Asianet Suvarna News Asianet Suvarna News

9 ದಿನ ಅಜ್ಞಾತವಾಸದ ಬಳಿಕ ರಮೇಶ್​ ಜಾರಕಿಹೊಳಿ ಕೊನೆಗೂ ಪ್ರತ್ಯಕ್ಷ

ಮಂತ್ರಿ ಸ್ಥಾನ ಕಿತ್ತುಕೊಂಡಿದ್ದರಿಂದ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು 9 ದಿನದ ಅಜ್ಞಾತವಾಸದ ಬಳಿಕ ರಮೇಶ್​ ಜಾರಕಿಹೊಳಿ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ. ಹಾಗಾದರೆ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ?

Former Congress minister Ramesh Jarkiholi spotted in Belagavi
Author
Bengaluru, First Published Jan 2, 2019, 2:25 PM IST

ಬೆಳಗಾವಿ, (ಜ.02): ಸಚಿವ ಸಂಪುಟದಿಂದ ಕೈ ಬಿಟ್ಟ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೆದ್ದಿದ್ದ ರಮೇಶ್​ ಜಾರಕಿಹೊಳಿ ಅಜ್ಞಾತ ಸ್ಥಳದಿಂದ ಹೊರಬಂದಿದ್ದಾರೆ.

ಕಾಂಗ್ರೆಸ್ ನಾಯಕರ ನಡೆಗೆ ಮುನಿಸಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತ ಸ್ಥಳದಿಂದ ರಮೇಶ್ ಜಾರಕಿಹೊಳಿ ಅವರು ಮೈತ್ರಿ ಸರ್ಕಾರವನ್ನು ನಡುಗಿಸಿದ್ದರು. ಆದ್ರೆ ಇಂದು [ಬುಧವಾರ] ರಮೇಶ್ ಜಾರಕಿಹೊಳಿ ಅವರು ತಮ್ಮ ಗೋಕಾಕ್ ನಿವಾಸದಲ್ಲಿ ದಿಢೀರ್​ ಪ್ರತ್ಯಕ್ಷರಾಗಿದ್ದಾರೆ.

7 ದಿನವಾದರೂ ರಮೇಶ್ ಸುಳಿವಿಲ್ಲ; ‘ಮೈತ್ರಿ’ಗೆ ನಿದ್ದೆಯಿಲ್ಲ?

ಕಳೆದ 9 ದಿನಗಳಿಂದ ನಿಗೂಢ ನಡೆ ಕಾಯ್ದುಕೊಂಡಿದ್ದ ರಮೇಶ್​ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಯಾವ ಮಾಹಿತಿ ಕೂಡ ಯಾರಿಗೂ ಇರಲಿಲ್ಲ. ಮೂಲಗಳ ಪ್ರಕಾರ ದೆಹಲಿಯಲ್ಲಿ ಬೀಡುಬಿಟ್ಟಿದ್ದರು ಎಂದು ಹೇಳಲಾಗಿತ್ತು. 

ತಂದೆಯ ಶ್ರದ್ಧಾಂಜಲಿಗೂ ಗೈರಾದ ರಮೇಶ್ ಜಾರಕಿಹೊಳಿ ಎಲ್ಲಿ..?

ಅಷ್ಟೇ ಅಲ್ಲದೇ ರಮೇಶ್​ ಜಾರಕಿಹೊಳಿ ದೆಹಲಿಯಲ್ಲಿಯೇ ಠಿಕಾಣಿ ಹೂಡಿ ಮೈತ್ರಿ ಸರ್ಕಾರವನ್ನು ಕೆಡುವಲು ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಗಳು ಕೂಡ ರಾಜ್ಯ ರಾಜಕಾರಣದಲ್ಲಿ ಹಬ್ಬಿದ್ದವು.

Follow Us:
Download App:
  • android
  • ios