ಪ್ರಧಾನಿ ಮೋದಿ ಕರ್ನಾಟಕದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ: ಸಿದ್ದರಾಮಯ್ಯ
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು, ಆದ್ರೆ ರೈತರ ಖರ್ಚು ಮೂರುಪಟ್ಟು ಜಾಸ್ತಿಯಾಗಿದೆ. ನರೇಂದ್ರ ಮೋದಿಜಿ ಈ ರಾಜ್ಯದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ. 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ 1 ಲಕ್ಷ ಸಾಲಮನ್ನ ಮಾಡ್ತೀವಿ ಅಂದಿದ್ರು, ಆದರೆ ಒಂದು ರೂಪಾಯಿ ಸಾಲ ಮನ್ನಾ ಆಗಲಿಲ್ಲ ಅಂತ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಕೊಪ್ಪಳ(ಜ.17): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾಗಿ ಬಂದಿಲ್ಲ. ಶಾಸಕರನ್ನು ಖರೀದಿ ಮಾಡಿ ವಾಮ ಮಾರ್ಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದಲ್ಲಿ ಲಕ್ಷ ಲಕ್ಷ ಸರ್ಕಾರಿ ನೌಕರಿ ನೇಮಕಾತಿ ಮಾಡಿಕೊಂಡಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಪಿಎಸ್‌ಐ ನೌಕರಿಗೆ ಬಿಕರಿ ಆಗ್ತಿದೆ. ಕೇವಲ 15 ಲಕ್ಷಕ್ಕೆ ಪಿಎಸ್ಐ ನೌಕರಿ ಮಾರಾಟ ಮಾಡಲಾಗುತ್ತಿದೆ ಅಂತ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು(ಮಂಗಳವಾರ) ನಗರದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ಕೊಪ್ಪಳದಲ್ಲಿನ ಒಬ್ಬ ಶಾಸಕ ಕೂಡ 15 ಲಕ್ಷಕ್ಕೆ ಪಿಎಸ್ಐ ನೌಕರಿ ಮಾರಾಟ ಮಾಡಿದ್ದಾರೆ. ಕೊಪ್ಪಳದ ಒಬ್ಬ ಬಿಜೆಪಿ ಶಾಸಕನ ಹೆಸರು ಕಮಿಷನ್ ಎಂಎಲ್‌ಎ ಅಂತ ಇದೆಯಂತೆ. ಕೊಪ್ಪಳದ ಮತ್ತೊಮ್ಮ ಬಿಜೆಪಿ ಶಾಸಕ ಮಕ್ಕಳ ಮೊಟ್ಟೆ ಕಳ್ಳತನ ಮಾಡಿದ್ದಾನೆ. ಗಂಗಾವತಿ ಶಾಸಕರು ಮಕ್ಕಳ ಮೊಟ್ಟೆಯಲ್ಲೂ ಲೂಟಿ ಮಾಡಿದ್ದಾರೆ. ಗಂಗಾವತಿಯಲ್ಲಿ ನಿರ್ಮಾಣ ಆಗಿರೋ ಆಸ್ಪತ್ರೆ ಕಟ್ಟಡ ಭ್ರಷ್ಟಾಚಾರಕ್ಕೆ ಬಲಿಯಾಗಿದೆ. ಉದ್ಘಾಟನೆಗೂ ಮೊದಲೇ ಆಸ್ಪತ್ರೆ ಕಟ್ಟಡಕ್ಕೆ ನೀರು ನುಗ್ಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಜರಿನ್ ಡೆಲೆವರಿಗೆ ಹಣ ನೀಡಬೇಕು. 6 ರಿಂದ 8 ಸಾವಿರ ರೂ. ಹಣ ಕೊಟ್ಟರೆ ಮಾತ್ರ ಸಿಜಿರಿನ್ ಸೆಷನ್ ಡೆಲೆವರಿ ಆಗ್ತಿವೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.
