ಕುಮಾರಸ್ವಾಮಿಯಂಥ ಮತ್ತೊಬ್ಬ ಸಿಎಂ ಇಡೀ ದೇಶದಲ್ಲಿದ್ದರೆ ತೋರಿಸಿ: ದೇವೇಗೌಡ

ತಮಿಳುನಾಡಿನಲ್ಲಿ ಕಾಂಗ್ರೆಸ್‌-ಬಿಜೆಪಿ ಸೇರಿದಂತೆ ಯಾವುದೇ ರಾಷ್ಟ್ರೀಯ ಪಕ್ಷವಿಲ್ಲ. ಅಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಬೆಂಬಲವಿದೆ. ಇಲ್ಲೂ ತಮಿಳು ನಾಡಿನವರಂತೆ ಕಲಿಯಬೇಕು. ಪ್ರಾದೇಶಿಕ ಪಕ್ಷವನ್ನು ಉಳಿಸಿ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ. 

Former PM HD Devegowda Talks Over Former CM HD Kumaraswamy grg

ಚನ್ನಪಟ್ಟಣ(ಮೇ.04): ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂಥ ಮತ್ತೊಬ್ಬ ಸಿಎಂ ಇಲ್ಲ, ಏಕಾಂಗಿಯಾಗಿ ನಿಂತು ರೈತರ ಸಾಲಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಕುಮಾರ ಸ್ವಾಮಿ. ಹಾಗೆ ಯಾರಾದರೂ ಇದ್ದರೆ ಕಾಂಗ್ರೆಸ್‌, ಬಿಜೆಪಿಯವರು ನನ್ನ ಮುಂದೆ ನಿಂತು ಹೇಳಲಿ, ಇದು ನನ್ನ ಸವಾಲು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವತ್ತು ಬಜೆಟ್‌ ಮೇಲಿನ ಚರ್ಚೆ ವೇಳೇ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯವಾಡಿ ಎದ್ದು ಹೊರಗೆ ಹೋಗಿದ್ದರು. ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ದು ಇದೇ ಕುಮಾರಸ್ವಾಮಿ ಮಾತ್ರ. ಸಿದ್ದರಾಮಯ್ಯ ಐವತ್ತು ಸಾವಿರ ಸಾಲ ಮನ್ನಾ ಮಾಡಿದ್ದರೂ, 3500 ಕೋಟಿ ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು, ರೈತನಿಗೂ ಪಿಂಚಣಿ ಘೋಷಣೆ ಮಾಡಿದ್ದು ಇದೇ ಎಚ್‌ಡಿಕೆ ಎಂದು ಪುನರುಚ್ಚರಿಸಿದರು.

karnataka election ಕಾಂಗ್ರೆಸ್‌ ಪ್ರಣಾಳಿಕೆಗೂ ನಮಗೂ ಸಂಬಂಧವಿಲ್ಲ:ಎಚ್‌ ಡಿ ದೇವೇಗೌಡ

ಪ್ರಾದೇಶಿಕ ಪಕ್ಷ ಬೆಳೆಸಿ: 

ತಮಿಳುನಾಡಿನಲ್ಲಿ ಕಾಂಗ್ರೆಸ್‌-ಬಿಜೆಪಿ ಸೇರಿದಂತೆ ಯಾವುದೇ ರಾಷ್ಟ್ರೀಯ ಪಕ್ಷವಿಲ್ಲ. ಅಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಬೆಂಬಲವಿದೆ. ಇಲ್ಲೂ ತಮಿಳು ನಾಡಿನವರಂತೆ ಕಲಿಯಬೇಕು. ಪ್ರಾದೇಶಿಕ ಪಕ್ಷವನ್ನು ಉಳಿಸಿ ಬೆಳೆಸಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

Latest Videos
Follow Us:
Download App:
  • android
  • ios