ದಸರಾ ವೇಳೆಗೆ ಕಾಂಗ್ರೆಸ್ ಸಚಿವ ಸಂಪುಟ ಪುನರ್‌ರಚನೆ ಸುಳಿವು ಕೊಟ್ಟ ಕೆ.ಸಿ. ವೇಣುಗೋಪಾಲ್!
ರಾಜ್ಯದ ಎಲ್ಲ ಸಚಿವರ ರಿಪೋರ್ಟ್ ಕಾರ್ಡ್ ನೋಡಿದ ಕಾಂಗ್ರೆಸ್ ಹೈಕಮಾಂಡ್ ದಸರಾ ವೇಳೆಗೆ ಸಚಿವ ಸಂಪುಟ ಪುನಾರಚನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಆ.04): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬೆನ್ನಲ್ಲಿಯೇ ರಾಜ್ಯದ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ರಿಪೋರ್ಟ್ ಕಾರ್ಡ್ ಕೇಳಿದ್ದಾರೆ. ಜೊತೆಗೆ, ರಾಜ್ಯಕ್ಕೆ ಸೀಮಿತವಾಗದೇ ಕೇವಲ ತಮ್ಮ ತವರು ಜಿಲ್ಲೆ ಹಾಗೂ ಉಸ್ತುವಾರಿ ಜಿಲ್ಲೆಗಳಿಗೆ ಸೀಮಿತವಾಗಿರುವ ಸಚಿವರಿಗೆ ಸಂಪುಟದಿಂದ ಕೈಬಿಡುವ ಹಾಗೂ ಹೊಸಬರಿಗೆ ಅವಕಾಶ ನೀಡುವ ಸೂಚನೆಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಭಾನುವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಹಾಗೂ ಕರ್ನಾಟಕ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರಾಜ್ಯದ ಸಚಿವರೊಂದಿಗೆ ಪಕ್ಷದ ಆಂತರಿಕ ಸಭೆ ನಡೆಸಿದರು. ಈ ವೇಳೆ ಎಲ್ಲ ಸಚಿವರ ರಿಪೋರ್ಟ್ ಕಾರ್ಡ್ ಪರಿಶೀಲನೆ ಮಾಡಿದ್ದಾರೆ. ಇದೇ ವೇಳೆ ಕೆ.ಸಿ. ವೇಣುಗೋಪಾಲ್ ಅವರು ಎಲ್ಲ ಸಚಿವರಿಗೆ ದಸರಾ ವೇಳೆಗೆ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂದು ಎಚ್ಚರಿಕೆಯನ್ನು ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಮಾಡಿದ ಅಕ್ರಮಗಳನ್ನೆಲ್ಲಾ ಪಟ್ಟಿ ಮಾಡಿಸ್ತಿದ್ದೀನಿ, ತನಿಖೆಯೂ ಆಗುತ್ತದೆ; ಡಿ.ಕೆ. ಶಿವಕುಮಾರ್
ಸಚಿವರಿಗೆ ಖಡಕ್ ಎಚ್ಚರಿಕೆ ಕೆ.ಸಿ.ವೇಣುಗೋಪಾಲ್ ಅವರು, ನಿಮ್ಮ ಕಾರ್ಯವೈಖರಿ ತವರು ಜಿಲ್ಲೆ ಅಥವಾ ಉಸ್ತುವಾರಿ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ರಾಜ್ಯ ಪ್ರವಾಸ ಮಾಡಿ ಇಲಾಖೆಯಲ್ಲಿ ಸುಧಾರಣೆ ತರಬೇಕು. ನಿಮ್ಮ ಕಾರ್ಯವೈಖರಿ ನಮಗೆ ತೃಪ್ತಿದಾಯಕವಾಗಿಲ್ಲ. ನೀವುಗಳು ಸರಿಯಾಗಿ ಕೆಲಸ ಮಾಡಿದ್ರು ಲೋಕಸಭೆಯಲ್ಲಿ ಕನಿಷ್ಠ 15 ಸ್ಥಾನಗಳನ್ನ ಗೆಲ್ಲುತ್ತಿದ್ದೆವು. ಬಿಜೆಪಿ ಅವಧಿಯ ಹಗರಣಗಳ ತನಿಖೆಯನ್ನ ಚುರುಕುಗೊಳಿಸಿ. ಮೂಡ ವಿಚಾರದಲ್ಲಿರಾಜ್ಯಪಾಲರ ವಿರುದ್ದ ಕಾನೂನು ಹೋರಾಟ ಮಾಡಿ. ನೀವೆಲ್ಲರೂ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಎಲ್ಲರೂ ನಿಲ್ಲಬೇಕು ಎಂದು ಸೂಚನೆ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿ ಪಾದಯಾತ್ರೆ ಮಾಡುತ್ತಿರುವ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷಗಳಿಗೆ ಪರಿಣಾಮಕಾರಿಯಾಗಿ ತಿರುಗೇಟು ಕೊಡುವ ಕೆಲಸ ಮಾಡಬೇಕು. ಈ ಮೂಲಕ ಕಾಂಗ್ರೆಸ್‌ನಲ್ಲಿ ಅಸಮಧಾನ ಇದೆ ಎನ್ನುವ ಚರ್ಚೆಗೆ ಹೈಕಮಾಂಡ್ ಬ್ರೇಕ್ ಹಾಕಲು ಮುಂದಾಯಿತು. ಮುಂದಿನ ಎರಡು ತಿಂಗಳು ಗಡುವು ಬಳಸಿಕೊಂಡು ಕಾರ್ಯವೈಖರಿ ಸರಿಪಡಿಸಿಕೊಳ್ಳಬೇಕು. ಎರಡು ತಿಂಗಳ ಗಡುವು ಸರಿಪಡಿಸಿಕೊಳ್ಳದಿದ್ದರೆ ಖಾತೆ ಕಳೆದುಕೊಳ್ಳಲು ರೆಡಿಯಾಗಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಾಂಗ್ರೆಸ್ ಆಂತರಿಕ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ. ವೇಣುಗೋಪಾಲ್ ಅವರು, ಬಿಜೆಪಿ ಮತ್ತು ಜೆಡಿಎಸ್ ನಮ್ಮ ಸರ್ಕಾರವನ್ನು ಟಾರ್ಗೆಟ್ ಮಾಡಿವೆ. ಸಿದ್ದರಾಮಯ್ಯ ಇಲ್ಲಿ ಹೊಸ ಮುಖ್ಯಮಂತ್ರಿ ಅಲ್ಲ. ಅವರಿಗೆ ಹೇಗೆ ಆಡಳಿತ ಮಾಡಬೇಕು ಎಂದು ಗೊತ್ತಿದೆ. ನಾವು ಗ್ಯಾರಂಟಿ ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದ್ದೇವೆ. ಅದರ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಒಂದು ನಿರ್ಧಾರ ಮಾಡಿದೆ. ಇದರ ವಿರುದ್ಧ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ಜನರಿಗೆ ಸತ್ಯ ತಿಳಿಸಲು ನಾವು ಹೋರಾಟ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಕುಮಾರಸ್ವಾಮಿ ಪ್ಯಾಂಟಿನೊಳಗೆ ಖಾಕಿ ಚೆಡ್ಡಿ ಇದೆ; ಅವರ ಆಸ್ತಿಯಿಂದ 3 ಬಜೆಟ್ ಮಾಡಬಹುದು: ಸಚಿವ ಜಮೀರ್ ಅಹಮ್ಮದ್
ಬಿಜೆಪಿ ಭ್ರಷ್ಟಾಚಾರ ದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ವಿಜಯೇಂದ್ರ ಮೇಲೆ, ಪ್ರಜ್ವಲ್ ಮೇಲೆ ಎಷ್ಟು ಕೇಸುಗಳಿವೆ. ಅವರು ಬಡವರ ಪರ ನಿಂತಿರುವ ವ್ಯಕ್ತಿ ಯನ್ನು ಮುಗಿಸಲು ಪ್ರಯತ್ನ ಪಡ್ತಾ ಇದಾರೆ. ಅವರ ಉದ್ದೇಶ ಗ್ಯಾರಂಟಿ ಸ್ಕೀಮ್, ಹಾಗೂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಮುಗಿಸುವುದು. ಪ್ರತಿದಿನ ಸಿದ್ದರಾಮಯ್ಯ ಬಗ್ಗೆ ಮಾತನಾಡ್ತಾ ಒಂದು ಟ್ರೆಂಡ್ ಕ್ರಿಯೇಟ್ ಮಾಡಲು ನೋಡ್ತಾ ಇದಾರೆ. ನಾವು ಒಗ್ಗಟ್ಟಾಗಿ ಇವರ ವಿರುದ್ದ ಹೋರಾಟ ಮಾಡ್ತೀವಿ. ನಾವು ಇವತ್ತು ಸಚಿವರ ಕಾರ್ಯವೈಖರಿ, ಅಥವಾ ಅವರ ಕೆಲಸಗಳ ಬಗ್ಗೆ ಮಾತನಾಡಿಲ್ಲ. ನಾವು ಬಹಳ ಕಾನ್ಫಿಡೆಂಟ್ ಆಗಿ ಇದ್ದೇವೆ. ಕಾನೂನು ಪ್ರಕಾರ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ತಿಳಿಸಿದರು.