ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಲೀಡರ್‌ಶಿಪ್ ಎಲ್ಲಿದೆ?: ಸಿದ್ದರಾಮಯ್ಯ
ಯಡಿಯೂರಪ್ಪ ಅವರ ಬಿಟ್ರೆ ಬಿಜೆಪಿಯಲ್ಲಿ ಲೀಡರ್‌ಶಿಫ್ ಎಲ್ಲಿದೆ. ಅವರ್ನ ಬಿಟ್ಟು ಇವ್ರಿಗೆ ಪ್ರಚಾರಕ್ಕೆ ಹೋಗೋಕೆ ಆಗ್ತಾ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗ (ಅ.14): ಯಡಿಯೂರಪ್ಪ ಅವರ ಬಿಟ್ರೆ ಬಿಜೆಪಿಯಲ್ಲಿ ಲೀಡರ್‌ಶಿಫ್ ಎಲ್ಲಿದೆ. ಅವರ್ನ ಬಿಟ್ಟು ಇವ್ರಿಗೆ ಪ್ರಚಾರಕ್ಕೆ ಹೋಗೋಕೆ ಆಗ್ತಾ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಅಂದ್ರ ಜನಸೇವೆ ಮಾಡೋದು. ಬಾಯಿಗೆ ಬಂದಂತೆ ಮಾತಾಡ್ಕಂಡು ಇರೋದಲ್ಲ. ಬಿಜೆಪಿಯವರಿಗೆ ಈಗ ನಡುಕ ಶುರುವಾಗಿದ್ದು, ಭಯದಿಂದ ಮಾತಾಡ್ತಿದ್ದಾರೆ. ಭ್ರಷ್ಟಾಚಾರ ವ್ಯಾಪಕವಾಗಿದ್ದು ಅದರ ಬಗ್ಗೆ ಚರ್ಚೆ ನಡೆಯಬೇಕು.
ಇಶ್ಯೂ ಇಟ್ಕಂಡು ಮಾತಾಡಿದ್ರೆ ಉತ್ತರ ಕೊಡಬಹುದು. ಬಾಯಿಗೆ ಬಂದಂಗೆ ಮಾತಾಡಿದ್ರೆ ಹೇಗೆ ಸಾಧ್ಯವೆಂದರು. ಬಿಜೆಪಿಯಲ್ಲಿಯೇ ಹೊಂದಾಣಿಕೆ ಇಲ್ಲ, ನಮ್ಮ ಮೇಲೆ ಆರೋಪ ಮಾಡ್ತಾರೆ. ಯತ್ನಾಳ್ ಮತ್ತು ವಿಶ್ವನಾಥ್ ಬಾಯಿಗೆ ಬಂದಂತೆ ಮಾತಾಡ್ತಾರೆ. ಯಡಿಯೂರಪ್ಪ ಅವರ ಮಗನೇ ಸಬ್ ಇನ್‌ಸ್ಪೆಕ್ಟರ್ ಹಗರಣದಲ್ಲಿ ಪಾಲುದಾರ ಅಂತ ಯತ್ನಾಳ್ ಹೇಳಿಲ್ಲವಾ? ಇಂತಹ ಮಾತುಗಳು ಹೊಂದಾಣಿಕೆ ತೋರಿಸ್ತಾವಾ ಎಂದು ಪ್ರಶ್ನಿಸಿದರು. ನನ್ನ ಬಗ್ಗೆ ಬಿಜೆಪಿಯವರಿಗೆ ಭಯ ಇದೆ. ಅದಕ್ಕೆ ಆ ರೀತಿ ಮಾತಾಡ್ತಾರೆ. ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ನೋಸ್ಟ್ರಾಂಗ್, ನೋ ಎನಿಮೀಸ್ ಎಂದು ಸಿದ್ದರಾಮಯ್ಯ ಹೇಳಿದರು.
