ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲ. ಅಂದ ಮೇಲೆ ಅವರ ಗ್ಯಾರಂಟಿಗಳು ಮುಂದುವರಿಯುವ ಬಗ್ಗೆ ಹೇಗೆ ಗ್ಯಾರಂಟಿ ನೀಡುತ್ತಾರೆ ಎಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ 

ಸಕಲೇಶಪುರ(ಏ.13): ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲ. ಅಂದ ಮೇಲೆ ಅವರ ಗ್ಯಾರಂಟಿಗಳು ಮುಂದುವರಿಯುವ ಬಗ್ಗೆ ಹೇಗೆ ಗ್ಯಾರಂಟಿ ನೀಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲ. ಅಂದ ಮೇಲೆ ಅವರ ಗ್ಯಾರಂಟಿಗಳು ಮುಂದುವರಿಯುವ ಬಗ್ಗೆ ಹೇಗೆ ಗ್ಯಾರಂಟಿ ನೀಡುತ್ತಾರೆ ಎಂದರು.

ಎಲೆಕ್ಷನ್‌ ಬಳಿಕ ಕೂಡ ಗ್ಯಾರಂಟಿ ಇರುತ್ತೆ: ಸಿದ್ದರಾಮಯ್ಯ

ನಮ್ಮ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಇರುವುದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮಾತ್ರ. ಕಾಂಗ್ರೆಸ್ ನೇತೃತ್ವದಲ್ಲಿ ಹತ್ತಾರು ಪಕ್ಷಗಳು ಒಗ್ಗೂಡಿ ಕಟ್ಟಿರುವ ಒಕ್ಕೂಟಕ್ಕೆ ಈವರೆಗೆ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇನ್ನು, 150 ಕೋಟಿ ಜನರಿರುವ ದೇಶವನ್ನು ಮುನ್ನಡೆಸುವುದು ಹೇಗೆ ಎಂಬುದನ್ನು ಜನ ಚಿಂತನೆ ನಡೆಸಬೇಕಿದೆ ಎಂದು ವ್ಯಂಗ್ಯವಾಡಿದರು.