ಬಿಜೆಪಿ ಸಮರ್ಥ ಅಭ್ಯರ್ಥಿ ಹುಡುಕಾಟಕ್ಕೆ ಬಿಜೆಪಿ ಕಸರತ್ತು..!
ಬಿಜೆಪಿ ಸರ್ಕಾರ ನಿರುದ್ಯೋಗ ಹೆಚ್ಚು ಮಾಡಿದೆ. 2.92 ಸರ್ಕಾರಿ ನೌಕರಿಗಳು ಖಾಲಿ ಇವೆ. ಯುವ ಜನತೆ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಉದ್ಯಮಗಳು ಬಂದ್ ಆಗಿವೆ. ಬಿಜೆಪಿ ಶಾಸಕರ ಕಮಿಷನ್ ಎಂಎಲ್ಎ. 5 ಲಕ್ಷ ತೆಗೆದುಕೊಂಡಿದ್ದು ಮಾತನಾಡಿದ್ದಾರೆ. ಇನ್ನೊಬ್ಬ ಎಂಎಲ್ಎ ಮೊಟ್ಟೆಯಲ್ಲಿ ಕಮಿಷನ್ ಪಡೆದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಔಷಧಿಯನ್ನು ಮಾರಿಕೊಂಡಿದ್ದಾರೆ ಅಂತ ಶಾಸಕ ಬಸವರಾಜ ದಡೇಸಗೂರು ಹಾಗೂ ಪರಣ್ಣ ಮುನವಳ್ಳಿ ಬಗ್ಗೆ ಸುರ್ಜೇವಾಲ್ ಪ್ರಸ್ತಾವನೆ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ಲಂಚಾವತಾರವನ್ನು ಜಾಗೃತಿ ಮೂಡಿಸಲು ಪ್ರಜಾಧ್ವನಿ
ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ, ಲಂಚಾವತಾರವನ್ನು ಜಾಗೃತಿ ಮೂಡಿಸಲು ಈ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಂತ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ. ಮಹತ್ಮಾ ಗಾಂಧೀಜಿ ಅವರು ಬ್ರಿಟಿಷರನ್ನು ತೊಲಗುವಂತೆ ಈಗ ಬಿಜೆಪಿಯವರನ್ನು ರಾಜ್ಯವನ್ನು ಒದ್ದೋಡಿಸಲು ಬಂದಿದ್ದೇವೆ. ಪಾಪದ ಆಡಳಿತ ಮಡೆಸುತ್ತಾರೆ. ನಾ ಕಾವುಂಗ ನಾ ಖಾನೆ ದುಂಗಾ ಅಂತಾ ಆಡಳಿತ ನಡೆಸುತ್ತೇವೆ ಅಂದವರು ಎಂತಾ ಆಡಳಿತ ನಡೆಸುತ್ತಾರೆ ಗೊತ್ತಿದೆ ಅಂತ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವತಂತ್ರ ಕೊಡಿಸಿದರು ನಮ್ಮ ನಾಯಕರು. 75 ವರ್ಷದಲ್ಲಿ ನಾವು ಏನು ಮಾಡಲಿಲ್ಲ ಎನ್ನುತ್ತಾರೆ. ರಾಜ್ಯದಲ್ಲಿ ಒಂಬತ್ತು ಜಿಲ್ಲೆ ಇದ್ದಿದ್ದು ಇಂದು ಇಷ್ಟು ಜಿಲ್ಲೆ ಮಾಡಿದ್ದು ಯಾರು? ಮಾಹಿತಿ ತಂತ್ರಜ್ಞಾನದಲ್ಲಿ ಇಡೀ ಜಗತ್ತಿನಲ್ಲಿ ಬೆಂಗಳೂರನ್ನು ಎರಡನೇ ಸ್ಥಾನಕ್ಕೆ ತಂದಿದ್ದು ಯಾರು?, ಸುಳ್ಳಿನ ಸರದಾರ ಅವರು ಗುಜರಾತ್ ಮಾಡೆಲ್ ಎನ್ನುತ್ತಾರೆ. ಅಲ್ಲಿ ಎಂತಹ ಆಡಳಿತ ಇದೆ ಎಂದು ಗೊತ್ತಿದೆಯಾ? ಕರ್ನಾಟಕದಲ್ಲಿ ಮಹಿಳೆಯರು ಕಾಣೆಯಾಗಿರುವು ಗುಜರಾತ್ ಮಾಡೆಲ್ಲ ಅಂತಾ ನೋಡಿ. ಯತ್ನಾಳ ಅವರ ಮಾತನ್ನು ಕೇಳಿ, ಸ್ಯಾಂಟ್ರೋ ರವಿ ಯಾರ ಕಾಲದಲ್ಲಿದ್ದವನು ಅಂತ ಬಿಜೆಪಿಗರನ್ನ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಕೊಪ್ಪಳ ಸಾಕಷ್ಟು ಪ್ರಗತಿ
