ಹಿಂದೂ ರಾಷ್ಟ್ರಕ್ಕಾಗಿ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಬೇಕು: ಗೋವಾ ಸಿಎಂ ಸಾವಂತ
ಬೆಳಗಾವಿಯಲ್ಲಿ ಡಬಲ್ ಇಂಜಿನ ಸರ್ಕಾರವೇ ಮೇಲುಗೈ ಸಾಧಿಸಲಿದ್ದು, ಭಾರತೀಯ ಜನತಾ ಪಕ್ಷದ ಅಭಿವೃದ್ಧಿ ಕಾರ್ಯಗಳು ಈ ಬಾರಿಯ ಚುನಾವಣೆಯಲ್ಲಿ ಶ್ರೀ ರಕ್ಷೆಯಾಗಲಿವೆ: ಪ್ರಮೋದ ಸಾವಂತ
ಬೆಳಗಾವಿ(ಮೇ.09): ಬೆಳಗಾವಿಯಲ್ಲಿ ಡಬಲ್ ಇಂಜಿನ ಸರ್ಕಾರವೇ ಮೇಲುಗೈ ಸಾಧಿಸಲಿದ್ದು, ಭಾರತೀಯ ಜನತಾ ಪಕ್ಷದ ಅಭಿವೃದ್ಧಿ ಕಾರ್ಯಗಳು ಈ ಬಾರಿಯ ಚುನಾವಣೆಯಲ್ಲಿ ಶ್ರೀ ರಕ್ಷೆಯಾಗಲಿವೆ ಎಂದು ಶಾಹುನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ ಸಾವಂತ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಉತ್ತರದಲ್ಲಿ ಡಾ. ರವಿ ಪಾಟೀಲ ಅವರನ್ನು ಆಯ್ಕೆ ಮಾಡುವಂತೆ ಅವರು ಕರೆ ನೀಡಿದರು .ಈ ಸಂದರ್ಭದಲ್ಲಿ ಮಹಾರಾಷ್ಟ್ರ ಶಾಸಕ ಗಿರೀಶ ಮಹಾಜನ ,ಉಪಮಹಾಪೌರೆ ರೇಷ್ಮಾ ಪಾಟೀಲ್ ,ಭಾಜಪ ಮುಖಂಡ ಕಿರಣ ಜಾಧವ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಬಿಜೆಪಿ ಪರವಾದ ಅಲೆ, ಮತ್ತೆ ಅಧಿಕಾರಕ್ಕೆ ಬರ್ತೇವೆ: ಅರುಣ್ ಸಿಂಗ್
ಬೆಳಗಾವಿಯ ಸದಾಶಿವ ನಗರದ ಲಾಸ್ಟಸ್ಟಾಪ ಪರಿಸರದಲ್ಲಿ ಡಾ.ರವಿ ಪಾಟೀಲ ಅವರು ವಿಧಾನ ಸಭಾ ಚುನಾವಣೆ ಪ್ರಚಾರ ನಡೆಸಿದರು . ಈ ಭಾಗದ ಭಾರತೀಯ ಜನತಾ ಪಾರ್ಟಿಯ ಅಭಿಮಾನಿಗಳು ,ಮತ್ತು ಸಾರ್ವಜನಿಕರು ದೇಶದ ಸುರಕ್ಷತೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿದರು
ಬೆಳಗಾವಿಯ ಗಾಂಧಿ ನಗರದ ಫ್ರುಟ ಮತ್ತು ಫ್ಲಾವರ ಮಾರ್ಕೆಟ್‌ನಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಡಾ.ರವಿ ಪಾಟೀಲ ಅವರು ಪ್ರಚಾರ ಕಾರ್ಯ ಕೈಗೊಂಡರು. ಹೂ ಮತ್ತು ಹಣ್ಣು ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ಕೈಗೊಳ್ಳುವ ಭರವಸೆ ನೀಡಿ ತಮಗೆ ಬಹುಮೂಲ್ಯ ಮತ ನೀಡುವಂತೆ ವಿನಂತಿ ಮಾಡಿದರು.
