ಕಾಂಗ್ರೆಸ್‌ನ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ನಿಕ್ಕಿದೆ: ಸಚಿವ ಬೋಸರಾಜು
77 ವರ್ಷಗಳ ಇತಿಹಾಸ ಹೊಂದಿದ ಮತ್ತು ಸತತ 60 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗೆಸ್‌ನಿಂದ ಬಡವರು, ದೀನ ದಲಿತರ ಏಳಿಗೆ ಸಾಧ್ಯವಾಗಿದೆ. ಬಿಜೆಪಿ ಉದ್ಯಮಿಗಳು ಹಾಗೂ ಬಂಡವಾಳ ಶಾಹಿಗಳ ಪಕ್ಷವಾಗಿದ್ದು, ಅವರಿಂದ ದೇಶದ ಬಡಜನರ ಏಳಿಗೆ ಅಸಾಧ್ಯ: ಸಚಿವ ಎನ್.ಎಸ್.ಬೋಸರಾಜು
ಕವಿತಾಳ(ಏ.28): ದೇಶಕ್ಕೆ ಸ್ವಾಂತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್, ಪಕ್ಷದ ಅನೇಕ ಮುಖಂಡರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 77 ವರ್ಷಗಳ ಇತಿಹಾಸ ಹೊಂದಿದ ಮತ್ತು ಸತತ 60 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗೆಸ್‌ನಿಂದ ಬಡವರು, ದೀನ ದಲಿತರ ಏಳಿಗೆ ಸಾಧ್ಯವಾಗಿದೆ. ಬಿಜೆಪಿ ಉದ್ಯಮಿಗಳು ಹಾಗೂ ಬಂಡವಾಳ ಶಾಹಿಗಳ ಪಕ್ಷವಾಗಿದ್ದು, ಅವರಿಂದ ದೇಶದ ಬಡಜನರ ಏಳಿಗೆ ಅಸಾಧ್ಯ, ರೈತರ ಸಾಲ ಮನ್ನಾ ಮಾಡಲು ಮುಂದಾಗದ ಪ್ರಧಾನಿ ಮೋದಿ ಉದ್ಯಮಿಗಳ ಸಾಲ ಮನ್ನಾ ಮಾಡುವ ಮೂಲಕ ದೇಶದ ಬಡ ಜನರು ಹಾಗೂ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಧರ್ಮ ಆಧಾರಿತ ಮೀಸಲಾತಿ ವ್ಯವಸ್ಥೆ ಮಾರಕ: ಶಾಸಕ ಬಸನಗೌಡ ಯತ್ನಾಳ್
ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿ, ಒಬ್ಬ ಐಎಎಸ್ ಅಧಿಕಾರಿಯಾಗಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದೇನೆ. 35 ವರ್ಷಗಳ ಅನುಭವದ ಹಿನ್ನೆಲೆ ಜಿಲ್ಲೆಯ ಜನರ ಸಮಸ್ಯೆ ತೀರಿಸು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯ ಸಮಸ್ಯೆಗಳ ಹಾಗೂ ಜನರ ಸಮಸ್ಯೆಗಳ ಬಗ್ಗೆ ದಸಂಸತ್ತಿನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಲು ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಶಾಸಕ ಜಿ.ಹಂಪಯ್ಯ ನಾಯಕ, ಮುಖಂಡರಾದ ಕೆ.ಶಾಂತಪ್ಪ,ಶಿವಣ್ಣ ವಕೀಲ್ ಮಾತನಾಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ಇದ್ದರು.