Asianet Suvarna News Asianet Suvarna News

ಸೋಮಣ್ಣ ಸೋತಿದ್ದಷ್ಟೇ ಅಲ್ಲ, ಮಂತ್ರಿ ಮಾಡಿದ್ದನ್ನೂ ಹೇಳಬೇಕು: ಜೀವರಾಜ್

ಸೋಮಣ್ಣ ಎರಡು ಬಾರಿ ಸೋತಾಗಲೂ ಬಿಜೆಪಿ ಅವರನ್ನು ಮಂತ್ರಿ ಮಾಡಿದೆ. ಆಗ ನಾನು ಎಂಎಲ್ಎ. ಸೋಮಣ್ಣ ಅವರಿಗೆ ನಾನೂ ಮತ ಹಾಕಿದ್ದೇನೆ. ಅವರು ಬರೀ ಸೋತಿದ್ದು ಮಾತ್ರ ಹೇಳಬಾರದು, ಮಂತ್ರಿ ಮಾಡಿರುವುದನ್ನೂ ಹೇಳಿಕೊಳ್ಳಬೇಕು: ಮಾಜಿ ಸಚಿವ ಡಿ.ಎನ್‌. ಜೀವರಾಜ್‌ 

Former Minister DN Jeevaraj Talks Over V Somanna grg
Author
First Published Oct 11, 2023, 12:17 PM IST

ಚಿಕ್ಕಮಗಳೂರು(ಅ.11):  ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿಗೆ ಬಂದು ನಾಲ್ಕು ಬಾರಿ ಸೋತೆ ಎಂದು ಹೇಳುತ್ತಾರೆ. ಆದರೆ ಅವರು ಸೋತಿದ್ದು ಮಾತ್ರ ಹೇಳಬಾರದು, ಮೂರು ಬಾರಿ ಗೆಲ್ಲಿಸಿ, ಮಂತ್ರಿ ಮಾಡಿದ್ದನ್ನೂ ಹೇಳಬೇಕು ಎಂದು ಮಾಜಿ ಸಚಿವ ಡಿ.ಎನ್‌. ಜೀವರಾಜ್‌ ತಿರುಗೇಟು ನೀಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮಣ್ಣ ಎರಡು ಬಾರಿ ಸೋತಾಗಲೂ ಬಿಜೆಪಿ ಅವರನ್ನು ಮಂತ್ರಿ ಮಾಡಿದೆ. ಆಗ ನಾನು ಎಂಎಲ್ಎ. ಸೋಮಣ್ಣ ಅವರಿಗೆ ನಾನೂ ಮತ ಹಾಕಿದ್ದೇನೆ. ಅವರು ಬರೀ ಸೋತಿದ್ದು ಮಾತ್ರ ಹೇಳಬಾರದು, ಮಂತ್ರಿ ಮಾಡಿರುವುದನ್ನೂ ಹೇಳಿಕೊಳ್ಳಬೇಕು ಎಂದು ತಿಳಿಸಿದರು.

ಅಧಿಕಾರ, ವೋಟ್‌ಬ್ಯಾಂಕ್‌ ರಾಜಕಾರಣಕ್ಕೆ ಪ್ಯಾಲೆಸ್ತಾನ್ ಪರ ನಿಂತ ಕಾಂಗ್ರೆಸ್; ಡಿಎನ್ ಜೀವರಾಜ್ ಕಿಡಿ

ಹೋದ ಎಲ್ಲಾ ಪಕ್ಷದಲ್ಲೂ ಅಧಿಕಾರ ಮಾಡುತ್ತೇವೆ ಅನ್ನೋ ಮನಸ್ಥಿತಿ ಸರಿಯಲ್ಲ, ಇರುವ ಪಕ್ಷಕ್ಕೆ ನಿಷ್ಠೆ ತೋರಬೇಕು, ಪಕ್ಷಕ್ಕೆ ಸೋಲಾದಾಗ ಜೊತೆಯಲ್ಲಿರಬೇಕು ಎಂದರು.

Follow Us:
Download App:
  • android
  • ios