Asianet Suvarna News Asianet Suvarna News

ಮಾಜಿ ಪ್ರಧಾನಿ ದೇವೇಗೌಡರ ಹೆಸರಲ್ಲಿ ತುಂಡು ಆಸ್ತಿಯಿಲ್ಲ, ಸ್ವಂತ ಮನೆಯೂ ಇಲ್ಲ; ಹೆಚ್.ಡಿ. ಕುಮಾರಸ್ವಾಮಿ

ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡ್ತೀಯಾ.? ನನಗೆ ರಾಜ್ಯದ 6.5 ಕೋಟಿ ಜನರೇ ನನ್ನ ಆಸ್ತಿ. 60 ವರ್ಷ ರಾಜಕೀಯ ಮಾಡಿದ ಮಾಜಿ ಪ್ರಧಾನಿ ದೇವೇಗೌಡರ ಹೆಸರಲ್ಲಿ ತುಂಡು ಆಸ್ತಿಯಿಲ್ಲ, ಸ್ವಂತ ಮನೆಯೂ ಇಲ್ಲ. 

Former Prime Minister H D Deve Gowda has no property and even no own house says H D Kumaraswamy sat
Author
First Published Aug 4, 2024, 8:05 PM IST | Last Updated Aug 4, 2024, 8:09 PM IST

ರಾಮನಗರ (ಆ.04): ಕನಕಪುರದಲ್ಲಿ ಕೆರೆ, ಖಾಲಿ ಜಾಗಗಳು ಹಾಗೂ ಕಲ್ಲುಗಳನ್ನು ನುಂಗಿ ನೀರು ಕುಡಿದ ಕನಕಪುರದ ಮಹಾನ್ ನಾಯಕ ಸಿಡಿ ಶಿವು ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡ್ತೀಯಾ.? ನನಗೆ ರಾಜ್ಯದ ಆರೂವರೆ ಕೋಟಿ ಜನರೇ ಆಸ್ತಿ ಆಗಿದ್ದಾರೆ. ಇನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು 60 ವರ್ಷಗಳಿಂದ ರಾಜಕೀಯ ಮಾಡಿದರೂ ಅವರ ಹೆಸರಲ್ಲಿ ತುಂಡು ಆಸ್ತಿಯಿಲ್ಲ, ಸ್ವಂತಕ್ಕೊಂದು ಮನೆಯಿಲ್ಲ. ಅವರು ಮಗಳ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಾದಯಾತ್ರೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಈ ಪಾದಯಾತ್ರೆಯ ಯಶಸ್ಸು ನಮ್ಮ ವ್ಯೆಯಕ್ತಿವಾದ ಆಸೆಗಳಿಗಲ್ಲ. ಯಾವುದೋ ಕಾರ್ಡ್ ಹಂಚಿ 136 ಸೀಟು ಗೆದ್ದೆ ಅಂತಿದ್ದರಲ್ಲ, ಮುಂದೆ ಅದು 136ರಿಂದ 34ಕ್ಕೆ ಇಳಿಯುವ ಕಾಲ ದೂರ ಇಲ್ಲ. ಕನಕಪುರದ ಮಹಾನ್ ನಾಯಕ, ಸಿಡಿ ಶಿವು ಬಗ್ಗೆ ಬ್ಲಾಕ್ ಅಂಡ್ ವೈಟ್ ಟಿವಿಯಲ್ಲಿ ತೋರಿಸ್ತಾರಲ್ಲ. ಕುಮಾರಸ್ವಾಮಿಯವರು ವೃತ್ತಿಯಿಂದ ಪ್ರಾರಂಭ ಆಗಿದ್ದು, ನಾನು ಸಣ್ಣ ಕೆಲಸ ಮಾಡ್ತಿದ್ದೆ. ಕಸವನ್ನು ಕ್ಲೀನ್ ಮಾಡುವ ಒಂದು ಸಣ್ಣ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೆ. ಆಮೇಲೆ ನನ್ನ ರಾಮನಗರ ಜನರು ಶಾಸಕರಾಗಿ ಅವಕಾಶ ಕೊಟ್ರಿ ಎಂದು. ಈಗ ರಾಜ್ಯದಲ್ಲಿ ಮೂಲೆ ಮೂಲೆಯಲ್ಲಿರುವ ಕಾಂಗ್ರೆಸ್ ಕಸ ಕ್ಲೀನ್ ಮಾಡಲೇ ನಾವು ಒಟ್ಟಿಗೆ ಸೇರಿರೋದು ಎಂದು ಟಾಂಗ್ ನೀಡಿದರು.

ಕುಮಾರಸ್ವಾಮಿ ಮಾಡಿದ ಅಕ್ರಮಗಳನ್ನೆಲ್ಲಾ ಪಟ್ಟಿ ಮಾಡಿಸ್ತಿದ್ದೀನಿ, ತನಿಖೆಯೂ ಆಗುತ್ತದೆ; ಡಿ.ಕೆ. ಶಿವಕುಮಾರ್

