ಮಂಡ್ಯದ ಜನ ನರಸತ್ತವರು ಅಂತ ಕುಮಾರಸ್ವಾಮಿ ಇಲ್ಲಿಗೆ ಬಂದಿದ್ದಾರೆ: ಮಾಜಿ ಸಂಸದ ಶಿವರಾಮೇಗೌಡ
ರಾಮನಗರದಿಂದ ಕುಮಾರಸ್ವಾಮಿಯನ್ನ ಓಡಿಸಿದ್ದಾರೆ. ಆದರೆ ಮಂಡ್ಯದವರೆಲ್ಲಾ ನರಸತ್ತವರು ಎಂದು ಇಲ್ಲಿಗೆ ಬಂದಿದ್ದಾರೆ. ಜಿಲ್ಲೆಯ ಮುಖಂಡರು ಈಗಲಾದರೂ ಎಚ್ಚೆತ್ತುಕೊಳ್ಳಿ. ನಿಮ್ಮಲ್ಲೂ ಗಂಡಸಿದ್ದಾರೆ, ಹಾಸನದಿಂದ ಕರೆತಂದು ಮಂಡ್ಯದಲ್ಲಿ ಗಂಡಸರು ಮಾಡುವ ಅಗತ್ಯವಿಲ್ಲ, ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಮಂಡ್ಯ ಜಿಲ್ಲೆಯ ಜನತೆಗೆ ಕರೆ ಕೊಡ್ತೀನಿ ಎಂದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ
ಮಂಡ್ಯ(ಅ.26): ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಹೌದು, ಮಂಡ್ಯದವರನ್ನು ನರಸತ್ತವರು, ಗಂಡಸರಾಗಿ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಜಿಲ್ಲೆಯ ರಾಜಕೀಯ ಮುಖಂಡರಿಗೂ ಶಿವರಾಮೇಗೌಡ ತಿವಿದಿದ್ದಾರೆ.
ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ರಾಮನಗರದಿಂದ ಕುಮಾರಸ್ವಾಮಿಯನ್ನ ಓಡಿಸಿದ್ದಾರೆ. ಆದರೆ ಮಂಡ್ಯದವರೆಲ್ಲಾ ನರಸತ್ತವರು ಎಂದು ಇಲ್ಲಿಗೆ ಬಂದಿದ್ದಾರೆ. ಜಿಲ್ಲೆಯ ಮುಖಂಡರು ಈಗಲಾದರೂ ಎಚ್ಚೆತ್ತುಕೊಳ್ಳಿ. ನಿಮ್ಮಲ್ಲೂ ಗಂಡಸಿದ್ದಾರೆ, ಹಾಸನದಿಂದ ಕರೆತಂದು ಮಂಡ್ಯದಲ್ಲಿ ಗಂಡಸರು ಮಾಡುವ ಅಗತ್ಯವಿಲ್ಲ, ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ ಎಂದು ಮಂಡ್ಯ ಜಿಲ್ಲೆಯ ಜನತೆಗೆ ಕರೆ ಕೊಡ್ತೀನಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿಖಿಲ್‌ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ: ಭಾವನಾತ್ಮಕ ಮನವಿ ಮಾಡಿದ ಕುಮಾರಸ್ವಾಮಿ
ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಯೋಗೇಶ್ವರ್ ರೀತಿ ನಾನು ಜಂಪಿಂಗ್ ಸ್ಟಾರ್. ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟುವ ಉದ್ದೇಶದಿಂದ ಪಕ್ಷ ಸೇರಿದ್ದೆ. ವಿಧಾನಸಭೆ ಸೋಲಿನ ಬಳಿಕ MP ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಆಯ್ತು. ಸಂಘಟನೆ ದೃಷ್ಠಿಯಿಂದ ಜೆಡಿಎಸ್‌ಗೆ ಮಂಡ್ಯ ಜಿಲ್ಲೆ ಬಿಟ್ಟು ಕೊಡದಂತೆ ವಿಜಯೇಂದ್ರ ಬಳಿ ಮನವಿ ಮಾಡಿದ್ದೇನು. ಯಾರಿಗೂ ಬಿಟ್ಟುಕೊಡುವ ಪ್ರಶ್ನೆ ಇಲ್ಲ, ಪಾರ್ಟಿ ಕಟ್ಟುತ್ತೇನೆ ಎಂದು ವಿಜಯೇಂದ್ರ ಭರವಸೆ ಕೊಟ್ಟಿದ್ದರು. ಆದರೆ ಸಾರಾಸಗಟಾಗಿ ಬಿಜೆಪಿಯನ್ನ ಜೆಡಿಎಸ್‌ನವರು ಕತ್ತುಹಿಸುಕಿದರು. ಹೊಂದಾಣಿಕೆ ಬಳಿಕ ಬಿಜೆಪಿ ಪಕ್ಷದ ಉಸಿರುಗಟ್ಟಿಸಲಾಗಿದೆ ಎಂದು ದೂರಿದ್ದಾರೆ.
