Asianet Suvarna News Asianet Suvarna News

ಸಿದ್ದರಾಮಯ್ಯ ಕಾಂಗ್ರೆಸ್‌ ಅಂದರೆ ತಾನೇ ಅಂತ ತಿಳಿದುಕೊಂಡಂತಿದೆ: ಕಾಂಗ್ರೆಸ್‌ ನಾಯಕ

ಈಗ ‘ಮತ್ತೆ ಸಿಎಂ’ ಆಗೋ ವಿಚಾರ ಯಾಕೆ?: ಸಿದ್ದುಗೆ ಎಚ್ಕೆ ಪಾಟೀಲ ಟಾಂಗ್‌| ಸಿದ್ದು ಆಶ್ವಾ​ಸನೆಗಳ ಬಗ್ಗೆ ಮಾಜಿ ಸಚಿವ ಅಸ​ಮಾ​ಧಾ​ನ| ತಾವು ಮತ್ತೆ ಮುಖ್ಯಮಂತ್ರಿಯಾದರೆ 10ಕೆ.ಜಿ. ಉಚಿತ ಅಕ್ಕಿ ನೀಡುವುದಾಗಿ ಹೇಳಿದ್ದ ಸಿದ್ದರಾಮಯ್ಯ| 

Former Minister H K Patil Reacts on Siddaramaiah Statement grg
Author
Bengaluru, First Published Oct 24, 2020, 11:12 AM IST

ಕೊಪ್ಪಳ(ಅ.24): ಮತ್ತೆ ಮುಖ್ಯಮಂತ್ರಿಯಾದರೆ 10 ಕೆ.ಜಿ. ಅಕ್ಕಿ ನೀಡುತ್ತೇನೆ ಎಂದು ಹೇಳಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಎಚ್‌.ಕೆ.ಪಾಟೀಲ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ವಿಚಾರ ಈಗ ಯಾಕೆ? ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಶಾಸಕರು, ಹೈಕಮಾಂಡ್‌ ತೀರ್ಮಾನಿಸುತ್ತದೆ ಎಂದು ಕುಟುಕಿದ್ದಾರೆ.

ಶುಕ್ರವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಂದರೆ ತಾನೇ ಅಂತ ತಿಳಿದುಕೊಂಡಂತಿದೆ. ಇದೇ ಕಾರಣಕ್ಕೆ ಮತ್ತೆ ಮುಖ್ಯಮಂತ್ರಿಯಾದರೆ ಉಚಿತ ಅಕ್ಕಿ ನೀಡುವುದಾಗಿ ಹೇಳುತ್ತಿದ್ದಾರೆ.

ದಳದಲ್ಲಿದ್ದಾಗ ನಾನು ಸಿಎಂ ಆಗೋದನ್ನ ತಡೆದವರು ಯಾರು? ಮಾಜಿ ಸಿಎಂ ಹೇಳಿದ ಇತಿಹಾಸ

ಈಗ ಆ ವಿಚಾರಗಳೆಲ್ಲ ಯಾಕೆ? ಚುನಾವಣೆ ಬರಲಿ, ಪಕ್ಷ ಗೆದ್ದ ಬಳಿಕ ಶಾಸಕರು, ಹೈಕಮಾಂಡ್‌ ಸೇರಿಕೊಂಡು ಮುಂದೆ ಯಾರು ಮುಖ್ಯಮಂತ್ರಿ ಆಗಬೇಕೆಂದು ನಿರ್ಧರಿಸುತ್ತಾರೆ ಎಂದು ಹೇಳಿದರು. ಇತ್ತೀಚೆಗಷ್ಟೇ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ತಾವು ಮತ್ತೆ ಮುಖ್ಯಮಂತ್ರಿಯಾದರೆ 10ಕೆ.ಜಿ. ಉಚಿತ ಅಕ್ಕಿ ನೀಡುವುದಾಗಿ ಹೇಳಿದ್ದರು.
 

Follow Us:
Download App:
  • android
  • ios