ರಾಜ್ಯ ಮತ್ತು ಕೇಂದ್ರದಲ್ಲಿ ಆಧಿಕಾರ ನಡೆಸುವವರು ಜನವಿರೋಧಿ ಆಡಳಿತ ನಡೆಸುತ್ತಿದ್ದರು. ರೈತರ ಆದಾಯ ಡಬಲ್ ಆಗುವುದಿರಲು ಮತ್ತಷ್ಟು ಕುಸಿಯಿತು. ಪಡಿತರನ್ನು ಕಟ್ ಮಾಡಿದರು. ಹದಿನೈದು ಲಕ್ಷ ರುಪಾಯಿ ಅಕೌಂಟ್‌ಗೆ ಬರಲೇ ಇಲ್ಲ. ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಕೊಪ್ಪಳ ಸಾಕಷ್ಟು ಪ್ರಗತಿಯಾಗಿದೆ ಅಂತ ಎಚ್ .ಕೆ.ಪಾಟೀಲ್ ಹೇಳಿದ್ದಾರೆ.
ಜನಪರ ಆಡಳಿತಕ್ಕಾಗಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ. ಇಲ್ಲಿ ಕೂಡಿರುವ ಜನಸ್ತೋಮ ನೋಡಿದರೆ ಕೊಪ್ಪಳ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕೊಹೊಳಿ ತಿಳಿಸಿದ್ದಾರೆ.
ಪ್ರಜಾಧ್ವನಿಯ ಉದ್ದೇಶ ಬರುವ ವಿಧಾನಸಭೆ ಚುನಾವಣೆಗಾಗಿ ಪ್ರತಿಯೊಬ್ಬರ ಧ್ವನಿಯಾಗಲು, ರಾಜ್ಯದ ಪ್ರತಿಯೊಬ್ಬರ ಧ್ವನಿಯಾಗಲು ಈ ಯಾತ್ರೆ ಹೊರಟಿದೆ. ಕಾಂಗ್ರೆಸ್ ಆಡಳಿತ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಾಗಿದ್ದವು. ಆದ್ರೆ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಸರ್ಕಾರದಲ್ಲಿ ಅಭಿವೃದ್ಧಿ ಮಾಯವಾಗಿದೆ. ಹಾಗಾಗಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಈ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ತರಲು ಕೈಜೋಡಿಸಬೇಕು ಅಂತ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಕೊಪ್ಪಳ ಒಂದು ಪವಿತ್ರವಾದ ಕ್ಷೇತ್ರ: ಡಿಕೆಶಿ
ಕೊಪ್ಪಳ ಒಂದು ಪವಿತ್ರವಾದ ಕ್ಷೇತ್ರವಾಗಿದೆ. ಇಲ್ಲಿನ ಶ್ರೀಗವಿಸಿದ್ದೇಶ್ವರ ಮಠಕ್ಕೆ ಹೋಗಿದ್ದೇವೆ. ಶ್ರೀಗಳ ಆಶೀರ್ವಾದ ಪಡೆದು ಬಂದಿದ್ದೇವೆ ಅವರಿಗೆ ವಂದಿಸುವೆ. ಪ್ರಜಾಧ್ವನಿ ಯಾತ್ರೆಗೆ ನಾವು ಇಂದು ಬಂದಿದ್ದೇವೆ. ರಾಜ್ಯದ ಜನರ ನೋವು, ಸಮಸ್ಯೆಗಳ ಪರಿಹಾರಕ್ಕಾಗಿ ಈ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ ಕೆಲಸ ಮಾಡಲು ಬಂದಿದ್ದೇವೆ. ಯುವಕ, ಮಹಿಳೆ, ಮಕ್ಕಳ, ರೈತರಿಗೆ ಶಕ್ತಿ ತುಂಬಲು ಈ ಯಾತ್ರೆ ನಡೆಯುತ್ತಿದೆ. ಕರ್ನಾಟಕ ಕಳಂಕ ಹಾಗೂ ಹದಗೆಟ್ಟಿದೆ. ಈ ಜಿಲ್ಲೆ ಬಿಜೆಪಿ ಶಾಸಕ ಸಿಎಂಗೆ ಬ್ರೋಕರ್ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆದಸಿದ್ದಾರೆ.
