ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರವಿದೆ, ಹಿಂದೂಗಳಿಗೆ ರಕ್ಷಣೆ ಇಲ್ಲ: ಅಶೋಕ್
ಶಿವಮೊಗ್ಗದಲ್ಲಿ ನಡೆದದ್ದು ಕಾಂಗ್ರೆಸ್ ಪ್ರೇರಿತ ಗಲಾಟೆ. ಮುಸ್ಲಿಂ ಭಯೋತ್ಪಾದಕರು ಹೊಡೆಯುವ ಏಟಿಗೆ ಪೊಲೀಸರೇ ಓಡಿ ಹೋದರು. ಇದು ತಾಲಿಬಾನ್ ಸಂಸ್ಕೃತಿ. ಶಿವಮೊಗ್ಗದಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಗಲಭೆಯಲ್ಲಿ ಯಾರು ಭಾಗಿಯಾಗಿದ್ದಾರೋ ಅವರನ್ನು ಬಂಧಿಸಬೇಕು. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಮಾಜಿ ಗೃಹ ಸಚಿವ ಆರ್.ಅಶೋಕ್

ಬೆಂಗಳೂರು(ಅ.07): ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ನಡೆಯುತ್ತಿದೆ ಎಂದು ಮಾಜಿ ಗೃಹ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ರಾಜ್ಯದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಪಾಕಿಸ್ತಾನದವರನ್ನು ಅಣ್ಣ-ತಮ್ಮ ಎನ್ನುವವರು ಯಾವ ಭಾರತೀಯರು ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ನಡೆದದ್ದು ಕಾಂಗ್ರೆಸ್ ಪ್ರೇರಿತ ಗಲಾಟೆ. ಮುಸ್ಲಿಂ ಭಯೋತ್ಪಾದಕರು ಹೊಡೆಯುವ ಏಟಿಗೆ ಪೊಲೀಸರೇ ಓಡಿ ಹೋದರು. ಇದು ತಾಲಿಬಾನ್ ಸಂಸ್ಕೃತಿ. ಶಿವಮೊಗ್ಗದಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಗಲಭೆಯಲ್ಲಿ ಯಾರು ಭಾಗಿಯಾಗಿದ್ದಾರೋ ಅವರನ್ನು ಬಂಧಿಸಬೇಕು. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸೋನಿಯಾ ಗಾಂಧಿ ತೃಪ್ತಿಪಡಿಸಲು ತಮಿಳನಾಡಿಗೆ ಕಾವೇರಿ ನೀರು: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಆಕ್ರೋಶ
ಈ ಹಿಂದೆ ಕೋಮುಗಲಭೆ, ಹಿಜಾಬ್ ಗಲಾಟೆ ಆದಾಗ ಕಾಂಗ್ರೆಸ್ ಯಾರ ಪರ ನಿಂತಿತ್ತು ಎಂಬುದು ಗೊತ್ತಿದೆ. ಶಾಸಕರು ಅನುದಾನ ಇಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿದ್ದರೆ ಮುಸ್ಲಿಮರಿಗೆ 10 ಸಾವಿರ ಕೋಟಿ ರು. ಕೊಡಲು ಹೊರಟಿದ್ದಾರೆ. ಹಿಂದೂ ವಿರೋಧಿ ಹಾಗೂ ಅಲ್ಪಸಂಖ್ಯಾತರ ಓಲೈಕೆ ಆಡಳಿತದ ಮೂಲಕ ಶೇ.100 ರಷ್ಟು ತಾಲಿಬಾನ್ ಸರ್ಕಾರವನ್ನು ನೆನಪಿಸುತ್ತಿದೆ. ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.