ಡಾ. ಮಂಜುನಾಥ್ ಅಭ್ಯರ್ಥಿ ಮಾಡಲು ಯೋಗೇಶ್ವರ್ ಶ್ರಮವಹಿಸಿದ್ರು. ಆದರೆ ಚನ್ನಪಟ್ಟಣದಲ್ಲಿ ಯೋಗೇಶ್ವರ್‌ರನ್ನೇ ಬಲಿ ಪಡೆದಿದ್ದಾರೆ. ತಮ್ಮ ಕುಟುಂಬದವರನ್ನ ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರ ಬಲಿ ಪಡೆಯುತ್ತಾರೆ. ಚನ್ನಪಟ್ಟಣ ಜನ ದಡ್ಡರಲ್ಲ, ಯೋಗೇಶ್ವರ್ ಗೆಲುವು ನಿಶ್ಚಿತ. ನಿಖಿಲ್ ಅಲ್ಲ ಕುಮಾರಸ್ವಾಮಿ ನಿಂತರೂ ಏನು ಮಾಡಲಾಗಲ್ಲ. ಯೋಗೇಶ್ವರ್ ಆಚೆ ಕಳುಹಿಸಲು ವಿಜಯೇಂದ್ರ, ಯಡಿಯೂರಪ್ಪ ಕಾರಣ. ಬಿಜೆಪಿ ಪಕ್ಷದ ಗುಂಪುಗಾರಿಕೆಯಿಂದ ಯೋಗೇಶ್ವರ್ ಆಚೆ ಹೋದರು. ಪಾಪ ಈಗ ನಿಖಿಲ್‌ನನ್ನ ಚುನಾವಣಾ ಆಹುತಿ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ 2 ಬಾರಿ ಲಾಟರಿಯಲ್ಲಿ ಸಿಎಂ ಆದವರು. ಕಳೆದ ಚುನಾವಣೆಯಲ್ಲಿ ಎಚ್‌ಡಿಕೆ ಗಾಡಿ ನಿಂತು ಹೋಗಿತ್ತು. ಪಾಪ ಮುಳುಗುವ ಹಡಗು ಎಂದು ಮಂಡ್ಯ ಜನರ ಕೈ ಹಿಡಿದರು. ಉನ್ನತ ಹುದ್ದೆಯಲ್ಲಿದ್ದು ಕುಮಾರಸ್ವಾಮಿ ಏನು ಮಾಡ್ತಿದ್ದಾರೆ. ಮಂಡ್ಯದಲ್ಲಿ 4 ದಿನ ಬೆಂಗಳೂರಲ್ಲಿ 4 ದಿನ ಇರ್ತಾರೆ. ದೇಶ, ವಿದೇಶ ಸುತ್ತಿ ಬೃಹತ್ ಕೈಗಾರಿಕಾಗಳ ಸ್ಥಾಪನೆ ಮಾಡಬೇಕಿತ್ತು. ಆದರೆ ರಾಜ್ಯಕ್ಕೆ ಬಂದಾಗಲೆಲ್ಲಾ ಮುಡಾ ಕೇಸು, ಡಿಕೆಶಿ ಮುಖ ಕೆರೆಯುವ ಕೆಲಸ ಮಾಡ್ತಿದ್ದಾರೆ. ದೊಡ್ಡ ದೊಡ್ಡ ಕೈಗಾರಿಕಾ ತಂದು ಮಂಡ್ಯ ಜನರ ಋಣ ತೀರಿಸುವ ಕೆಲಸ ಕುಮಾರಸ್ವಾಮಿ ಮಾಡಬೇಕು ಎಂದು ಶಿವರಾಮೇಗೌಡ ಆಗ್ರಹಿಸಿದ್ದಾರೆ.