Asianet Suvarna News Asianet Suvarna News

ಬಿಜೆಪಿ ಸರ್ವಾ​ಧಿಕಾರಿ ಸರ್ಕಾರ: ಮಾಜಿ ಸಚಿವೆ ಉಮಾಶ್ರೀ

ದೇಶ ಮತ್ತು ರಾಜ್ಯದಲ್ಲಿ ಜನವಿರೋಧಿ ಸರ್ಕಾರಗಳು ದುರಾಡಳಿತ ನಡೆಸುತ್ತಿವೆ. ಜನರ ಬದುಕನ್ನು ನಿಸ್ತೇಜನ ಮಾಡುತ್ತಿವ: ಉಮಾಶ್ರೀ 

Former Minister Umashree Slams BJP Government grg
Author
First Published Nov 29, 2022, 2:30 PM IST

ರಬಕವಿ-ಬನಹಟ್ಟಿ(ನ.29):  ರಾಜಕಾರಣದಲ್ಲಿ ಕಾರ್ಯಕರ್ತರಿಗೆ ಗಂಭೀರತೆ ಬರುವವರೆಗೆ ಕಾಂಗ್ರೆಸ್‌ ಪಕ್ಷ ಸದೃಢವಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಮೂಲಭೂತವಾಗಿ ಗಂಭೀರತೆಯಿಂದ ಪಕ್ಷದ ಅಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಬಿಎಲ್‌ಒ-2 ಮತದಾರರ ಪಟ್ಟಿ ಪರಿಷ್ಕರಣಾ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಜನವಿರೋಧಿ ಸರ್ಕಾರಗಳು ದುರಾಡಳಿತ ನಡೆಸುತ್ತಿವೆ. ಜನರ ಬದುಕನ್ನು ನಿಸ್ತೇಜನ ಮಾಡುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಿರುದ್ಯೋಗ ಸಮಸ್ಯೆ ಮಿತಿಮೀರಿದ್ದು, ವಿದ್ಯಾವಂತರ ಪರಿಸ್ಥಿತಿ ಕೆಟ್ಟದಾಗಿದೆ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ವಾ​ಧಿಕಾರಿ ಸರ್ಕಾರ ನಡೆಸುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ನಿರ್ನಾಮವಾಗುತ್ತಿವೆ. ಬಿಜೆಪಿ ಪಕ್ಷ ಮತದಾರರ ಪಟ್ಟಿಯಲ್ಲಿ ಬಹಳಷ್ಟು ಹೆಸರುಗಳನ್ನು ತೆಗೆದು ಹಾಕಿದೆ. ಆದ್ದರಿಂದ ಕಾಂಗ್ರೆಸ್‌ ಪಕ್ಷವನ್ನು ಅ​ಕಾರಕ್ಕೆ ತರುವ ನಿಟ್ಟಿನಲ್ಲಿ ಬಿಎಲ್‌ಒಗಳ ಜವಾಬ್ದಾರಿಗಳು ಅತ್ಯಂತ ಮುಖ್ಯವಾಗಿವೆ ಎಂದರು.

ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲು ಆರ್ ಎಸ್‌ಎಸ್‌ ಸಹಮತಿ ಇದೆ : ಜಯ ಮೃತ್ಯುಂಜಯ ಶ್ರೀ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ ಮಾತನಾಡಿ, 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಿಎಲ್‌ಒ-2 ಕಾರ್ಯಕರ್ತರ ಜವಾಬ್ದಾರಿಗಳು ಅತಿ ಮುಖ್ಯವಾಗಿವೆ. ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ನಡೆಯಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ತೇರದಾಳ ಮತಕ್ಷೇತ್ರದ ಉಸ್ತುವಾರಿ ಬಸವರಾಜ ಶಿಗ್ಗಾಂವಿ ಮಾತನಾಡಿದರು. ಕಾಂಗ್ರೆಸ್‌ ಪಕ್ಷದ ಮುಖಂಡರಾದ ನಜೀರ್‌ ಕಂಗನೊಳ್ಳಿ, ಆನಂದ ಸಿಂಪಿ, ಮಲ್ಲಪ್ಪ ಸಿಂಗಾಡಿ ಇದ್ದರು.

ಲಕ್ಷ್ಮಣ ದೇಸಾರಟ್ಟಿ ಸ್ವಾಗತಿಸಿದರು. ಮಾರುತಿ ಸೋರಗಾವಿ ನಿರೂಪಿಸಿದರು. ಕಿರಣ ಕರಲಟ್ಟಿವಂದಿಸಿದರು. ಕಾರ್ಯಕ್ರಮದಲ್ಲಿ ಸತ್ಯಪ್ಪ ಮಗದುಮ್‌, ಜಿನ್ನಪ್ಪ ಹೊಸೂರ, ವಿದ್ಯಾ ಬಿಳ್ಳೂರ, ಶಾಂತವೀರ ಬೀಳಗಿ, ರಮೇಶ ಸವದಿ, ಶ್ರೀಶೈಲ ಮೇಣಿ, ಪ್ರವೀಣ ಪೂಜಾರಿ, ಬಸವರಾಜ ದ್ಯಾವನ್ನವರ, ರಾಹುಲ ಕಲಾಲ, ಅಶೋಕ ಅಳಗೊಂಡ ಸೇರಿದಂತೆ ತೇರದಾಳ ಮತಕ್ಷೇತ್ರದ ಕಾರ್ಯಕರ್ತರು ಮತ್ತು ಬಿಎಲ್‌ಓ ಗಳು ಇದ್ದರು.
 

Follow Us:
Download App:
  • android
  • ios