ನವದೆಹಲಿ(ಆ.24):ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರುವ ಸೋನಿಯಾ ಗಾಂಂಧಿ ನಿರ್ಧಾರದ ಒಳಿತು-ಕೆಡಕುಗಳ ಕುರಿತು ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಆರಂಭವಾಗಿದೆ. ಪಕ್ಷದ ಹಿರಿಯ ನಾಯಕರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸುವ ಮೂಲಕ ಸಭೆಗೆ ಚಾಲನೆ ನೀಡಿದ್ದಾರೆ. ಹೀಗಿರುವಾಗ ಸಭೆಯಲ್ಲಿ ನಡೆಯುತ್ತಿರುವ ವಿಚಾರಗಳು ಬಹಿರಂಗಗೊಳ್ಳುತ್ತಿದ್ದು, ಇದು ಪಕ್ಷದ ನಾಯಕ ಹಾಗೂ ಸದಸ್ಯರಲ್ಲಿ ಅಸಮಾಧಾನ ಉಂಟು ಮಾಡಿದೆ.

"

14 ತಿಂಗಳ ಬಳಿಕ ಏಕಾಏಕಿ ಟ್ವಿಟರ್‌ನಲ್ಲಿ ನಟಿ ರಮ್ಯಾ ಪ್ರತ್ಯಕ್ಷ, ಮಾಡಿದ ಟ್ವೀಟ್‌ ಇದು!

ಸದ್ಯ ಈ ಸಂಬಂಧ ಟ್ವೀಟ್ ಮಾಡಿ ಕಿಡಿ ಕಾರಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಕೇವಲ ಬಿಜೆಪಿ ಜೊತೆ ಮಾತ್ರ ಒಳ ಒಪ್ಪಂದ ಮಾಡಿಕೊಂಡಿಲ್ಲ. ಮಾಧ್ಯಮಗಳ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಂತಿದೆ. ಈ ವಿಚಾರವನ್ನು ಹೇಳುವುದರಲ್ಲಿ ರಾಹುಲ್ ಗಾಂಧಿ ತಪ್ಪು ಮಾಡಿದರು. ಕೇವಲ ಪತ್ರ ಮಾತ್ರ ಲೀಕ್ ಆಗಿಲ್ಲ, ಸಿಡಬ್ಯೂಸಿ ಮೀಟಿಂಗ್ ನ ಕ್ಷಣ ಕ್ಷಣದ ಮಾಹಿತಿ ಕೂಡ ಲೀಕ್ ಆಗುತ್ತಿದೆ ಎಂದಿದ್ದಾರೆ

ಇನ್ನು ವಿಡಿಯೋ ಕಾನ್ಫರೆನ್ಸ್ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್, ಪ್ರಿಯಾಂಕಾ ಗಾಂಧಿ ವಾದ್ರಾ, ಸೇರಿದಂತೆ ಎಲ್ಲಾ ನಾಯಕರೂ ಭಾಗವಹಿಸಿದ್ದಾರೆ.