* ನ್ಯಾಷನಲ್ ಹೆರಾಲ್ಡ್ ಪ್ರಕರಣ* ರಾಹುಲ್ ಗಾಂಧಿ ಪರ ರಮ್ಯಾ ಬ್ಯಾಟಿಂಗ್* ಟ್ವೀಟ್ ಮಾಡಿ ಪೇಚೆಗೆ ಸಿಲುಕಿದ ನಟಿ ರಮ್ಯಾ
ಬೆಂಗಳೂರು, (ಜೂನ್.16): ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ದೇಶದ ಆಯಾ ರಾಜ್ಯಗಳ ರಾಜ್ಯಭವನಗಳ ಮುತ್ತಿಗೆಗೂ ಕರೆಕೊಟ್ಟಿತ್ತು.
ಇದರ ಮಧ್ಯೆ, ನಟಿ, ಮಾಜಿ ಸಂಸದೆ ರಮ್ಯಾ ಪ್ರವೇಶಿಸಿದ್ದು. ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಮ್ಯಾ, ರಾಹುಲ್ ಗಾಂಧಿಯವರ ವಿರುದ್ಧ ವಿನಾಕಾರಣ ಸುಳ್ಳು ಆಪಾದನೆ ಹೊರಿಸಲಾಗಿದೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾ ನಿಂದಕರಿಗೆ ಬುದ್ದಿ ಕಲಿಸಲು ಮುಂದಾದ ರಮ್ಯಾ
ನಾನು ರಾಹುಲ್ ಗಾಂಧಿಯವರ ಜತೆ ಅತ್ಯಂತ ಸಮೀಪದಿಂದ ಕೆಲಸ ಮಾಡಿದ್ದೇನೆ. ಅವರನ್ನು ನಾನು ಅತಿ ಹತ್ತಿರದಿಂದ ನೋಡಿದಂತೆ ಅವರು ಎಂದಿಗೂ ಭ್ರಷ್ಟರು ಎಂದು ಎನಿಸಲಿಲ್ಲ. ಅವರು ಭ್ರಷ್ಟರೂ ಅಲ್ಲ, ದುರಾಸೆಯ ವ್ಯಕ್ತಿಯೂ ಅಲ್ಲ. ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಈ ರೀತಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ರಾಹುಲ್ ಗಾಂಧಿಯವರ ಹೆಸರಿಗೆ ಕಳಂಕ ತರಲು ಈ ರೀತಿ ಮಾಡಲಾಗುತ್ತಿದೆ. ವಿನಾಕಾರಣ ಅವರನ್ನು ಈ ಪ್ರಕರಣದಲ್ಲಿ ಎಳೆಯಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಆರೋಪಿಸಿ ಪ್ರಕಟಗೊಂಡಿರುವ ಕೆಲವು ಸುದ್ದಿಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ನಟಿ, ಇವೆಲ್ಲಾ ಶುದ್ಧ ಸುಳ್ಳು ಎಂದಿದ್ದಾರೆ. ರಮ್ಯಾ ಅವರ ಈ ಟ್ವೀಟ್ಗೆ ಟ್ವಿಟ್ಟಿಗರು ಫುಲ್ ಚಾರ್ಜ್ ಮಾಡಿದ್ದಾರೆ.
ಕಾನೂನನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಿ. ರಾಹುಲ್ ಗಾಂಧಿ ಹಾಗೂ ಅವರ ಕುಟುಂಬ ಈ ಪ್ರಕರಣದಲ್ಲಿ ಮಾಡಿರುವ ಅಕ್ರಮಗಳು ಎಷ್ಟು ಎಂಬುದು ತಿಳಿದುಬರುತ್ತದೆ. ಭಾವನಾತ್ಮಕ ಸಂಬಂಧ ಒಂದು ಕಡೆ ಇರಲಿ, ನಿಜವಾಗಿ ಆಗಿರುವುದೇನು ಎಂಬುದನ್ನು ಸರಿಯಾಗಿ ತಿಳಿದುಕೊಂಡು ನಂತರ ಅವರ ಪರವಾಗಿ ಹೇಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
