Asianet Suvarna News Asianet Suvarna News

ಬಿಜೆಪಿಗೆ ಮುದ್ದಹನುಮೇಗೌಡ ಗುಡ್‌ಬೈ, ಕಾಂಗ್ರೆಸ್‌ ಸೇರ್ಪಡೆ

ಮುದ್ದಹನುಮೇಗೌಡ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕಾಂಗ್ರೆಸ್‌ಗೆ ವಾಪಾಸಾಗಿದ್ದಾರೆ. ಯಾರಿಗೇ ಆದರೂ ಪಶ್ಚಾತಾಪ ಬಹಳ ಮುಖ್ಯ. ಹಾಗೇ ಪಕ್ಷ ತೊರೆದಿದ್ದಕ್ಕೆ ಪಶ್ಚಾತಾಪ ಪಟ್ಟಿರುವ ಮುದ್ದಹನುಮೇಗೌಡ ಅವರು ಈಗ ವಾಪಸಾಗಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ

Former MP Muddahanumegowda Join Congress grg
Author
First Published Feb 23, 2024, 4:25 AM IST

ಬೆಂಗಳೂರು(ಫೆ.23): ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಸಂಸದ ಮುದ್ದಹನುಮೇಗೌಡ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮುದ್ದಹನುಮೇಗೌಡ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕಾಂಗ್ರೆಸ್‌ಗೆ ವಾಪಾಸಾಗಿದ್ದಾರೆ. ಯಾರಿಗೇ ಆದರೂ ಪಶ್ಚಾತಾಪ ಬಹಳ ಮುಖ್ಯ. ಹಾಗೇ ಪಕ್ಷ ತೊರೆದಿದ್ದಕ್ಕೆ ಪಶ್ಚಾತಾಪ ಪಟ್ಟಿರುವ ಮುದ್ದಹನುಮೇಗೌಡ ಅವರು ಈಗ ವಾಪಸಾಗಿದ್ದಾರೆ ಎಂದರು.

Guarantees: ಲೋಕಸಭೆ ಚುನಾವಣೆ ನಂತರ ಕೆಲವರಿಗೆ ಕಾಂಗ್ರೆಸ್‌ ಗ್ಯಾರಂಟಿ ಬಂದ್‌: ಅರವಿಂದ್‌ ಬೆಲ್ಲದ್‌

ಗೌಡಗೆ ಟಿಕೆಟ್‌: ಪರಂ, ಡಿಕೆಶಿ ವಿಭಿನ್ನ ಅಭಿಪ್ರಾಯ

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಒಂದು ವೇಳೆ ಪಕ್ಷದ ವರಿಷ್ಠರು ಮುದ್ದಹನುಮೇಗೌಡಗೆ ತುಮಕೂರು ಟಿಕೆಟ್‌ ನೀಡಿದರೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಮುದ್ದಹನುಮೇಗೌಡಗೆ ಪರೋಕ್ಷವಾಗಿ ಟಿಕೆಟ್‌ ಘೋಷಿಸಿದರು. ಆದರೆ, ಡಿ.ಕೆ.ಶಿವಕುಮಾರ್‌, ‘ಮುದ್ದಹನುಮೇಗೌಡ ಅವರು ಯಾವುದೇ ಷರತ್ತು ಹಾಕದೆ ಪಕ್ಷಕ್ಕೆ ಮರಳಿದ್ದಾರೆ. ಯಾರಿಗೆ ಟಿಕೆಟ್‌ ನೀಡಿದರೂ ಅವರ ಪರವಾಗಿ ಮುದ್ದಹನುಮೇಗೌಡ ಅವರು ಕೆಲಸ ಮಾಡಬೇಕು. ಇದು ಕಾಂಗ್ರೆಸ್‌ ಪಕ್ಷದ ಶಿಸ್ತು’ ಎಂದರು.

ಪರಮೇಶ್ವರ್‌ ಮಾತಿಗೆ ವೇದಿಕೆಯಲ್ಲೇ ಟಾಂಗ್‌ ನೀಡಿದ

ಅಲ್ಲದೆ ಇತ್ತೀಚೆಗೆ ತುಮಕೂರಿನ ಗೌರಿಶಂಕರ್‌ ಕೂಡ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಆ ಮೂಲಕ ತುಮಕೂರು ಕ್ಷೇತ್ರದ ಟಿಕೆಟ್‌ ಯಾರಿಗೆ ಕೊಡಬೇಕು ಎಂಬ ಬಗ್ಗೆ ಇನ್ನೂ ತಿರ್ಮಾನಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಕಾಂಗ್ರೆಸ್‌ನಿಂದ ಟಿಕೆಟ್‌ ದೊರೆಯದ ಕಾರಣ ಕಾಂಗ್ರೆಸ್‌ ತೊರೆದಿದ್ದ ಮುದ್ದಹನುಮೇಗೌಡ ಇದೀಗ ಕಾಂಗ್ರೆಸ್‌ಗೆ ವಾಪಾಸಾಗಿದ್ದಾರೆ. ಅವರು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ.

Loksabha: ಮಂಡ್ಯ ಲೋಕಸಭಾ ಕಾಂಗ್ರೆಸ್‌ ಟಿಕೆಟ್‌ ಸ್ಟಾರ್‌ ಚಂದ್ರುಗೆ ಪಕ್ಕನಾ ?

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಕ್ಷದ ಧ್ವಜ ನೀಡಿ ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ತುಮಕೂರು ಜಿಲ್ಲೆ ವ್ಯಾಪ್ತಿಯ ಶಾಸಕರೂ ಆಗಿರುವ ಸಚಿವರಾದ ಡಾ. ಜಿ.ಪರಮೇಶ್ವರ್‌, ಕೆ.ಎನ್‌. ರಾಜಣ್ಣ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಉಪಸ್ಥಿತರಿದ್ದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವ ಅವಕಾಶ ಬಹಳವಿದೆ. ಹೀಗಾಗಿ ತುಮಕೂರು ಜಿಲ್ಲೆಯ ಎಲ್ಲ ಶಾಸಕರು, ಮುಖಂಡರು ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂದು ಹೇಳುತ್ತಾರೋ ಅವರಿಗೇ ಟಿಕೆಟ್‌ ನೀಡಲಾಗುವುದು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಟ್ಟು, ಪಕ್ಷದ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ತುಮಕೂರು ಜತೆಗೆ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.

Follow Us:
Download App:
  • android
  • ios