ಸರ್ಕಾರ ಬದುಕಿದೆಯೋ ಇಲ್ಲವೋ?: ಈಶ್ವರಪ್ಪ ಆಕ್ರೋಶ

ಸರ್ಕಾರ ಬದುಕಿದೆಯೋ ಇಲ್ಲವೋ ಎಂದು ಇಡೀ ರಾಜ್ಯದ ಜನ ನೋಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಭ್ರಷ್ಟಾಚಾರ ಬಹಿರಂಗವಾಗಿತ್ತು . ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ದಿನವೇ 50 ಲಕ್ಷ ರೂ ಪರಿಹಾರ ಕ್ಕೆ ಆಗ್ರಹ ಮಾಡಿದ್ದೆ. ನಾವು ಅಂದು ಮೂರು ಲಕ್ಷ ವೈಯಕ್ತಿಕ ಪರಿಹಾರ ನೀಡಿದ್ದೆವು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ 

Former Minister KS Eshwarappa Slams Karnataka Congress Government grg

ಶಿವಮೊಗ್ಗ(ಸೆ.09):  ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಬಯಲಿಗೆಳೆದ ಅಧಿಕಾರಿ ಚಂದ್ರಶೇಖರ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿಲ್ಲ. ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರ ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಸಚಿವ ಮಹದೇವಪ್ಪನವರ ಬಳಿ ಚಂದ್ರಶೇಖರ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದೆವು. ಸರ್ಕಾರ  ಸೆ.10 ರೊಳಗೆ ಸರ್ಕಾರ ನೀಡದಿದ್ದರೆ ರಾಷ್ಟ್ರ ಭಕ್ತರ ಬಳಗದಿಂದ 5 ಲಕ್ಷ ರೂ. ಸಂಗ್ರಹಿಸಿ ಕುಟುಂಬಕ್ಕೆ ಕೊಡುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.  

ಇಂದು(ಸೋಮವಾರ) ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ ಅವರು, ಸೆಪ್ಟೆಂಬರ್ 20 ರೊಳಗೆ ಸರ್ಕಾರ ನೀಡದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಜೈಲ್ ಹೀರೋ ಚಳುವಳಿ ನಡೆಸುತ್ತೇವೆ. ಸರ್ಕಾರ ಘೋಷಿಸಿದ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರ ಬಿಡುಗಡೆ ಮಾಡಿದರೆ ಮುಗೀತು ನಮಗೆ ಜೈಲಿಗೆ ಹೋಗುವ ಚಟ ಇಲ್ಲ ಎಂದು ಹೇಳಿದ್ದಾರೆ. 

ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಗೆ ತೊಂದರೆ ಆಗದಿರಲಿ, ಈಶ್ವರಪ್ಪ ಪ್ರಾರ್ಥನೆ

ಸರ್ಕಾರ ಬದುಕಿದೆಯೋ ಇಲ್ಲವೋ ಎಂದು ಇಡೀ ರಾಜ್ಯದ ಜನ ನೋಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಭ್ರಷ್ಟಾಚಾರ ಬಹಿರಂಗವಾಗಿತ್ತು . ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ದಿನವೇ 50 ಲಕ್ಷ ರೂ ಪರಿಹಾರ ಕ್ಕೆ ಆಗ್ರಹ ಮಾಡಿದ್ದೆ. ನಾವು ಅಂದು ಮೂರು ಲಕ್ಷ ವೈಯಕ್ತಿಕ ಪರಿಹಾರ ನೀಡಿದ್ದೆವು ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios