ದೇಶದಲ್ಲಿ ಮೋದಿ ಅಲೆ ಇದ್ದು, ಈ ಬಾರಿ ಎಲ್ಲರೂ ಬಿಜೆಪಿಗೆ ಓಟು ಹಾಕ್ತಾರೆ: ಸಿ.ಟಿ.ರವಿ
ಸಿದ್ದರಾಮಯ್ಯ ವಿಧಾನಸಭಾ ಚುನಾವಣೆಯ ಗುಂಗಿನಲ್ಲಿಯೇ ಮತ ಕೇಳುತ್ತಿದ್ದಾರೆ, ಇದು ರಾಷ್ಟ್ರೀಯ ಚುನಾವಣೆ, ರಾಷ್ಟ್ರ ಮಟ್ಟದ ಸಮಾವೇಶಗಳು ಮಾಡಿವರೆಲ್ಲಾ ಎಲ್ಲಿ ಹೋದರು, ಕೇರಳದಲ್ಲಿ ರಾಹುಲ್ ಗಾಂಧಿ ವಿರುದ್ಧವೇ ಕಮ್ಯುನಿಸ್ಟ್ ಪಾರ್ಟಿ ಸ್ಪರ್ಧೆ ಮಾಡಿದೆ ಎಲ್ಲಿ ಹೋಯಿತು ನಿಮ್ಮ ಮೈತ್ರಿ ಎಂದು ಇಂಡಿಯಾ ಮೈತ್ರಿ ಕೂಟಕ್ಕೆ ಕುಟುಕಿದ ಸಚಿವ ಸಿ.ಟಿ.ರವಿ
ಕೋಲಾರ(ಏ.14): ದೇಶದಲ್ಲಿ ಮೋದಿ ಅಲೆ ಇದೆ, ಕಳೆದ ಭಾರಿ ಕಾಂಗ್ರೆಸ್‌ಗೆ ಮತ ಹಾಕಿದವರೆಲ್ಲಾ ಈ ಭಾರಿ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ತಾಲೂಕಿನ ಮುದುವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ೨೮ಕ್ಕೆ ೨೮ ಕ್ಷೇತ್ರ ಎನ್‌ಡಿಎ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಹೆಸರು ಹೇಳಲೂ ಭಯ, ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳಿದರೆ ಬರುವ ಮತಗಳೂ ಕಾಂಗ್ರೆಸ್‌ಗೆ ಬರಲ್ಲ ಅನ್ನೋ ಭಯ ಕಾಡುತ್ತಿದೆ ಎಂದರು.
ಸಿದ್ದರಾಮಯ್ಯ ವಿಧಾನಸಭಾ ಚುನಾವಣೆಯ ಗುಂಗಿನಲ್ಲಿಯೇ ಮತ ಕೇಳುತ್ತಿದ್ದಾರೆ, ಇದು ರಾಷ್ಟ್ರೀಯ ಚುನಾವಣೆ, ರಾಷ್ಟ್ರ ಮಟ್ಟದ ಸಮಾವೇಶಗಳು ಮಾಡಿವರೆಲ್ಲಾ ಎಲ್ಲಿ ಹೋದರು, ಕೇರಳದಲ್ಲಿ ರಾಹುಲ್ ಗಾಂಧಿ ವಿರುದ್ಧವೇ ಕಮ್ಯುನಿಸ್ಟ್ ಪಾರ್ಟಿ ಸ್ಪರ್ಧೆ ಮಾಡಿದೆ ಎಲ್ಲಿ ಹೋಯಿತು ನಿಮ್ಮ ಮೈತ್ರಿ ಎಂದು ಇಂಡಿಯಾ ಮೈತ್ರಿ ಕೂಟಕ್ಕೆ ಕುಟುಕಿದರು. ನೀತಿ, ನೇತೃತ್ವ, ನಿಯತ್ತು ಎಂಬ ಮೂರು ವಿಷಯಗಳನ್ನು ಮುಂದಿಟ್ಟು ಬಿಜೆಪಿ ಮತ ಕೇಳುತ್ತಿದ್ದೇವೆ, ಕಾಂಗ್ರೆಸ್‌ಗೆ ನೀತಿ, ನೇತೃತ್ವ, ನಿಯತ್ತು ಎನ್ನುವುದು ಕಾಂಗ್ರೆಸ್‌ನವರ ಡಿಕ್ಷನರಿಯಲ್ಲಿಯೇ ಇಲ್ಲ, ಕಾಂಗ್ರೆಸ್ ನಮಗೆ ಬೆಂಬಲಿಸುವ ಬಗ್ಗೆ ಖಾಸಗಿಯಾಗಿ ಮಾತನಾಡಿದ್ದಾರೆ, ಎಲ್ಲರಿಗೂ ಮೋದಿ ಪ್ರಧಾನಿಯಾಗುವ ಅಭಿಲಾಷೆಯಿದೆ ಅದಕ್ಕೆ ಮುಂದಿನ ದಿನಗಳಲ್ಲಿ ದನ್ಯವಾದ ತಿಳಿಸುತ್ತೇವೆ, ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಕುರ್ಚಿ ಬಿದ್ದಿಲ್ಲ, ಆದರೆ ಡಿ.ಕೆ.ಶಿವಕುಮಾರ್ ನಾನೇ ಮುಖ್ಯಮಂತ್ರಿ ಎಂದು ಟವಲ್ ಹಾಕಿದ್ದಾರೆ ಎಂದು ನುಡಿದರು.
ಬಿಜೆಪಿಗೆ ಸ್ವತಂತ್ರ ಅಸ್ತಿತ್ವ ಇಲ್ಲ, ಜೆಡಿಎಸ್‌ಗೆ ಮಾನ ಮರ್ಯಾದೆ ಇಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಸರ್ಕಾರದಲ್ಲಿ ಹನಿಮೂನ್ ಮೊದಲೇ ಗಲಾಟೆ ಎದುರಾಗಿದೆ, ಇನ್ನು ಸರ್ಕಾರ ಓವರ್ ಟೇಕ್ ಮಾಡುವುದು ಎಲ್ಲಿ, ನಿರ್ಮಲಾನಂದ ಸ್ವಾಮೀಜಿಗಳ ಬಳಿ ನಾವು ಸನಾತನ ಧರ್ಮ ಉಳಿಸಲು ಮತ್ತು ರಾಷ್ಟ್ರ ಉಳಿಸಲು ಆಶೀರ್ವಾದಿಸಲು ಕೈ ಮುಗಿದು ಕೇಳಿದ್ದೇವೆ, ಅದಕ್ಕೆ ಕಾಂಗ್ರೆಸ್ ನವರಿಗೆ ಭಯ ಕಾಡ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಶ್ರೀನಿವಾಸಪುರ ಕ್ಷೇತ್ರದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಲೋಕಸಭಾ ಅಭ್ಯರ್ಥಿ ಮಲ್ಲೇಶ್‌ಬಾಬು, ತಾಪಂ ಮಾಜಿ ಸದಸ್ಯ ಮುದುವಾಡಿ ಮಂಜು ಇದ್ದರು.