ಬಿಜೆಪಿ-ಜೆಡಿಎಸ್ ಎರಡು ಪಕ್ಷಗಳ ಪಾದಯಾತ್ರೆಯಿಂದ ರಾಜಕೀಯ ಸುನಾಮಿ ಎದ್ದಿದೆ. ಈ ಸುನಾಮಿಯಿಂದ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಕ್ಕೆಂದು ಒಟ್ಟುಗೂಡಿದೆ. ನನ್ನ ಆಸ್ತಿ ನಾಡಿನ ಆರುವರೆ ಕೋಟಿ ಜನರು. ಕಳೆದ 60 ವರ್ಷಗಳ ದೇವೇಗೌಡರ ರಾಜಕೀಯ ಆಡಳಿತದಲ್ಲಿ ಅವರ ಬಗ್ಗೆ ಪ್ರಶ್ನೆ ಮಾಡಿದ್ದೀರ? ದೇವೇಗೌಡರ ಹೆಸರಲ್ಲಿ ಯಾವ ಆಸ್ತಿಯೂ ಇಲ್ಲ, ಮನೆಯೂ ಇಲ್ಲ. ಅವರ ಮಗಳ ಹೆಸರಿನ‌ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಇವರ ಅಪ್ಪ ಎಲ್ಲೋ ಚಿನ್ನ ಅಳೆಯೋಕೆ ಹೋಗಿದ್ರಂತೆ, ಹುಳ್ಳಿ ಅಳೆಯೋಕೆ ಹೋಗಿದ್ರೋ ಅಥವಾ ಚಿನ್ನ ಅಳೆಯೋಕೆ ಹೋಗಿದ್ರೋ.? ಕನಕಪುರದ ಕೆರೆ, ಜಾಗ ನುಂಗಿದ್ರಿ, ಕಲ್ಲುಗಳನ್ನು ನುಂಗಿದ್ರಿ. ನನ್ನ ಆಸ್ತಿ ಬಗ್ಗೆ ಮಾತಾಡ್ತೀಯಲ್ಲಪ್ಪ ನೀನು ಎಂದು ವಾಗ್ದಾಳಿ ಮಾಡಿದರು.

ನಾನು 1996 ರಲ್ಲಿ ಲೋಕಸಭಗೆ ಗೆದ್ದಿದ್ದೆ‌. 1999 ರಲ್ಲಿ ನಾನು ಸಾತನೂರಿನಿಂದ ಸೋತಿದ್ದೆ. 1984ರಲ್ಲಿ ನಾನು ಬಿಡದಿಯಲ್ಲಿ 40 ಎಕರೆ ತಗೊಂಡಿದ್ದು. ಉಪ ಮುಖ್ಯಮಂತ್ರಿ ಆದಮೇಲೆ ಮೂರು ಜನ ವಿಧವೆಯರ ಬಳಿ‌ ಮಗಳ ಹೆಸರಿಗೆ ಸೈಟ್ ಬರೆಸಿಕೊಂಡಿದ್ದೀರಲ್ಲ. ನಿಮಗೆ ಮನುಷತ್ವ ಇದೆಯಾ..? 1995ರಲ್ಲಿ ನಾನು ರಾಮನಗರಕ್ಕೆ ಬಂದೆ. ಆದರೆ, ಒಂದು ಬಾರಿಯಾದರೂ ಕೋಮು ಗಲಭೆ ಆಗೋಕೆ ಅವಕಾಶ ನೀಡಿದ್ದೀನಾ.? ಮುಸ್ಲಿಂ ಬಾಂದವರು ಹೇಳಬೇಕು. ಕಾಂಗ್ರೆಸ್ ನವರಿಗೆ ತೊಂದರೆ ಕೊಟ್ಟಿದ್ನಾ? ಈಗ ಮಾತೆತ್ತಿದ್ರೆ ಪೊಲೀಸ್ ಸ್ಟೇಷನ್ ಎಂದು ಹೇಳ್ತಾರೆ ಎಂದು ಕಿಡಿಕಾರಿದರು.

ದಸರಾ ವೇಳೆಗೆ ಕಾಂಗ್ರೆಸ್ ಸಚಿವ ಸಂಪುಟ ಪುನರ್‌ರಚನೆ ಸುಳಿವು ಕೊಟ್ಟ ಕೆ.ಸಿ. ವೇಣುಗೋಪಾಲ್!

ರಾಮನಗರ ಮುಸ್ಲಿಂ ಬಂಧಗಳು ಮುಂದೆ ಪಶ್ಚಾತ್ತಾಪ ಪಡ್ತೀರಿ. ಎದೆ ತಟ್ಟಿ ಹೇಳ್ತೇನೆ. ನಿಮಗೆ ನಾ ತೊಂದರೆ ನೀಡಿಲ್ಲ. ನಾನು ಜಾತಿ ರಾಜಕೀಯ ಮಾಡಿಲ್ಲ. ಕನಕಪುರ ದಲ್ಲಿ ಅವನು ಬಂಡೆ ಒಡ್ಕೊಂಡು ಇದ್ದ ಅವನಿಗೆ ಸಾವಿರ ಓಟು‌, ಆದ್ರೆ ನನಗೆ ಎರಡು ಮೂರು ಓಟು. ನನ್ನ ಬಿಟ್ಟು ನೀವು ಹೇಗೆ ರಾಜಕೀಯ ಮಾಡ್ತೀರಿ ನೋಡ್ತೇನೆ. ನೀವೆ ನನ್ನ ಬೆಳೆಸಿದವರು. ನನ್ನ ಅಲ್ಲಾಡಿಸಲು ಸಾಧ್ಯವಿಲ್ಲ. ಶಿವಕುಮಾರ್ ಅವರೇ ಯಡಿಯೂರಪ್ಪ ಮೇಲೆ ಸುಳ್ಳು ಕೇಸ್ ಹಾಕಿದ್ದೀರಿ. ಈ ವಯಸ್ಸಿನಲ್ಲಿ ಅವರನ್ನು ಕೆಣಕಿದ್ದೀರಿ. ನನ್ನ ಆಸ್ತಿ ಕೇಳಿ ಕೆಣಕಿದ್ದೀರಿ. ಆಯ್ತು ತನಿಖೆ ಮಾಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

Latest Videos
Follow Us:
Download App:
  • android
  • ios