Asianet Suvarna News Asianet Suvarna News

ಸಿದ್ದರಾಮಯ್ಯ, ಡಿಕೆಶಿ ಭಿನ್ನಾಭಿಪ್ರಾಯ ಬಗೆ ಹರಿಸಲು ಭಾರತ ಜೋಡೋ ಯಾತ್ರೆ: ಲಕ್ಷ್ಮಣ ಸವದಿ

ಕಾಂಗ್ರೆಸ್‌ ಹಿರಿಯ ನಾಯಕಿ ಕರ್ನಾಟಕಕ್ಕೆ ಬರುವುದನ್ನು ಸ್ವಾಗತಿಸುತ್ತೇನೆ. ಅವರು ಸಂಚರಿಸಿದ ಕಡೆ ಕಾಂಗ್ರೆಸ್‌ ಸೋಲುವುದು ಖಚಿತ: ಲಕ್ಷ್ಮಣ ಸವದಿ 

Former DCM Laxman Savadi talks Over Bharat Jodo Yatra grg
Author
First Published Oct 4, 2022, 7:07 PM IST

ಅಥಣಿ(ಅ.04):  ಕಾಂಗ್ರೆಸ್‌ ಭಾರತ ಜೋಡೋ ಯಾತ್ರೆ ಆರಂಭವಾಗುತ್ತಿದ್ದಂತೆ ಅತ್ತ ಕಾಂಗ್ರೆಸ್‌ ಮುಖಂಡರಿಂದ ಕಾಂಗ್ರೆಸ್‌ ಚೋಡೋ ಆಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ ಅವರು ಲೇವಡಿ ಮಾಡಿದರು.

ತಾಲೂಕಿನ ಐಗಿಳಿ ಗ್ರಾಮದ ಪೊಲೀಸ್‌ ಠಾಣೆಯ ನೂತನ ಹೊಸ ಕಟ್ಟಡ ಉದ್ಘಾಟನೆಯ ಕಾರ್ಯಕ್ರಮದ ನಂತರ ಸುದ್ದಿಗಾರರ ಸಂಗಡ ಮಾತನಾಡಿದರು. ಕಾಂಗ್ರೆಸ್‌ ಹಿರಿಯ ನಾಯಕಿ ಕರ್ನಾಟಕಕ್ಕೆ ಬರುವುದನ್ನು ಸ್ವಾಗತಿಸುತ್ತೇನೆ. ಅವರು ಸಂಚರಿಸಿದ ಕಡೆ ಕಾಂಗ್ರೆಸ್‌ ಸೋಲುವುದು ಖಚಿತ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಮತ್ತು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಭಿನ್ನಾಭಿಪ್ರಾಯ ಬಗ್ಗೆ ಹರಿಸಿ ಅವರನ್ನು ಒಂದು ಮಾಡುವುದಕ್ಕೆ ನಡೆಸುತ್ತಿರುವ ಜೋಡೋ ಯಾತ್ರೆ ಇದಾಗಿದೆ ಎಂದು ಹೇಳಿದರು.

ಯಲ್ಲಮ್ಮನ ಕ್ಷೇತ್ರದಲ್ಲಿ ಕೈ ಶಾಸಕರ ಆಯ್ಕೆಗೆ ಯತ್ನ

ದೇಶ ವಿರೋಧಿ ಸಂಘಟನೆಗಳನ್ನು ಬ್ಯಾನ್‌ ಮಾಡುವುದಕ್ಕೆ ಒಂದೇ ದಿನದಲ್ಲಿ ನಿರ್ಧಾರ ಮಾಡಿಲ್ಲ. ಅದು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಎಲ್ಲ ಮಾಹಿತಿಯನ್ನು ದಾಖಲೆ ಸಹಿತ ಸಂಗ್ರಹ ಮಾಡಿ ಬ್ಯಾನ್‌ ಮಾಡಲಾಗಿದೆ. ಧಮ್ಮ ಇದ್ದರೆ ಈ ಸಂಘಟನೆಗಳನ್ನು ಬ್ಯಾನ್‌ ಮಾಡಿ ಎಂದು ವಿರೋಧಿ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹೇಳುತಿದ್ದರು. ಅವರೇ ಈಗ ದೇಶ ವಿರೋಧಿ ಸಂಘಟನೆಗಳ ಬಗ್ಗೆ ಸಾಪ್‌್ಟಆಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಆರ್‌.ಎಸ್‌.ಎಸ್‌. ದೇಶ ವಿರೋಧಿ ಚಟುವಟಿಕೆ ಮಾಡಿಲ್ಲ. ಅದು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ ಸಂಘಟನೆ. ಕೆಲವು ಕಾಂಗ್ರೆಸ್‌ ಪಕ್ಷದ ಮುಖಂಡರು ಹುಟ್ಟುವ ಪೂರ್ವದಲ್ಲಿ ಹುಟ್ಟಿದ ಸಂಘಟನೆ. ದೇಶ ಭಕ್ತರನ್ನು ಹುಟ್ಟಿಸುತ್ತಿರುವ ಸಂಘಟನೆ. ಅದನೇಕೆ ಬ್ಯಾನ್‌ ಮಾಡಬೇಕು. ನೀವು ಸಚಿವರಾಗುತ್ತೀರಿ ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಅವರು, ನನಗಂತೂ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ ಎಂದರು.
 

Follow Us:
Download App:
  • android
  • ios