ಇಲ್ಲಿನ ಶಾಸಕ ಪಿಎಸ್‌ಐ ಹಗರಣದಲ್ಲಿ ಭಾಗಿಯಾಗಿದ್ದ. ಪಿಎಸ್‌ಐ ಹಗರಣದ ಹೇಳಿಕೆ ನೀಡಿದ ವ್ಯಕ್ತಿನ ಬೊಮ್ಮಾಯಿ ಸರ್ಕಾರ ತನಿಖೆ ಮಾಡಲಿಲ್ಲ. ಆದ್ರೆ ಅದನ್ನು ಬಯಲಿಗೆಳದ ನಮ್ಮ ಯುವ ನಾಯಕನಿಗೆ ನೋಟಿಸ್ ನೀಡಿದ್ರು. ಇಂತಹ ಭ್ರಷ್ಟ ಸರ್ಕಾರದಿಂದ ಜನರು ಬೇಸತ್ತು ಹೋಗಿದ್ದಾರೆ ಅಂತ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಲ್ಯಾಣ ಕರ್ನಾಟಕದ 50 ಸಾವಿರ ಹುದ್ದೆಗಳನ್ನು ನೀಡುತ್ತೇವೆ. ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುತ್ತೇವೆ. ಖಾಸಗಿ 1 ಲಕ್ಷ ಹುದ್ದೆಗಳನ್ನು ನಾವು ತುಂಬುವ ಸಂಕಲ್ಪ ಮಾಡಿದ್ದೇವೆ. ಎಲ್ಲಾ ನೀರಾವರಿಯೋಜನೆಗಳ ಕಾರ್ಯಕ್ರಮಗಳನ್ನ ರೂಪಿಸುತ್ತೇವೆ. ನಾವು ನಿಮ್ಮ ಬದುಕಿನ ಬಗ್ಗೆ ಯೋಚಿಸುತ್ತೇವೆ. ಆದ್ರೆ ಬಿಜೆಪಿ ಭಾವನೆ, ಧರ್ಮ ಜಾತಿ ಬಗ್ಗೆ ಯೋಚಿಸುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಅಭಿವೃದ್ಧಿ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತ್ನಾಡುತ್ತಾನೆ. ಇವರಿಗೆ ನಾಚಿಕೆ ಯಾಗಬೇಕು. ಕೋವಿಡ್‌ನ ಪ್ರತಿ ಪದರ್ಥಲ್ಲಿ ಲೂಟಿ ಹೊಡೆದಿದೆ. ಬೆಡ್ ನಲ್ಲೂ ಲೂಟಿ, ಔಷಧದಲ್ಲೂ ಲೂಟಿ ಹೊಡೆದಿದೆ. ಎಲ್ಲದರಲ್ಲೂ ಈ ಬಿಜೆಪಿ ಸರ್ಕಾರ ಲೂಟಿ ಮಾಡಿದೆ. ಈ ಬಿಜೆಪಿ ಭ್ರಷ್ಟ ಪುರಾಣವನ್ನು ನಾವು ಮುಂದೆ ಇಟ್ಟಿದ್ದೇವೆ. ಕೊಟ್ಟ ಭರವಸೆ ಈವರಗೆ ಈಡೇರಲಿಲ್ಲ. ಇದರ ಬಗ್ಗೆ ನಾವು ನಿತ್ಯ ಪ್ರಶ್ನೆ ಮಾಡುತ್ತಿದ್ದೇವೆ. ಈವರಗೆ ಅವರು ಒಂದು ಉತ್ತರವೂ ನೀಡುತ್ತಿಲ್ಲ. ಗುತ್ತಿಗೆದಾರರ ಅಧ್ಯಕ್ಷ ಕೆಂಪಯ್ಯ ಅವರ ಪ್ರಶ್ನೆಗೂ ಉತ್ತರವಿಲ್ಲ. ಯಾರು ಕೂಡ ಈ ಸರ್ಕಾರದ ವಿರುದ್ಧ ಪ್ರಶ್ನೆ ಮಾಡಬಾರದು. ಅಂತಹ ಸ್ಥಿತಿ ಈ ಸರ್ಕಾರದಲ್ಲಿ ಇದೆ. ಇದರ ಪುರಾಣ ನಾವು ಮುಂದೆ ಇಟ್ಟಿದ್ದೇವೆ ಅಂತ ತಿಳಿಸಿದ್ದಾರೆ.
