Asianet Suvarna News Asianet Suvarna News

ಆಪರೇಷನ್ ಮಾಡಿದ್ರೆ ಕಾಂಗ್ರೆಸ್‌ನವ್ರು ಮನೆಯಲ್ಲೇ ಕುಳಿತುಕೊಳ್ತಾರೆ: ಬಂಡೆಪ್ಪ ಖಾಶೆಂಪೂರ್‌

ಕೆಲ ಶಾಸಕರು ಜೆಡಿಎಸ್‌ ತೊರೆಯುವ ಮಾತುಗಳೆಲ್ಲ ಸುಳ್ಳು. ಎಚ್‌ಡಿ ದೇವೇಗೌಡರು ಲೀಡರ್‌ಗಳನ್ನು ತಯಾರು ಮಾಡುವ ಫ್ಯಾಕ್ಟರಿ ಇದ್ದಂತೆ. ಎಷ್ಟೇ ಜನ ಹೋದರೂ ರಾತ್ರಿ ಹಗಲು ಡಬಲ್‌ ಶಿಫ್ಟ್‌ ಮಾಡಿ ಮತ್ತೇ ಲೀಡರ್‌ಗಳನ್ನು ತಯಾರು ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ ಖಾಶೆಂಪೂರ್‌

Former Minister Bandeppa Kashempur Slams Congress grg
Author
First Published Nov 18, 2023, 11:26 PM IST

ಬೀದರ್‌(ನ.18):  ಕಾಂಗ್ರೆಸ್‌ನವ್ರು ಆಪರೇಷನ್‌ ಮಾಡಿದಾಗಲೆಲ್ಲಾ ಪೆಟ್ಟು ತಿಂದು ಮನೆಯಲ್ಲಿ ಕುಳಿತಿದ್ದಾರೆ. ಮುಂದೇನೂ ಕುಳಿತುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಭವಿಷ್ಯ ನುಡಿದರು. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ, ಕೆಲ ಶಾಸಕರು ಜೆಡಿಎಸ್‌ ತೊರೆಯುವ ಮಾತುಗಳೆಲ್ಲ ಸುಳ್ಳು. ಎಚ್‌ಡಿ ದೇವೇಗೌಡರು ಲೀಡರ್‌ಗಳನ್ನು ತಯಾರು ಮಾಡುವ ಫ್ಯಾಕ್ಟರಿ ಇದ್ದಂತೆ. ಎಷ್ಟೇ ಜನ ಹೋದರೂ ರಾತ್ರಿ ಹಗಲು ಡಬಲ್‌ ಶಿಫ್ಟ್‌ ಮಾಡಿ ಮತ್ತೇ ಲೀಡರ್‌ಗಳನ್ನು ತಯಾರು ಮಾಡುತ್ತಾರೆ ಎಂದು ಖಾಶೆಂಪೂರ್‌ ಭರವಸೆ ವ್ಯಕ್ತಪಡಿಸಿದರು.

ವಿದ್ಯುತ್‌ ಕಳುವು ಪ್ರಕರಣ, ಜಾಗೃತಿ ಮೂಡಿಸುವ ಅಗತ್ಯವಿದೆ:

ಇನ್ನು ಎಚ್‌ಡಿಕೆ ಮನೆಯಲ್ಲಿ ವಿದ್ಯುತ್‌ ಕಳುವು ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಬ್ಬ ಹರಿದಿನಗಳು, ಶುಭ ಕಾರ್ಯಗಳ ಸಂದರ್ಭ ಗೊತ್ತಿಲ್ಲದೆಯೇ ಇಂಥವು ಅನೇಕ ಕಡೆಗಳಲ್ಲಿ ನಡೆಯುತ್ತವೆ. ಈ ಕುರಿತಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಆಯ್ಕೆ: ಶಾಸಕ ಪ್ರಭು ಚವ್ಹಾಣ್ 

ಜಮೀರ್‌ ಅಹಮದ್‌ ಹೇಳಿಕೆ ಅವರಿಗೆ ಶೋಭೆ ತರೋದಿಲ್ಲ:

ಸ್ಪೀಕರ್‌ ಹುದ್ದೆಯ ಬಗ್ಗೆ ಸಚಿವ ಜಮೀರ್‌ ಅಹಮದ್‌ ಹೇಳಿರುವುದು ಸರಿಯಲ್ಲ. ಸರ್ಕಾರ ನಿದ್ರೆಯಲ್ಲಿದ್ದಾಗ ಎದ್ದೇಳಿಸುವ ಕೆಲಸ ನಾವು ಮಾಡುತ್ತೇವೆ. ಬಿಜೆಪಿ ಜೊತೆಗಿನ ಮೈತ್ರಿ ವಿಷಯದಲ್ಲಿ ಏನೂ ಸಮಸ್ಯೆಗಳಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Follow Us:
Download App:
  • android
  • ios