ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಸ್ಪರ್ಧೆಗೆ ಹೆಚ್ಚಿದ ಒತ್ತಡ, ಅದನ್ನ ತೀರ್ಮಾನ ಮಾಡೋರು ಅವರೇ ಎಂದ ಸಾರಾ ಮಹೇಶ್!

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಬಗ್ಗೆ ಸಾಕಷ್ಟು ಜನ ನನಗೂ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ‌. ಕಾರ್ಯಕರ್ತರ ಒತ್ತಡ ಇದ್ರೂ ಅದನ್ನ ತೀರ್ಮಾನ ಮಾಡೋದು ನಿಖಿಲ್. ನಿಖಿಲ್ ಕುಮಾರಸ್ವಾಮಿ ಕೂಡ ಈ ಬಗ್ಗೆ ನನ್ನ ಜೊತೆ ಅನೇಕ ಬಾರಿ ಮಾತನಾಡಿದ್ದಾರೆ‌. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡ, ಸಂಘಟನೆ ಮಾಡಬೇಕು ಎಂದಿದ್ದಾರೆ: ಮಾಜಿ ಸಚಿವ ಸಾರಾ ಮಹೇಶ್ 

Former Minister Sara Mahesh react to Nikhil Kumaraswamy Contest in Channapatna Byelection grg

ರಾಮನಗರ(ಅ.17):  ಚನ್ನಪಟ್ಟಣ ಎಚ್‌.ಡಿ.ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿದೆ. ಈಗ ಎನ್‌ಡಿಎ ಅಭ್ಯರ್ಥಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು. ಇವತ್ತು ಪೂರ್ವಭಾವಿಯಾಗಿ ಚರ್ಚೆ ಮಾಡ್ತಿದ್ದೇವೆ. ಅಭ್ಯರ್ಥಿ ಆಯ್ಕೆ ಬಗ್ಗೆ ಎರಡೂ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಬೇಕು ಅಷ್ಟೇ ಎಂದು ಮಾಜಿ ಸಚಿವ ಸಾರಾ ಮಹೇಶ್ ತಿಳಿಸಿದ್ದಾರೆ. 

ಇಂದು(ಗುರುವಾರ) ಜಿಲ್ಲೆಯ ಬಿಡದಿ ತೋಟದ ಮನೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾರಾ ಮಹೇಶ್ ಅವರು, ಕಾಂಗ್ರೆಸ್ ಸರ್ಕಾರ ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರಿಂದ ಜನ ಬೇಸತ್ತಿದ್ದಾರೆ. ಹಾಗಾಗಿ ಈ ಮೂರು ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. 

ಚನ್ನಪಟ್ಟಣ ಟಿಕೆಟ್‌ ನನಗೇ ಎಂದ ಯೋಗೇಶ್ವರ್‌: ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಿಷ್ಟು

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹೆಚ್ಚಳದ ವಿಚಾರದ ಬಗ್ಗೆ ಮಾತನಾಡಿದ ಸಾರಾ ಮಹೇಶ್ ಅವರು, ಸಾಕಷ್ಟು ಜನ ನನಗೂ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ‌. ಕಾರ್ಯಕರ್ತರ ಒತ್ತಡ ಇದ್ರೂ ಅದನ್ನ ತೀರ್ಮಾನ ಮಾಡೋದು ನಿಖಿಲ್. ನಿಖಿಲ್ ಕುಮಾರಸ್ವಾಮಿ ಕೂಡ ಈ ಬಗ್ಗೆ ನನ್ನ ಜೊತೆ ಅನೇಕ ಬಾರಿ ಮಾತನಾಡಿದ್ದಾರೆ‌. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡ, ಸಂಘಟನೆ ಮಾಡಬೇಕು ಎಂದಿದ್ದಾರೆ. ಕುಮಾರಸ್ವಾಮಿ ಕೂಡ ದೆಹಲಿಯಲ್ಲಿ ಇರ್ತಾರೆ. ಇರೋ ಮೂರುವರೆ ವರ್ಷದಲ್ಲಿ ನಿಖಿಲ್ ಪಕ್ಷ ಸಂಘಟನೆ ಮಾಡಬೇಕು. ಹಾಗಾಗಿ ವೈಯಕ್ತಿಕವಾಗಿ ಚುನಾವಣೆಗೆ ಆಸಕ್ತಿ ಇಲ್ಲ ಎಂದಿದ್ದಾರೆ. ಈ ಬಗ್ಗೆ ನಿಖಿಲ್ ಅನೇಕ ಬಾರಿ ಚರ್ಚೆ ಮಾಡಿದ್ದಾರೆ. ಮೈತ್ರಿ ಪಕ್ಷ ಏನು ತೀರ್ಮಾನ ಮಾಡುತ್ತೋ ನೋಡೊಣ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios