕಸಭೆ ರಾಯಚೂರು ಜನತೆ ಕಳುಹಿಸಿದ್ದಾರೆ. ಅಲ್ಲಿ ಕ್ಷೇತ್ರದ ಸಮಸ್ಯೆಯ ಬಗ್ಗೆ ಜಿ.ಕುಮಾರ ‌ನಾಯಕ ಧ್ವನಿ ಎತ್ತುತ್ತಾರಾ ಅಥವಾ ಹಿಂದಿನ ಸಂಸದರಲ್ಲಿ ಒಬ್ಬರು ‌ಆಗುತ್ತಾರಾ ಕಾದು ನೋಡೋಣ.

Latest Videos
Follow Us:
Download App:
  • android
  • ios