ಸಿದ್ದರಾಮಯ್ಯ ರಾಜಕೀಯ ಅಲೆಮಾರಿ: ಶ್ರೀನಿವಾಸ ಪ್ರಸಾದ್‌

ಎಐಸಿಸಿ ಅಂಥಾರೆ ಮಲ್ಲಿಕಾರ್ಜುನ ಖರ್ಗೆಗೆ ಮರದ ಕತ್ತಿ ಕೊಟ್ಟು ಯುದ್ಧ ಮಾಡು ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಶ್ರೀನಿವಾಸ ಪ್ರಸಾದ್‌

Former CM Siddaramaiah Political Vagabond Says BJP MP Srinivas Prasad grg

ಚಾಮರಾಜನಗರ(ನ.10):  ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯ ಅಲೆಮಾರಿ, ಸ್ಪರ್ಧೆ ಮಾಡುವ ಕ್ಷೇತ್ರ ಘೋಷಣೆ ಮಾಡದ ಅಂಜುಬುರುಕ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಊರಲ್ಲಿ ನಿಲ್ಲದ ಅಲೆಮಾರಿಗಳಂತೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುವ ಸಿದ್ದರಾಮಯ್ಯರಾಜಕೀಯ ಅಲೆಮಾರಿ ಇದ್ದಂತೆ, ಉಪಕಾರ ಸ್ಮರಣೆ ಇಲ್ಲದ ಸಿದ್ದರಾಮಯ್ಯ ಪಕ್ಷ ಕಟ್ಟಲಿ, ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಅಗತ್ಯಇದೆ, ಅದು ಬಿಟ್ಟು ವೀರಾವೇಶದ ಮಾತಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭದಲ್ಲಿ ಟೇಬಲ್‌ ಕುಟ್ಟಿ ಮಾತನಾಡುತ್ತಾರೆ, ಅವರು ಗೆದ್ದಿರುವುದು ಒಂದು ಸ್ಥಾನ, ಬಿಜೆಪಿ 25 ಸಂಸದ ಸ್ಥಾನ ಗೆದ್ದಿದ್ದು, ನಾವು ಯಾವ ರೀತಿ ಮಾತನಾಡಬೇಕು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಮಣ್ಣು ಮುಕ್ಕಿದ್ದಾರೆ, ರಾಹುಲ್‌ಗಾಂಧಿನೇ ಪಿಎಂ ಎಂದು ರಾಯಚೂರಲ್ಲಿ ಹೇಳಿದ್ದರು.

ಎನ್‌ ಮಹೇಶ್‌ ರನ್ನು ಇನ್ನೊಮ್ಮೆ ಗೆಲ್ಲಿಸಿ, ಅವರನ್ನೆ ಮಂತ್ರಿ ಮಾಡೋಣ : ಸಚಿವ ಸೋಮಣ್ಣ

ಏನಾಯಿತು ಈಗ..? 

ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೊನೆಗೊಂಡಿದೆ. ರಾಹುಲ್‌ ಗಾಂಧಿ ಭಾರತ್‌ ಜೋಡೋ ಎಂದು ಅಲ್ಲಿಗೇ ಹೋಗಿಯೇ ಇಲ್ಲ, ತೆಲಂಗಾಣದಲ್ಲಿ ಅವರ ಯಾತ್ರೆಗೆ ಜನರೇ ಇರಲಿಲ್ಲ ಎಂದು ಟೀಕಿಸಿದರು. ದಾವಣಗೆರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ, 8 ಲಕ್ಷ ಜನ ಟಾನಿಕ್‌ ಕೊಟ್ಟಿದ್ದಾರೆ. ಹೀಗಾದರೂ ತಾವು ನಿಲ್ಲುವ ಕ್ಷೇತ್ರ ಘೋಷಣೆ ಮಾಡುತ್ತಿಲ್ಲ, ಅಂಜುಬುರುಕ, ಎಐಸಿಸಿ ಅಂಥಾರೆ ಮಲ್ಲಿಕಾರ್ಜುನ ಖರ್ಗೆಗೆ ಮರದ ಕತ್ತಿ ಕೊಟ್ಟು ಯುದ್ಧ ಮಾಡು ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸತೀಶ್‌ ಜಾರಕಿಹೊಳಿ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿ ಜೊತೆಗೆ ಕಾಂಗ್ರೆಸ್‌ ನಾಯಕರು ಕೂಡ ಅವರ ಮಾತನ್ನು ಒಪ್ಪಲು ತಯಾರಿಲ್ಲ, ಕ್ಷಮೆ ಕೇಳಿ ಅಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ-ಕ್ಷಮೆ ಕೇಳಲ್ಲ ಅಂತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
 

Latest Videos
Follow Us:
Download App:
  • android
  • ios