ಕೊಪ್ಪಳದ ಬಗ್ಗೆ ನಮಗೆ ಅಪಾರ ಗೌರವ ಇದೆ. ಅಂದಿನ ಇಲ್ಲಿನ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಅಪಾರ ಗೌರವ ಇತ್ತು. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಐದು ಕ್ಷೇತ್ರಗಳನ್ನು ಗೆಲ್ಲಿಸುವ ಬಗ್ಗೆ ಭರವಸೆ ಇದೆ ಅಂತ ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ನಿಮ್ಮ ಜೇಬಿನ ಪಿಕ್ ಪಾಕೆಟ್ ನಡೆಯುತ್ತಿದೆ. ಬಿಜೆಪಿ ಹೇಳಿಕೊಳ್ಳುವುದಕ್ಕಿಲ್ಲ, ಬಿಜೆಪಿ ಸರ್ಕಾರದಲ್ಲಿ ನಿಮ್ಮ ಜೇಬಿನ ಪಿಕ್ ಪಾಕೆಟ್ ನಡೆಯುತ್ತಿದೆ. ಅದನ್ನು ನಾವು ನಿಮಗೆ ಮನವರಿಕೆ ಮಾಡಲು ಪ್ರಜಾಧ್ವನಿ ಯಾತ್ರೆ ಮೂಲಕ ನಿಮ್ಮ ಮುಂದೆ ಬಂದಿದ್ದೇವೆ. ನಮ್ಮ ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಬಂದಿದ್ರು, ನಮ್ಮೆಲ್ಲ ಮಹಿಳೆಯರನ್ನು ಕುರಿತು ಮಾತ್ನಾಡಿದ್ರು, ಪ್ರತಿ ಮಹಿಳೆಗೆ 2 ಸಾವಿರ ಕೊಡುವಂತ ಹಾಗೂ 200 ಯುನಿಟ್ ವಿದ್ಯುತ್ ನೀಡುವ ಬಗ್ಗೆ ಪ್ರತಿಜ್ಞೆ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಚಿಂತನೆ, ಬಿಜೆಪಿಗೆ ಇಂತಹ ಒಂದು ಯೋಜನೆ ಕೊಡಕ್ಕೆ ಆಗಲಿಲ್ಲ. ಬಿಜೆಪಿಯಿಂದ ಆದಾಯ ಬಂದಿದೆನಾ? ಉದ್ಯೋಗ ಬಂದಿದೆನಾ? ಹೇಳಿ, ನೀವೇ ತೀರ್ಮಾನ ಮಾಡಿ ಈ ಸರ್ಕಾರವನ್ನು ಕಿತ್ತೆಸೆಯಲು ಸಂಕಲ್ಪ ಮಾಡಿ ಅಂತ ಡಿಕೆಶಿ ಕರೆ ಕೊಟ್ಟಿದ್ದಾರೆ.
