ಜೆಡಿಎಸ್‌ನಿಂದ ದೊಡ್ಡ ನಾಯಕನಿಗೆ ಗೇಟ್‌ಪಾಸ್?.. ದಳದಲ್ಲೂ ತಳಮಳ!

ಜಿ ಟಿ ದೇವೆಗೌಡರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡೋ ವಿಚಾರ/ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿಕೆ ಈ ವಿಚಾರ ಚರ್ಚೆಯಾಗಿದ್ದನ್ನು ನಾನು ಸಭೆಯಲ್ಲಿ ನೋಡಿದ್ದೇನೆ/ ರಾಜಕೀಯ ಪಕ್ಷಗಳಲ್ಲೂ ಭಿನ್ನಮತವಿರುತ್ತದೆ/ ಸರಿಪಡಿಸುವ ವಿಚಾರದಲ್ಲಿ ಚರ್ಚೆ ಮಾಡಬೇಕು/ ಎಷ್ಟೇ ದೊಡ್ಡವರಾದರೂ ಇತಿಮಿತಿ ಇರುತ್ತದೆ/ ಪಕ್ಷದಲ್ಲೇ ಇದ್ದು ಪಕ್ಷದ ಬಗ್ಗೆ ಮಾತನಾಡಿದರೆ ಒಪ್ಪಲ್ಲ.

Former Minister Sara mahesh slams JDS Leader GT Devegowda mah

ಬೆಂಗಳೂರು(ಜ.  05)   ಒಂದು ಕಡೆ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಮಾತನಾಡುತ್ತಿರುವಾಗಲೇ ಅತ್ತ ಜೆಡಿಎಸ್‌ನಲ್ಲಿಯೂ ಉಚ್ಛಾಟನೆ ಹೇಳೀಕೆಗಳು ಬರುತ್ತಿವೆ.

ಜಿ.ಟಿ. ದೇವೆಗೌಡರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡೋ ವಿಚಾರ ಸಭೆಯಲ್ಲಿ ಚರ್ಚೆಯಾಗಿದ್ದನ್ನು ಕಂಡಿದ್ದೇನೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.

ಈ ವಿಚಾರ ಚರ್ಚೆಯಾಗಿದ್ದನ್ನು ನಾನು ಸಭೆಯಲ್ಲಿ ನೋಡಿದ್ದೇನೆ. ರಾಜಕೀಯ ಪಕ್ಷಗಳಲ್ಲೂ ಭಿನ್ನಮತವಿರುತ್ತದೆ. ಸರಿಪಡಿಸುವ ವಿಚಾರದಲ್ಲಿ ಚರ್ಚೆ ಮಾಡಬೇಕು. ಎಷ್ಟೇ ದೊಡ್ಡವರಾದರೂ ಇತಿಮಿತಿ ಇರುತ್ತದೆ ಎಂದು ಪರೋಕಕ್ಷವಾಗಿ ಜಿಟಿಡಿಗೆ ಟಾಂಗ್ ಕೊಟ್ಟಿದ್ದಾರೆ.

ಯತ್ನಾಳ್ ನಂತರ ಮತ್ತೊಬ್ಬ MLA ಸ್ಫೋಟ.. 'ಬಡವ ನೀ ಮಡಗ್ದಂಗೆ ಇರು ಅಂತ ಇದ್ದೇವೆ'

ಪಕ್ಷದಲ್ಲೇ ಇದ್ದು ಪಕ್ಷದ ಬಗ್ಗೆ ಮಾತನಾಡಿದರೆ ಒಪ್ಪಲ್ಲ. ನಾನಾಗಲಿ,ಯಾರಾಗಲಿ ಅದು ಎಲ್ಲರಿಗೂ ಅನ್ವಯವಾಗುತ್ತದೆ. ರಾಜ್ಯದ ಜನರೂ ಗಮನಿಸುತ್ತಿದ್ದಾರೆ.  ಎಂದು ಜಿಟಿಡಿ ಉಚ್ಛಾಟನೆ ತೀರ್ಮಾನಕ್ಕೆ ಪರೋಕ್ಷವಾಗಿ  ಸಾ.ರಾ. ಮಹೇಶ್ ತಮ್ಮ  ಬೆಂಬಲ ಇದೆ ಎಂದರು.

"

ಬಿಜೆಪಿ ಶಾಸಕರಿಗೆ ಅನುದಾನ ಸಿಕ್ಕಿಲ್ಲ ಅಂತ ಬಿಜೆಪಿ ಶಾಸಕರೇ ಹೇಳಿಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೂ ಪ್ರತಿಕ್ರಿಯೆ ನೀಡಿ, ಶಾಸಕರಿಗೆ ಅನುದಾನ ನೀಡ್ತಿಲ್ಲವೆಂಬ ಮಾತು ಸರಿಯಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಮಗೆ  2   ಕೋಟಿ ಗ್ರಾಂಟ್ ಕೊಡ್ತೆನೆ ಅಂದಿದ್ರೂ ಅನುದಾನ ಕೊಟ್ಟಿಲ್ಲ. ಇನ್ನು ಕ್ಷೇತ್ರದ ಅನುದಾನ ಎಲ್ಲಿಂದ ಬರುತ್ತದೆ..? ಎಂದು ಪ್ರಶ್ನೆ ಮಾಡಿದೆರು.

ನನ್ನ ಕ್ಷೇತ್ರದಲ್ಲೂ ಅರ್ಧಂಬರ್ಧ ರಸ್ತೆ ಮಾಡಿದ್ದಾರೆ. ಕಂಟ್ರಾಕ್ಟರ್ ಕೇಳಿದ್ರೆ ಬಿಲ್ ಬಂದಿಲ್ಲ ಅಂತಾರೆ. ಶಾಸಕರಿಗೆ ಅನುದಾನ ಸರ್ಕಾರದಿಂದ ಸಿಗ್ತಿಲ್ಲ. ಇದನ್ನೇ ಅವರ ಪಕ್ಷದವರೂ ಹೇಳಿದ್ದಾರೆ ಎಂದರು. 

Latest Videos
Follow Us:
Download App:
  • android
  • ios