ಮೋದಿ ವಿಶ್ವ ಗುರು ಅಲ್ಲ ಪುಕ್ಕಲು ಗುರು: ಸಿದ್ದರಾಮಯ್ಯ
ಜಿಟಿ ಜಿಟಿ ಮಳೆಯ ನಡುವೆಯೂ ರಾಹುಲ್ ಗಾಂಧಿ ಪಾದಯಾತ್ರೆ: ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಯನ್ನು ಸುರಿವ ಜಿಟಿ ಜಿಟಿ ಮಳೆಯ ನಡುವೆಯೂ ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ತಾಲೂಕಿನ ಬಿಜಿಕೆರೆ ಗ್ರಾಮದ ಅಂಡರ್ ಪಾಸ್‌ಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಗ್ರಾಮದ ಮಹಿಳೆಯರು ಹಣೆಗೆ ತಿಲಕ ಇಟ್ಟು ಅದ್ಧೂರಿಯಾಗಿ ಬರಮಾಡಿಕೊಂಡರು. ರಾತ್ರಿ ಇಡೀ ಮಳೆ ಸುರಿದರೂ ಮುಂಜಾನೆಯಿಂದಲೇ ರಾಹುಲ್ ನೋಡುವುದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಕಾದು ಕುಳಿತಿದ್ದರು.
ರಾಹುಲ್ ಗಾಂಧಿಯವರು ಆಗಮಿಸುತ್ತಿದ್ದಂತೆ ನಾಮು ತಾಮುಂದು ಹೋಗುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿತ್ತಾದರೂ ರಾಹುಲ್ ಗಾಂಧಿಯವರನ್ನು ಕಂಡ ಜನತೆ ಪುಳಕಿತರಾದಂತೆ ಕಂಡುಬಂತು. ರಾಹುಲ್ ಗಾಂಧಿಯವರ ಅದ್ಧೂರಿ ಸ್ವಾಗತಕ್ಕಾಗಿ ಗ್ರಾಮದಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ತಮಟೆ, ಡೊಳ್ಳು ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಪಾದಯಾತ್ರೆಗೆ ಮೆರಗು ತಂದಿತು. ರಾಹುಲ್ ಗಾಂಧಿಯವರು ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲೆಗಳಲ್ಲಿ ಮಕ್ಕಳು, ವಯೋವೃದ್ಧರಾದಿಯಾಗಿ ಕಾದು ಕುಳಿತಿದ್ದ ಜನತೆಯತ್ತ ಕೈ ಬೀಸುತ್ತಾ ಸಾಗಿದರು. ಜತೆಗೆ ಸಿದ್ದರಾಮಯ್ಯ, ಎಚ್.ಆಂಜನೇಯ ವಿವಿಧ ನಾಯಕರ ಬಳಿ ಬಂದು ಸೆಲ್ಪಿ ತೆಗೆದುಕೊಳ್ಳುವುದು ಕಂಡುಬಂತು.
ದಲಿತ ಕುಟುಂಬಕ್ಕೆ ಹಿಂಸೆ: ನಿಷ್ಷಕ್ಷಪಾತ ತನಿಖೆಗೆ ಸಿದ್ದು ಆಗ್ರಹ
ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ಬೆಂಬಲಿಸಿ ಸಾಗುತ್ತಿದ್ದ ಗಾಂಧಿ ವೇಷಧಾರಿಯೊಬ್ಬರು ಜನರತ್ತ ಕೈ ಬೀಸುತ್ತಿರುವುದು ವಿಶೇಷವಾಗಿತ್ತು. ಇದರೊಟ್ಟಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಿಂದ ಆಗಮಿಸಿದ್ದ ಮಹಿಳೆಯೊಬ್ಬರು ಕಾಂಗ್ರೆಸ್ ಪಕ್ಷದ ಚಿಹ್ನೆ ಹೊಂದಿರುವ ಸೀರೆಯುಟ್ಟು ನೋಡುಗರ ಗಮನ ಸೆಳೆದರು. ಮಾರ್ಗದುದ್ದಕ್ಕೂ ಪುಟಾಣಿ ಮಕ್ಕಳು ರಾಹುಲ್ ಗಾಂಧಿಯವರನ್ನು ನೋಡಲು ಕಾದು ಕುಳಿತಿದ್ದು ವಿಶೇಷವಾಗಿತ್ತು. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಮುಖಂಡ ಡಾ.ಬಿ.ಯೋಗೇಶ ಬಾಬು ರಾಹುಲ್ ಗಾಂಧಿಯವರ ಜತೆಗೆ ಹೆಜ್ಜೆ ಹಾಕಿದರು.