ಅದೇ ರೀತಿ ನಿನ್ನೆ ಸಂಜೆ ನಗರದ ಚವಾಟಗಲ್ಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಹಿಂದುತ್ವಕ್ಕಾಗಿ, ಹಿಂದು ರಾಷ್ಟ್ರಕ್ಕಾಗಿ ನಾವೆಲ್ಲರೂ ಭಾರತೀಯ ಜನತಾ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಡಾ.ರವಿ ಪಾಟೀಲ ಅವರನ್ನು ವಿಜಯಿಯನ್ನಾಗಿ ಮಾಡುವದು ನಿಶ್ಚಿತ ಎನ್ನುವ ಒಗ್ಗೊರಲಿನ ನಿರ್ಣಯ ಕೈಗೊಳ್ಳಲಾಯಿತು. ಡಾ.ರವಿ ಪಾಟೀಲ ಮತ್ತು ಬೆಂಬಲಿಗರು ಈ ಭಾಗದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡ ಸಂದರ್ಭದಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಅದೇ ರೀತಿ ಯುವಕ ಮಂಡಳಿಗಳ ಪದಾಧಿಕಾರಿಗಳು ಪಟಾಕಿ ಸಿಡಿಸಿ ಸಂಭ್ರಮದ ಸ್ವಾಗತ ಕೋರಿದರು.
ಖಡಕ ಗಲ್ಲಿಯಲ್ಲಿ ಮರಗಾಯಿ ಮಂದಿರದಿಂದ ಮರಗಾಯಿ ದೇವಿಯ ದರ್ಶನ ಪಡೆದು ಪ್ರಚಾರ ಕಾರ್ಯವನ್ನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಡಾ.ರವಿ ಪಾಟೀಲ ಆರಂಭಿಸಿದರು. ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತಗಳ ಅಡಿಯಲ್ಲಿ ಹಿಂದುತ್ವಕ್ಕಾಗಿ ನಾವೆಲ್ಲರೂ ಸದಾ ಒಂದೇ ಎನ್ನುವ ಸ್ವಾಭಿಮಾನದ ಸಂದೇಶವನ್ನು ಪ್ರಚಾರದುದ್ದಕ್ಕೂ ಸ್ಥಳೀಯ ನಾಗರಿಕರು ನೀಡಿದರು.
ಎಲ್ಲೆಡೆಯೂ ಬ್ಯಾನರ್ ಗಳು ,ಮತ್ತು ಡಾ.ರವಿ ಪಾಟೀಲ ಅವರಿಗೆ ಬೆಂಬಲ ಸೂಚಿಸುವ ಅಭಿಮಾನಿಗಳ ಘೋಷಣೆಗಳೊಂದಿಗೆ ಈ ಭಾಗದ ಪ್ರಚಾರ ಕಾರ್ಯದಲ್ಲಿ ಡಾ.ರವಿ ಪಾಟೀಲ ಅವರಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಅದೇ ರೀತಿ ಭಾಜಪ ಅಭ್ಯರ್ಥಿ ಡಾ.ರವಿ ಪಾಟೀಲ ಅವರನ್ನು ಶೆಟ್ಟಿಗಲ್ಲಿಯ ನಾಗರೀಕರು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ಮಹಿಳೆಯರು ಕೈಗಳಲ್ಲಿ ಭಗವಾ ಪೇಟಾ,ಭಗವಾ ಧ್ವಜಗಳೊಂದಿಗೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡರು. ಯುವಕ ಮಂಡಳಿಗಳು ಮತ್ತು ಸ್ಥಳೀಯರು ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಮತ ಎಂದು ಭರವಸೆ ವ್ಯಕ್ತಪಡಿಸಿದರು.
ನಿಪ್ಪಾಣಿಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಗೆಲುವು: ಶಶಿಕಲಾ ಜೊಲ್ಲೆ
ನಗರದ ಕ್ಯಾಂಪ ಪರಿಸರದ ತೆಲುಗು ಕಾಲನಿಯಲ್ಲಿ ಜಯ ದುರ್ಗಾ ಯುವಕ ಮಂಡಳಿ ಪದಾಧಿಕಾರಿಗಳೊಂದಿಗೆ ಭಾರತೀಯ ಜನತಾ ಪಕ್ಷದ ಚುನಾವಣಾ ಸಭೆ ನಡೆಯಿತು. ಸಭೆಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಪಾಲ್ಗೊಂಡು ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಸಂಪೂರ್ಣ ಒತ್ತಾಸೆಯೊಂದಿಗೆ ಡಾ. ರವಿ ಪಾಟೀಲ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಮತ್ತು ಡಬಲ್ ಇಂಜಿನ ಸರ್ಕಾರದ ಜಯಭೇರಿಗೆ ಮತದಾರರೇ ಕಾರಣವಾಗಬೇಕು ಎಂದರು.
ಮೇ 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಲು ಅವರು ಕರೆ ನೀಡಿದರು. ಶಾಸಕ ಅನಿಲ ಬೆನಕೆ ಮತ್ತು ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.