ವರ್ಷಕ್ಕೆ ನಿಮ್ಮ ಮಹಿಳೆಯ ಅಕೌಂಟಿಗೆ 24 ಸಾವಿರ ಹಾಕುತ್ತೇವೆ. ನಾನು, ಸಿದ್ದರಾಮಯ್ಯ ಅವರು ಚೆಕ್‌ಗೆ ಸಹಿ ಹಾಕಿದ್ದೇವೆ. ನಿಮ್ಮ ಪುರುಷರ ಮೇಲೆ ನಮಗೆ ನಂಬಿಕೆ ಇಲ್ಲ ಅಂತ ಡಿಕೆಶಿ ಹಾಸ್ಯ ಮಾಡಿದ್ದಾರೆ.
ಆರ್ ಆಶೋಕ ಹೇಳ್ತಾನೆ, ಕರೆಂಟ್ ಕೊಡಲಿಲ್ಲ ಅಂತ, ಯಾವತ್ತಾದ್ರೂ ಒಂದು ದಿನ ಕರೆಂಟ್ ಕಟ್ ಆಗಿದೆನಾ?, ವಿಂಡ್ ಸೋಲಾರ್ ಯೋಜನೆ ತಂದಿದ್ದು ಯಾರು ಅಂತ ಆರ್.ಆಶೋಕ್ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವೇದಿಕೆಗೆ ಆಗಮಿಸುತ್ತಲೇ ಅಭಿಮಾನಿಗಳ ಜಯಘೋಷ
ಸಿದ್ದರಾಮಯ್ಯ ವೇದಿಕೆಗೆ ಆಗಮಿಸುತ್ತಲೇ ಅಭಿಮಾನಿಗಳ ಜಯಘೋಷ ಕೂಗಿದ್ದಾರೆ. ಭಾಷಣ ಮಾಡಲು ಅಭಿಮಾನಿಗಳು ಬಿಡದ ಪ್ರಸಂಗವೂ ನಡೆದಿದೆ. ಅಭಿಮಾನಿಗಳು ನಿರಂತರವಾಗಿ ಸಿದ್ದರಾಮಯ್ಯಗೆ ಜಯಘೋಷ ಹಾಕಿದ್ದಾರೆ. ಬಳಿಕ ಅಭಿಮಾನಿಗಳಿಗೆ ಸುಮ್ಮನಿರಲು ಸಿದ್ದರಾಮಯ್ಯ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಗವಿಸಿದ್ದೇಶ್ವರ ಮಠಕ್ಕೆ ಇಂದು ನೀಡಿದ್ದೇನೆ. ಅವರ ಆಶೀರ್ವಾದವನ್ನು ಪಡೆದಿದ್ದೇವೆ. ಗವಿಸಿದ್ದೇಶ್ವರ ರಥೋತ್ಸವ ನಡೆದಿದೆ. ಸುಮಾರು 10 ಲಕ್ಷ ಜನರು ಸೇರಿದ್ದರು. ನಾನು ಮೂರ್ನಾಲ್ಕು ಬಾರಿ ಭಾಗಿಯಾಗಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ನಾನು ಇತ್ತೀಚೆಗೆ ಭಾಗವಹಿಸಲಿಲ್ಲ. ಇತ್ತೀಚಿಗೆ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಪೂಜ್ಯ ಸ್ವಾಮೀಜಿಯವರು ಎಲ್ಲರಿಗೂ ಆಶೀರ್ವಾದ ನೀಡಿದ್ದಾರೆ. ಬಸವೇಶ್ವರ ವೃತ್ತದಿಂದ ಅದ್ದೂರಿ ಮೆರವಣಿಗೆ ಹಾಗೂ ಪ್ರೀತಿ ತೋರಿಸಿದ್ದೀರಿ. ನಾನು ಸದಾ ನಿಮಗೆ ಚಿರಋಣಿಯಾಗಿದ್ದೇನೆ ಅಂತ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಚುನಾವಣೆ ಹೊತ್ತಲ್ಲಿ ಉಚಿತ ಘೋಷಣೆ ಮಾಡ್ತಾರೆ; ಎಚ್.ಡಿ.ಕುಮಾರಸ್ವಾಮಿ
