* ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ದೊಡ್ಡಗೌಡರು* ನಮಗೆ ಹಿಂದಿನ ಸೋಲು ಮುಂದಿನ ಗೆಲುವಿಗೆ ಹೆದ್ದಾರಿ* ಜೆಡಿಎಸ್ ಕಾರ್ಯಕರ್ತರ ಸಮಾವೇಶ
ಬೆಂಗಳೂರು(ಸೆ.17):‘ಎರಡೂ ರಾಷ್ಟ್ರೀಯ ಪಕ್ಷಗಳು 2023ಕ್ಕೆ ದೇವೇಗೌಡರ ಮನೆ ಬಾಗಿಲಿಗೆ ಬರುವ ಕಾಲ ಬರುತ್ತದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, 2023ಕ್ಕೆ ಜೆಡಿಎಸ್ ಪಕ್ಷ ಇರುವುದಿಲ್ಲ ಎನ್ನುತ್ತಾರೆ. ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ನಮಗೆ ಹಿಂದಿನ ಸೋಲು ಮುಂದಿನ ಗೆಲುವಿಗೆ ಹೆದ್ದಾರಿ. ಎರಡು ರಾಷ್ಟ್ರೀಯ ಪಕ್ಷಗಳು 2023ಕ್ಕೆ ದೇವೇಗೌಡರ ಮನೆ ಬಾಗಿಲಿಗೆ ಬರುವ ಕಾಲ ಬರಲಿದೆ. ಪ್ರಸ್ತುತ ನಡೆಸುತ್ತಿರುವ ಸಮಾವೇಶಗಳನ್ನು 2023ರ ವಿಧಾನಸಭಾ ಚುನಾವಣೆವರೆಗೂ ಮುಂದುವರಿಸಬೇಕು. ಇದು ಪಕ್ಷವನ್ನು ಬಲಗೊಳಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ದೇವೇಗೌಡ್ರು ಕ್ರಮಕ್ಕೆ ಸೂಚಿಸಿದ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಜೆಡಿಎಸ್ ಶಾಸಕ
ಕೊಳಚೆ ಪ್ರದೇಶಗಳಿಗೆ ಅಕ್ಕಿ, ಸೀಮೆಣ್ಣೆ ನೀಡಿದೆ. ಅವರಿಗೆ ಕಾರ್ಡ್ ಕೊಡಬೇಕಿತ್ತು. ಆದರೆ, ಅವರೆಲ್ಲಾ ಇರುವ ಜಾಗ ಅವರದ್ದು ಆಗಿರಲಿಲ್ಲ. ಮಹಿಳೆಯರಿಗೆ ಮೀಸಲಾತಿ ನೀಡಿದ್ದು ನಾವು. ನಾನು ಮುಖ್ಯಮಂತ್ರಿಯಾಗಬೇಕಾದರೆ ಸಂಘರ್ಷವಾಗಿತ್ತು. ನಾನು ಬಿಟ್ಟು ಹೋದ ಮೇಲೆ ಇವರು ಏನು ಮಾಡಿದ್ದಾರೆ ಎನ್ನುವುದು ಬೇಡ. ನಾವು 150 ಸ್ಥಾನ ಗಳಿಸುತ್ತೇವೆ, ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಾರೆ. ತಮಿಳುನಾಡಿನಲ್ಲಿ ಏನಾಯಿತು. ದೆಹಲಿಯಲ್ಲಿ, ಒಡಿಶಾದಲ್ಲಿ ಒಂದು ಸೀಟ್ ಇದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸೇರಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
