ಬೆಂಗಳೂರು(ಜ.16): ಬಿಜೆಪಿ ಆಪರೇಷನ್ ಕಮಲದಿಂದ ಸರ್ಕಾರಕ್ಕೆ ಯಾವುದೇ ಭಯವಿಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಸರ್ಕಾರ ಬೀಳುತ್ತದೆ ಎಂಬೆಲ್ಲಾ ಹೇಳಿಕೆಗಳು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 

ಈ ಮಧ್ಯೆ ತಮ್ಮ ಸರಣಿ ಟ್ವೀಟ್ ಮುಂದುವರೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ನಾವೂ ಕೂಡ ಅಖಾಡದಲ್ಲಿ ಕುಸ್ತಿ ಆಡಿದವರೇ, ಎಲ್ಲಾ ಪಟ್ಟುಗಳು ನಮಗೂ ಗೊತ್ತು..’ ಎಂದು ಬಿಜೆಪಿ ಕುರಿತು ವ್ಯಂಗ್ಯವಾಡಿದ್ದಾರೆ.

‘ರಾಜ್ಯದ ಕೆಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ. ರಾಜಕೀಯ ಅಖಾಡದಲ್ಲಿ ಕುಸ್ತಿ ಆಡಿದವರು ನಾವು. ಯಾವ ಸಂದರ್ಭದಲ್ಲಿ ಯಾವ ಪಟ್ಟು ಬಳಸಬೇಕೆಂಬುದು ನಮಗೆ ಚೆನ್ನಾಗಿ ಗೊತ್ತು..’ ಎಂದು ಸಿದ್ದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.