ನಾನು ನಿಮ್ಮವನೆ ನಾನು 1991 ಲೋಕಸಭೆ ಚುನಾವಣೆಗೆ ನಿಂತಿದ್ದೆ, ಮೈಸೂರಿಂದ ಬಂದು ಇಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ, ಅಂದು ರಾಜೀವ್ ಗಾಂಧಿ ಹತ್ಯೆ ಆಗದೆ ಹೋಗಿದ್ರೆ ನಾನು ಗೆಲ್ಲುತ್ತಿದ್ದೆ, ನಾನು 10 ಸಾವಿರ ಮತಗಳಿಂದ ಸೋತೆ. ನಾನು ಯಾವತ್ತು ಬಂದ್ರು ನಿಮ್ಮ ಪ್ರೀತಿ ಅಭಿಮಾನ ಕಡಿಮೆಯಾಗಿಲ್ಲ. ನಾವು ಮುಂದಿನ ದಿನಗಳಲ್ಲಿ ನಿಮ್ಮ ಋಣವನ್ನು ತೀರಿಸುವ ಕೆಲಸವನ್ನ ಮಾಡುತ್ತೇನೆ. ನಾನು ಸಿಎಂ ಇದ್ದಾಗ ಕೊಪ್ಪಳಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ. ಕೊಪ್ಪಳದ ಎಲ್ಲ ಕ್ಷೇತ್ರಗಳಿಗೂ 2 ರಿಂದ 3 ಸಾವಿರ ಕೋಟಿ ಅನುದಾನ ನೀಡಿದ್ದೇನೆ. ಕೊಪ್ಪಳದ ಕಾಲೇಜು ಅಡಿಗಲ್ಲು ಮಾಡಿದ್ದು, ಅದನ್ನು ಉದ್ಘಾಟನೆ ಮಾಡಿದ್ದು ನಾನೆ. ನಾನು ಕೃಷಿಹೊಂಡ ಯೋಜನೆ ಭಾಗ್ಯ ನೀಡಿದ್ದೆ, 2 ಲಕ್ಷ ಕೃಷಿ ಹೊಂಡಗಳನ್ನು ತೋಡಿಸಿದ್ದೆ, ಆದ್ರೆ ಈ ದರಿದ್ರ ಬಿಜೆಪಿ ಸರ್ಕಾರ ಆ ಯೋಜನೆಯನ್ನು ನಿಲ್ಲಿಸಿದೆ ಅಂತ ಬಿಜೆಪಿ ಸರ್ಕಾರದ ಕಿಡಿ ಕಾರಿದ್ದಾರೆ.
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು, ಆದ್ರೆ ರೈತರ ಖರ್ಚು ಮೂರುಪಟ್ಟು ಜಾಸ್ತಿಯಾಗಿದೆ. ನರೇಂದ್ರ ಮೋದಿಜಿ ಈ ರಾಜ್ಯದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ. 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ 1 ಲಕ್ಷ ಸಾಲಮನ್ನ ಮಾಡ್ತೀವಿ ಅಂದಿದ್ರು, ಆದರೆ ಒಂದು ರೂಪಾಯಿ ಸಾಲ ಮನ್ನಾ ಆಗಲಿಲ್ಲ ಅಂತ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.