ಮೋದಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್| ಇನ್ನಾದರು ಪ್ರಧಾನಿ ಮೋದಿ ಎಚ್ಚೆತ್ತುಕೊಳ್ಳಲಿ|6 ತಿಂಗಳಲ್ಲಿ ಒಟ್ಟಾರೆ 12 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ| ವೇತನ ಹೊಂದಿದ್ದ 2 ಕೋಟಿ ಜನರು ತಮ್ಮ ಉದ್ಯೋಗವನ್ನ ಕಳೆದುಕೊಂಡಿದ್ದಾರೆ| 

ಬೆಂಗಳೂರು(ಸೆ.17): ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನವನ್ನ ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಆಚರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

Scroll to load tweet…

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಸರಣಿ ಟ್ವೀಟ್‌ಗಳನ್ನ ಮಾಡಿರುವ ಸಿದ್ದರಾಮಯ್ಯ ಅವರು, ಮೋದಿ ತೆಗೆದುಕೊಂಡ ನಿರ್ಧಾರದಿಂದ ದೇಶಾದ್ಯಂತ ವೇತನ ಹೊಂದಿದ್ದ 2 ಕೋಟಿ ಜನರು ತಮ್ಮ ಉದ್ಯೋಗವನ್ನ ಕಳೆದುಕೊಂಡಿದ್ದಾರೆ. ಕಳೆದ 6 ತಿಂಗಳಲ್ಲಿ ಒಟ್ಟಾರೆ 12 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ. ಕಳೆದ 45 ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಯಾವತ್ತೂ ಇಷ್ಟು ಪ್ರಮಾಣದಲ್ಲಿ ಕುಸಿದಿರಲಿಲ್ಲ. ಇದೆಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರಗಳೇ ಕಾರಣ ಎಂದು ಜರಿದಿದ್ದಾರೆ.

Scroll to load tweet…

ಕರುನಾಡಿನ ಜೊತೆ ನಿಂತ ನಮೋ: ನರೇಂದ್ರ ಮೋದಿ ಸರ್ಕಾರ ಕೊಡುಗೆಗಳು!

ಹೀಗಾಗಿ ಪ್ರಧಾನಿ ಮೋದಿ ಅವರ ಹುಟ್ಟುಹುಬ್ಬ ನಿರುದ್ಯೋಗಿಗಳ ದಿನವಾಗಿದೆ.ಇನ್ನಾದರು ಪ್ರಧಾನಿ ಮೋದಿ ಅವರು ಎಚ್ಚೆತ್ತುಕೊಳ್ಳಲಿ ಎಂದು ಟ್ವೀಟ್‌ ಮೂಲಕ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.