ಸಾವಿನ ಮೇಲೆ ಬಿಜೆಪಿ ಚುನಾವಣೆ ಆಟ, ಮಾಜಿ ಶಾಸಕ ಮಧು ಬಂಗಾರಪ್ಪ ಕಿಡಿ!
ಹೊಸಪೇಟೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾವಿನ ಮೆಲೆ ಬಿಜೆಪಿ ಚುನಾವಣೆ ಆಟದಲ್ಲಿ ತೊಡಗಿದೆ ಎಂದು ಅವರು ಟೀಕೆ ಮಾಡಿದ್ದಾರೆ.
ವಿಜಯನಗರ (ಜ.12): ಮಾಜಿ ಶಾಸಕ ಮಧು ಬಂಗಾರಪ್ಪ ಹೊಸಪೇಟೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಂದ್ರೆನೆ ಹೊಲಸು, ಯಾರೇ ಸತ್ತಿರೋದು ಸುದ್ದಿಯಾದರೂ ಅದನ್ನು ಬೇರೆಯದೇ ರೀತಿಯಲ್ಲಿ ಬಿಂಬಿಸ್ತಾರೆ. ನ್ಯಾಚುರಲ್ ಡೆತ್ ಆಗಿದ್ದರೂ, ಅದನ್ನು ಬೇರೆ ಥರ ಸಾವು ಎಂದು ಬಿಂಬಿಸಿ ಗಲಾಟೆ ಮಾಡೋರು ಅವರು. ಸಾವಿನಿಂದ ಚುನಾವಣೆನೆ ಮಾಡಿದ್ದಾರೆ, ಈ ಬಾರಿ ಮಾತ್ರ ಭಾವನಾತ್ಮಕ ವಿಚಾರ ಕೆಲಸ ಮಾಡೋದಿಲ್ಲ. ಪ್ರವೀಣ್ ನೆಟ್ಟಾರು ಕೊಲೆಯಾದಾಗ, ಇದೇ ನಳೀನ್ ಕಟೀಲ್ ಅವರಿಗೆ ಅವರದ್ದೇ ಹಿಂದೂ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಪರೇಶ್ ಮೆಸ್ತಾ ಕೇಸ್ ಏನಾಯ್ತು, ನಾವೆಲ್ಲಾ ಈ ವಿಚಾರವನ್ನು ನೋಡಿದ್ದೇವೆ. ಭಾವನಾತ್ಮಕ ಆಟ ಈ ಬಾರಿ ನಡೆಯೋಲ್ಲಾ, ಈಗಾಗಲೇ ಜನ ತಿರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಳಿಕ ಒಬಿಸಿ ವಿಭಾಗದ ಅಧ್ಯಕ್ಷ- ರಾಜ್ಯದ ಉಪಾಧ್ಯಕ್ಷ ಸ್ಥಾನದಲ್ಲಿ ಇದ್ದೇನೆ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದ್ದು ಎಲ್ಲವನ್ನೂ ಮಾಡುತ್ತದೆ. ನಾನು ರಾಜ್ಯ ಪ್ರವಾಸ ಮಾಡ್ತಾ ಇದ್ದೇನೆ, 27 ನೇ ಜಿಲ್ಲೆ ಇದಾಗಿದ್ದು, ಇನ್ನೂ ಎರಡುಮೂರು ಜಿಲ್ಲೆಗಳು ಬಾಕಿ ಇವೆ. ಪಕ್ಷ ಸಂಘಟನೆಗೆ ನಾವು ಓಡಾಟ ಮಾಡುತ್ತಿದ್ದೇವೆ. ಇಲ್ಲಿ ಶೇ 55% OBC ಮತದಾರರಿದ್ದಾರೆ. ಜಾತಿ, ಹಣ ಇಂದು ಓಡಾಡೋ ಕಾಲದಲ್ಲಿ ನಾವು ಪಕ್ಷಕ್ಕೆ ಜನರನ್ನು ಸಂಘಟನೆ ಮಾಡ್ತಾ ಇದ್ದೇವೆ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಶೀಘ್ರ ರಾಜ್ಯಮಟ್ಟದ ಒಬಿಸಿ ಸಮಾವೇಶ: ಮಧು ಬಂಗಾರಪ್ಪ
ಬಿಜೆಪಿಗೆ ಪರ್ಸೆಂಟೇಜ್ ಮಾತ್ರ ಬೇಕು. ನಳೀನ್ ಕುಮಾರ್ ಕಟೀಲ್ ಗೆ ಅಭಿವೃದ್ಧಿ ಬೇಕಾಗಿಲ್ಲ, ಲವ್ ಜಿಹಾದ್ ಬೇಕು, ಹಲಾಲ್ ಕಟ್, ಜಟ್ಕಾ ಕಟ್ ಬೇಕು. ಇಂಥ ವಿಚಾರಗಳನ್ನೆಲ್ಲಾ ಮುಂದೆ ತರುವ ಅವರಿಗೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಅಂತ ಹೇಳಿಕೊಂಡಿರೋ ವಿಚಾರದಲ್ಲೂ ಆಡಳಿತಾರೂಢ ಪಕ್ಷವನ್ನು ಟೀಕಿಸಿದ್ದಾರೆ.
Vijayapura: ಬಿಜೆಪಿ ಎಂದರೆ ಬಿಜಿನೆಸ್ ಜನತಾ ಪಾರ್ಟಿ: ಸರ್ಕಾರದ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ
ಗೀತಾ ಶಿವರಾಜ್ ಕುಮಾರ್ ಅವರು ನಮ್ಮೊಂದಿಗೆ ಇದ್ದಾರೆ: ಅವರು ನಮ್ಮೊಟ್ಟಿಗೆ ಇದ್ದಾರೆ, ಸದ್ಯಕ್ಕೆ ಅವರು ಬರೋಲ್ಲಾ , ನಾನೇ ಅವರನ್ನ ಕರ್ಕೊಂಡು ಬರ್ತೆನೆ, ಈ ಹಿಂದೆ ನಾನು ಜೆಡಿಎಸ್ ನಲ್ಲಿದ್ದೇ, ಆಗಲು ಖುಷಿ ಇಂದ ಇದ್ರು, ಈಗ ಕಾಂಗ್ರೆಸ್ ನಲ್ಲಿ ನಾನು ಇದ್ದೇನೆ ಖುಷಿ ಇದೆ . ಅವರು ನಮ್ಮೊಟ್ಟಿಗೆ ಇದ್ದಾರೆ, ನಾನೇ ಸಮಯ ಬಂದಾಗ ಕರ್ಕೊಂಡು ಬರ್ತೆನೆ ಎಂದು ಹೇಳಿದ್ದಾರೆ.