ಬೆಂಗಳೂರು[ಜ.27] ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ವಿಚಾರವನ್ನು ಸಿದ್ದರಾಮಯ್ಯ ಮತ್ತೆ ಮಾತನಾಡಿದ್ದಾರೆ. ಅಪಪ್ರಚಾರದಿಂದ ಮತ್ತು ಹೊಟ್ಟೆಕಿಚ್ಚಿನಿಂದ ನನ್ನನ್ನು ಸೋಲಿಸಿದ್ರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ/

ಎಲ್ಲ ದಾರ್ಶನಿಕರ ಜಯಂತಿ ನಾನೇ ಮಾಡಿದ್ದು. ಹಡಪದ ಹಪ್ಪಣ್ಣ, ಹೇಮರೆಡ್ಡಿ ಮಲ್ಲಮ್ಮ, ವಿಶ್ವಕರ್ಮ ನಿಗಮ ರಚನೆ, ಅಂಬೀಗರ ಚೌಡಯ್ಯ ಸೇರಿದಂತೆ ಎಲ್ಲ ಸಮುದಾಯಗಳ ದಾರ್ಶನಿಕರ ಜಯಂತಿ ಮಾಡಿದ್ದೇನೆ. 2013  ರಿಂದ 2017 ವರೆಗೂ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮಸ್ಥಿತಿಯಲ್ಲಿತ್ತು. 700 ಕನಕ ಸಮುದಾಯ ಭವನ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದೇನೆ. ಇನ್ನೂ 5 ವರ್ಷ ಅಧಿಕಾರ ಸಿಕ್ಕರೆ ಇನ್ನು ಏನೆಲ್ಲ ಮಾಡುತ್ತಿದ್ದೆ  ಆದರೆ ಅಪಪ್ರಚಾರದಿಂದ ಮತ್ತು ಹೊಟ್ಟೆಕಿಚ್ಚಿನಿಂದ ಸೋಲಿಸಿದರು ಎಂದರು.

72ರ ಸಿದ್ರಾಮಣ್ಣಂಗೆ ಕರೆದು ಹೆಣ್ಣು ಕೊಡ್ತಾರಾ?: ಈಶ್ವರಪ್ಪ!

ಸ್ವಾಭಿಮಾನದಿಂದ ರಾಜಕಾರಣ ಮಾಡಿದ್ದೇನೆ ಹೊರತು ಯಾರಿಗೂ ತಲೆತಗ್ಗಿಸಿ ರಾಜಕಾರಣ ಮಾಡಿಲ್ಲ. ಒಳಿತನ್ನು ಬಯಸುವವರ ಜೊತೆ ಹಿಂದುಳಿದವರು ಹೋಗಬೇಕು. ಸ್ವಾರ್ಥಕ್ಕಾಗಿ ಒಳಿತು ಬಯಸುವವರ ಜೊತೆ ಹೋಗ್ಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.