Asianet Suvarna News Asianet Suvarna News

ದೆಹಲಿಯಲ್ಲಿ ಮಂತ್ರಿಗಳಿಗೆ ಕೊರೋನಾ ಕಾಟ; ಮಹಾಮಾರಿಗೆ ಎಲ್ರೂ ಉಸ್ಸಪ್ಪಾ...ಉಸ್ಸಪ್ಪಾ..!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೂರನೇ ಬಾರಿ ಆಸ್ಪತ್ರೆ ಸೇರಿದ್ದಾರೆ. ಕೊರೋನಾ ಜೊತೆ ಅಧಿಕ ಮಧುಮೇಹವೂ ಇರುವುದರಿಂದ ಅಮಿತ್‌ ಭಾಯಿ ತೊಂದರೆ ಎದುರಿಸುತ್ತಿದ್ದಾರೆ. ಇನ್ನು ದಿಲ್ಲಿಯಲ್ಲಿ ಕಾರ್ಯಾಲಯದ ಸಿಬ್ಬಂದಿ ಒಬ್ಬರಿಂದ ನಿತಿನ್‌ ಗಡ್ಕರಿಗೂ ಕೊರೋನಾ ಬಂದಿದ್ದು, ಅವರು ಮನೆಯಲ್ಲೇ ಉಳಿದುಕೊಂಡಿದ್ದಾರೆ. 

From Amit Shah to Nitin Gadkari union ministers who contracted covid 19
Author
Bengaluru, First Published Sep 18, 2020, 3:09 PM IST

ನವದೆಹಲಿ (ಸೆ. 18): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರದ ಮಂತ್ರಿಗಳಿಗೂ ಕೊರೊನಾ ಸೋಂಕು ತಗುಲಿದ್ದು, ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನು ಕೆಲವರು ಮನೆಯಲ್ಲಿಯೇ ಇದ್ದಾರೆ. 

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೂರನೇ ಬಾರಿ ಆಸ್ಪತ್ರೆ ಸೇರಿದ್ದಾರೆ. ಕೊರೋನಾ ಜೊತೆ ಅಧಿಕ ಮಧುಮೇಹವೂ ಇರುವುದರಿಂದ ಅಮಿತ್‌ ಭಾಯಿ ತೊಂದರೆ ಎದುರಿಸುತ್ತಿದ್ದಾರೆ. ಇನ್ನು ದಿಲ್ಲಿಯಲ್ಲಿ ಕಾರ್ಯಾಲಯದ ಸಿಬ್ಬಂದಿ ಒಬ್ಬರಿಂದ ನಿತಿನ್‌ ಗಡ್ಕರಿಗೂ ಕೊರೋನಾ ಬಂದಿದ್ದು, ಅವರು ಮನೆಯಲ್ಲೇ ಉಳಿದುಕೊಂಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಗುಲಾಂ ನಬಿ ಈಗ ಏಕಾಂಗಿ; ಬರೆಯಲಿದ್ದಾರೆ ಪುಸ್ತಕ

ಗಡ್ಕರಿ ಮಧುಮೇಹ, ರಕ್ತದೊತ್ತಡದ ಸಮಸ್ಯೆಯ ಜೊತೆಗೆ ತೂಕ ಇಳಿಸಿಕೊಳ್ಳುವ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರಿಂದ ವೈದ್ಯರು ಕಡ್ಡಾಯ ವಿಶ್ರಾಂತಿ ಹೇಳಿದ್ದಾರೆ. ಗಡ್ಕರಿ ಅವರಿಗೆ ನಿಶ್ಯಕ್ತಿ ಕಾಡುತ್ತಿದೆ. ಇನ್ನು ಮುಂಬೈಗೆ ಹೋಗಿದ್ದ ಕೇಂದ್ರ ಸಚಿವ ಸುರೇಶ್‌ ಅಂಗಡಿಗೂ ಕೆಮ್ಮು ಕಾಣಿಸಿಕೊಂಡು ಪರೀಕ್ಷೆ ಮಾಡಿಸಿದಾಗ ಕೊರೋನಾ ಪತ್ತೆಯಾಗಿದೆ.

ಸುರೇಶ್‌ ಅಂಗಡಿ ಕೂಡ 7 ದಿನಕ್ಕಾಗಿ ಏಮ್ಸ್‌ಗೆ ದಾಖಲಾಗಿದ್ದು, ಅವರಿಗೆ ಮಧುಮೇಹ, ರಕ್ತದೊತ್ತಡ ಇವ್ಯಾವುವೂ ಇಲ್ಲ. ಮಂತ್ರಿ ಆದರೇನು ಕುಟುಂಬಕ್ಕೆ ಆತಂಕ ಸಹಜ ತಾನೇ? ಅಂಗಡಿ ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು ದೆಹಲಿ ತಲುಪಿದ್ದಾರೆ. ಇನ್ನು ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಕೊರೋನಾ ಇದ್ದರೂ ಯಾವುದೇ ಲಕ್ಷಣಗಳು ಇಲ್ಲ. ಹೀಗಾಗಿ ಮನೆಯಲ್ಲೇ ಇದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

 

Follow Us:
Download App:
  • android
  • ios