Asianet Suvarna News Asianet Suvarna News

Karnataka Election Result 2023: ಬಿಜೆಪಿಯ ದುರಹಂಕಾರ, ದುರಾಡಳಿತದಿಂದ ಸೋಲು ಅನುಭವಿಸಿದೆ, ಜನಾರ್ದನ ರೆಡ್ಡಿ

ಬಳ್ಳಾರಿಯಲ್ಲಿ ನನ್ನ ಪತ್ನಿ ಸೋಲು ದುಃಖ ತಂದಿದೆ. ಕೆಆರ್‌ಪಿಪಿಯಿಂದ ಒಬ್ಬಂಟಿಯಾಗಿ ವಿಧಾನಸಭೆಗೆ ಕಾಲಿಡುತ್ತಿದ್ದೇನೆ. ಕೊನೆ ಉಸಿರು ಇರುವವರಿಗೂ ಕೆಆರ್‌ಪಿಪಿ ಪಕ್ಷ ಕಟ್ಟುತ್ತೇನೆ. ಬರುವ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ: ಜನಾರ್ದನ ರೆಡ್ಡಿ 

Founder of KRPP Janardhana Reddy Talks Over Karnataka Assembly Election 2023 grg
Author
First Published May 13, 2023, 6:52 PM IST | Last Updated May 13, 2023, 6:52 PM IST

ಕೊಪ್ಪಳ(ಮೇ.13): ಬಳ್ಳಾರಿಯಿಂದ ಬಂದ ನನ್ನನ್ನು ಗಂಗಾವತಿ ಜನ ಕೈ ಹಿಡಿದಿದ್ದಾರೆ. ಉಹಿಸಿಕೊಂಡಿದ್ದಕ್ಕಿಂತ ಕಡಿಮೆ ಅಂತರದ ಗೆಲುವು ಆಗಿದೆ. ಬಿಜೆಪಿಯ ದುರಹಂಕಾರ, ದುರಾಡಳಿತದಿಂದ ಸೋಲು ಅನುಭವಿಸಿದೆ. ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಿದರು, ಸಜ್ಜನ ಶೆಟ್ಟರ ಅವರನ್ನ ದೂರವಿಟ್ಟರು. ನನ್ನಂಥವರನ್ನು ಪಕ್ಷದಿಂದ ದೂರವಿಟ್ಟರು. ಇದೇ ಕಾರಣಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಅಂತ ಕೆಆರ್‌ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ತಿಳಿಸಿದ್ದಾರೆ. 

ಗೆಲುವಿನ ನಂತರ ಇಂದು(ಶನಿವಾರ) ಜಿಲ್ಲೆಯ ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಇಲ್ಲಿ ಬಿ.ಎಲ್. ಸಂತೋಷ ಮಾತ್ರ ಹೊಣೆ ಮಾಡಲು ಆಗುವುದಿಲ್ಲ. ಅವರಿಗೆ ಬೆಂಬಲಿಸಿದವರೂ ಕಾರಣವಾಗುತ್ತಾರೆ. ಬಳ್ಳಾರಿಯಲ್ಲಿ ನನ್ನ ಪತ್ನಿ ಸೋಲು ದುಃಖ ತಂದಿದೆ. ಕೆಆರ್‌ಪಿಪಿಯಿಂದ ಒಬ್ಬಂಟಿಯಾಗಿ ವಿಧಾನಸಭೆಗೆ ಕಾಲಿಡುತ್ತಿದ್ದೇನೆ. ಕೊನೆ ಉಸಿರು ಇರುವವರಿಗೂ ಕೆಆರ್‌ಪಿಪಿ ಪಕ್ಷ ಕಟ್ಟುತ್ತೇನೆ. ಬರುವ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಅಂತ ಹೇಳಿದ್ದಾರೆ. 

Gangavati Janardhana Reddy Election Results 2023: ರಾಷ್ಟ್ರೀಯ ಪಕ್ಷಗಳ ಫುಟ್‌ಬಾಲ್‌ ಆಡಿದ ಜನಾರ್ಧನ ರೆಡ್ಡಿ!

ಗಂಗಾವತಿಯಲ್ಲಿ ಕೋಮು ಪ್ರಚೋದನೆಗೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಜನ ಒಂದೇ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಸಹಕಾರ ನೀಡುತ್ತದೆ ಎಂಬ ಭರವಸೆ ಇದೆ. ಇತ್ತೀಚಿಗೆ ಗಂಗಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಪಹರಣ ಪ್ರಕರಣ ಪೊಲೀಸ್ ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಅಂತ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios