Asianet Suvarna News Asianet Suvarna News

ಕಾಂಗ್ರೆಸ್ಸಿಂದ ರಾಜ್ಯಪಾಲರ ವಿರುದ್ಧ ಅರ್ಥಹೀನ ರಾಜಕಾರಣ: ಈಶ್ವರಪ್ಪ

ರಾಜ್ಯಪಾಲರ ಹುದ್ದೆಗೆ ಘನತೆ ಇದೆ. ಸಂವಿಧಾನ ರಕ್ಷಕರಂತೆ ಮಾತನಾಡಿದ ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲರ ಭಾವಚಿತ್ರವನ್ನು ಸುಡುವುದು, ಅವಹೇಳನ ಮಾಡುವುದು ಸಂವಿಧಾನ ವಿರೋಧಿ ಚಟುವಟಿಕೆ ಎಂದು ಗೊತ್ತಿಲ್ಲವೇ? ಎಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ 

Former Minister KS Eshwarappa Slams Karnataka Congress grg
Author
First Published Sep 3, 2024, 12:13 PM IST | Last Updated Sep 3, 2024, 12:13 PM IST

ಶಿವಮೊಗ್ಗ(ಸೆ.03):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ್ದನ್ನು ಮುಂದಿಟ್ಟುಕೊಂಡು ರಾಜಭವನ ಚಲೋ ಮಾಡುವ ಮೂಲಕ ಕಾಂಗ್ರೆಸ್ ನಾಯಕರು ಅರ್ಥಹೀನ ರಾಜಕಾರಣ ನಡೆಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡರಿದರು. 

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯಪಾಲರ ಹುದ್ದೆಗೆ ಘನತೆ ಇದೆ. ಸಂವಿಧಾನ ರಕ್ಷಕರಂತೆ ಮಾತನಾಡಿದ ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲರ ಭಾವಚಿತ್ರವನ್ನು ಸುಡುವುದು, ಅವಹೇಳನ ಮಾಡುವುದು ಸಂವಿಧಾನ ವಿರೋಧಿ ಚಟುವಟಿಕೆ ಎಂದು ಗೊತ್ತಿಲ್ಲವೇ? ಎಂದರು. 

ಭ್ರಷ್ಟಾಚಾರದಿಂದ ಮುಕ್ತವಾದರೆ ಸಹಕಾರ ಕ್ಷೇತ್ರ ಪ್ರಗತಿ: ಸಂಸದ ಬಿ.ವೈ.ರಾಘವೇಂದ್ರ

ಕುಮಾರಸ್ವಾಮಿ, ನಿರಾಣಿ, ಜೊಲ್ಲೆ ರೆಡ್ಡಿಗೆ ಸಂಬಂಧಿಸಿದಂತೆ ಲೋಕಾಯುಕ್ತದಿಂದ ದೂರು ಇಲ್ಲ, ರಾಜ್ಯಪಾಲರ ಬಳಿ ಯಾವುದೇ ಕಡತಗಳೂ ಇಲ್ಲ. ಈ ಬಗ್ಗೆ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ ಎಂದರು.

Latest Videos
Follow Us:
Download App:
  • android
  • ios