Asianet Suvarna News Asianet Suvarna News

ಮುಸ್ಲಿಂರಿಗೆ ಟಿಕೆಟ್‌ ನೀಡಲ್ಲ ಅಂತ ಹೇಳಿ ಉಲ್ಟಾ ಹೊಡೆದ ಈಶ್ವರಪ್ಪ..!

ರಾಷ್ಟ್ರ ಭಕ್ತರ ಬಳಗದಿಂದ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿಕೆ ನೀಡಿ ಈಶ್ವರಪ್ಪ  ತಕ್ಷಣವೇ ಯೂಟರ್ನ್ ಹೊಡೆದಿದ್ದಾರೆ. ಇಷ್ಟು ದಿನ ಮುಸ್ಲಿಂ ಸಮುದಾಯ ಬಿಜೆಪಿ ಮತ್ತು ರಾಷ್ಟ್ರ ಭಕ್ತರ ಬಳಗದ ಜೊತೆಯಲ್ಲಿ ಇಲ್ಲ. ಮುಸ್ಲಿಂ ಸಮುದಾಯದಲ್ಲಿ ರಾಷ್ಟ್ರಭಕ್ತರು ಇದ್ದರೆ ಅಪೇಕ್ಷೆ ಪಟ್ಟರೆ ಪರಿಶೀಲನೆ ನಡೆಸಲಾಗುವುದು ಎಂದ ಈಶ್ವರಪ್ಪ

former minister ks eshwarappa react to shivamogga city corporation election ticket to muslims grg
Author
First Published Aug 16, 2024, 12:08 PM IST | Last Updated Aug 16, 2024, 12:08 PM IST

ಶಿವಮೊಗ್ಗ(ಆ.16): ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯನ್ನು ಶೀಘ್ರವೇ ಮಾಡಬೇಕು. ರಾಷ್ಟ್ರ ಭಕ್ತರ ಬಳಗದಿಂದ ಪಾಲಿಕೆಯ 35 ವಾರ್ಡ್‌ಗಳಲ್ಲೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವಕ್ಕೆ ಮೊದಲ ಆದ್ಯತೆ. ವಾರ್ಡ್‌ಗಳ ನಡುವೆ ಜನಸಂಪರ್ಕ ಇರುವ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿದೆ?. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ, ಶಿಮೂಲ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಎರಡೂ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ. 

ತಮಗೆ ಬೇಕಾದವರಿಗೆ ಮಾತ್ರ ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ: ಕೆ.ಎಸ್‌.ಈಶ್ವರಪ್ಪ ಆಕ್ರೋಶ

ರಾಷ್ಟ್ರ ಭಕ್ತರ ಬಳಗದಿಂದ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿಕೆ ನೀಡಿ ಈಶ್ವರಪ್ಪ  ತಕ್ಷಣವೇ ಯೂಟರ್ನ್ ಹೊಡೆದಿದ್ದಾರೆ. ಇಷ್ಟು ದಿನ ಮುಸ್ಲಿಂ ಸಮುದಾಯ ಬಿಜೆಪಿ ಮತ್ತು ರಾಷ್ಟ್ರ ಭಕ್ತರ ಬಳಗದ ಜೊತೆಯಲ್ಲಿ ಇಲ್ಲ. ಮುಸ್ಲಿಂ ಸಮುದಾಯದಲ್ಲಿ ರಾಷ್ಟ್ರಭಕ್ತರು ಇದ್ದರೆ ಅಪೇಕ್ಷೆ ಪಟ್ಟರೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ ಅವರು, ಚುನಾವಣೆಯಲ್ಲಿ ಸ್ಪರ್ಧೆ ಮಾಡುವವನು ನಾನು, ನೆಗೆದು ಬಿದ್ದು ಹೋಗುತ್ತೇನೆ ಎಂದು ಕೊಳ್ತೆನಾ?. ರಾಜಕಾರಣದಲ್ಲಿ  ಗೆಲ್ಲುತ್ತಾರೆ ಮತ್ತು ಸೋಲುತ್ತಾರೆ. ಇಂದಿರಾ ಗಾಂಧಿ, ಸಿದ್ದರಾಮಯ್ಯ ಬಹಳಷ್ಟು ನಾಯಕರ ಸೋಲು ಕಂಡಿದ್ದಾರೆ. ಇದಕ್ಕೆ ಹೋಗುವರು ಗೆಲ್ಲುತ್ತೇನೆ ಎಂದೆ ಹೋಗಬೇಕು ಸೋಲುತ್ತೇನೆ ಎಂದು ಹೋಗುವರು ಧೀರನಾ? ಎಂದು ಹೇಳಿದ್ದಾರೆ.  

ಬಳ್ಳಾರಿ ಪಾದಯಾತ್ರೆ ನಡೆದ್ರೆ ಬಿಜೆಪಿ ಇಬ್ಭಾಗ: ಈಶ್ವರಪ್ಪ

ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕು. ನನ್ನ ಜೀವನದಲ್ಲಿ ಯಾವುದೇ ಚುನಾವಣೆ ನಿಲ್ಲಲು ನಾನು ಬೆಂಬಲ ನೀಡಿಲ್ಲ. ಚುನಾವಣೆ ಬಿಟ್ಟರೆ ಪ್ರಜಾಪ್ರಭುತ್ವ ಇಲ್ಲದಂತೆ ಆಗುತ್ತದೆ ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟುಬಿಡಿ. ಯಾವ ಮೀಸಲಾತಿಯಿತ್ತೋ ಅದೇ ಮೀಸಲಾತಿಯಲ್ಲಿ ಚುನಾವಣೆ ನಡೆಸಿ ಇಲ್ಲವೇ ಬದಲಾಯಿಸಿ ಮಾಡಿ ಎಂದು ಹೇಳಿದ್ದಾರೆ. 

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂತೇಶ್ ಸ್ಪರ್ಧೆ ಮಾಡುವುದಿಲ್ಲ. ಚಕ್ರ ಸುತ್ತುತ್ತಾ ಇದೆ ಮೋಸ ಮಾಡಿದ್ದಾರೆ. ಭಗವಂತ ಇದ್ದಾನೆ ಮೋಸ ಮಾಡಿದವರು ಇಂದಲ್ಲ ನಾಳೆ ಅನುಭವಿಸುತ್ತಾರೆ. ಹಾವೇರಿ ಲೋಕಸಭಾ ಚುನಾವಣೆಯಲ್ಲಿ ತಮಗೆ ಮೋಸ ಮಾಡಿದ್ದಾರೆಂದು ಇಂದಿಗೂ ಕ್ಷೇತ್ರ ಜನ ಬಂದು ಹೇಳುತ್ತಾರೆ ಎಂದು ಹೇಳುತ್ತಾರೆ. 

Latest Videos
Follow Us:
Download App:
  • android
  • ios