ಕೊರೋನಾದಲ್ಲೂ ಭ್ರಷ್ಟಾಚಾರ ಮಾಡೋದು ಬಿಜೆಪಿ ಸಂಸ್ಕಾರವೇ..?
ಕಾಂಗ್ರೆಸ್ ದಾಖಲೆಗಳ ಸಮೇತ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನ ಬಯಲು ಮಾಡಿದೆ| ಅಧಿಕಾರ ದುರುಪಯೋಗ ಪಡಿಸಿಕೊಂಡು ವ್ಯಾಹತವಾಗಿ ಅಕ್ರಮ ನಡೆಸಲಾಗುತ್ತಿದೆ| ಪ್ರತಿ ವೆಂಟಿಲೇಟರ್‌ಗೆ 4 ಲಕ್ಷ ಎಂದು ಕೇಂದ್ರ ಸರ್ಕಾರದ ಸ್ಪಷ್ಟವಾಗಿದೆ ದರ ಸೂಚಿಸಿದ್ದರೂ ರಾಜ್ಯದಲ್ಲಿ ಮನಬಂದಂತೆ ದರ ನಿಗದಿಪಡಿಸಲಾಗಿದೆ|
ರಾಯಚೂರು(ಜು.31): ಮಹಾಮಾರಿ ಕೊರೋನಾ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ. ಕೋವಿಡ್ ಕಷ್ಟ, ನಷ್ಟ, ಸಾವು ದೇಶ ಕಾಣುತ್ತಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದೆ. ಕಳೆದ ಎರಡು ತಿಂಗಳಿನಿಂದ ಸೋಂಕಿತರ ಸಂಖ್ಯೆ, ಸಾವು ಹೆಚ್ಚಾಗುತ್ತಿದ್ದರೂ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರ ಇದನ್ನ ಗಂಭಿರವಾಗಿ ಪರಿಗಣಿಸಿಯೇ ಇಲ್ಲ ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರು ಆರೋಪಿಸಿದ್ದಾರೆ.
ಇಂದು(ಶುಕ್ರವಾರ) ನಗರದ ಡಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಮಾತನಾಡಿದ ಅವರು, ಮುಂಚೆಯೇ ಕಠಿಣ ಎಚ್ಚರಿಕೆ ವಹಿಸಿದ್ದರೆ ಹೊಸ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರಲಿಲ್ಲ. ಇದು ಆಡಳಿತದ ವೈಫಲ್ಯವನ್ನು ಎದ್ದು ಕಾಣುವಂತೆ ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಕೊರೋನಾಕ್ಕಿಂತ ದೊಡ್ಡ ರೋಗ ಬಿಜೆಪಿ ಸರ್ಕಾರದ ಭ್ರಷ್ಟಾಚಾರ: ಡಿ.ಕೆ. ಶಿವಕುಮಾರ್
ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳು ಸಾಯುತ್ತಿವೆ. ಔಷಧಿ, ಮದ್ದಿಲ್ಲ ಆದರೂ ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರದ ಮೇಲ್ವಿಚಾರಣೆ ವಿಫಲವೇ ಕಾರಣ ಎಂದು ದೂರಿದ್ದಾರೆ.
ಇಂತಹ ದುರಂತದಲ್ಲೂ ಬಿಜೆಪಿ ಸರ್ಕಾರ ಹಣ ಮಾಡಿಕೊಳ್ಳುತ್ತಿದೆ. ಕೊರೋನಾದಲ್ಲೂ ಭ್ರಷ್ಟಾಚಾರ ಮಾಡೋದು ಇದು ಬಿಜೆಪಿ ಪಕ್ಷದ ಸಂಸ್ಕಾರವೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ದಾಖಲೆಗಳ ಸಮೇತ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನ ಬಯಲು ಮಾಡಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ವ್ಯಾಹತವಾಗಿ ಅಕ್ರಮ ನಡೆಸಲಾಗುತ್ತಿದೆ. ಖಾಸಗಿ ಸಂಘ, ಸಂಸ್ಥೆಗಳೇ ಆರೋಪಿಸಿದ್ದರಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸರ್ಕಾರ ಮಾಹಿತಿ ಕೊಡುತ್ತಿಲ್ಲ. ಸ್ಥಳ ಪರಿಶೀಲನೆಗೆ ಅವಕಾಶ ನೀಡಿಲ್ಲ, ಅದಕ್ಕೆ ಸಂಬಂಧಿಸಿದ ದಾಖಲೆ ಸರ್ಕಾರ ಕೊಡುತ್ತಿಲ್ಲ. ಪ್ರತಿ ವೆಂಟಿಲೇಟರ್‌ಗೆ 4 ಲಕ್ಷ ಎಂದು ಕೇಂದ್ರ ಸರ್ಕಾರದ ಸ್ಪಷ್ಟವಾಗಿದೆ ದರ ಸೂಚಿಸಿದ್ದರೂ ರಾಜ್ಯದಲ್ಲಿ ಮನಬಂದಂತೆ ದರ ನಿಗದಿಪಡಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಆರೋಪಿಸಿದ್ದಾರೆ.