Asianet Suvarna News Asianet Suvarna News

'ನಾನು ಚಾಮರಾಜಪೇಟೆ ಅಳಿಯ, ಇಲ್ಲಿ ನನ್ನ ಮಾವನ ಮನೆಯಿತ್ತು, ಈಗಲೂ ಇದೆ'

* ಇಲ್ಲಿ ನನ್ನ ಮಾವನ ಮನೆಯಿತ್ತು, ಈಗಲೂ ಇದೆ

* ನಾನು ಚಾಮರಾಜಪೇಟೆ ಅಳಿಯ: ಸಿದ್ದರಾಮಯ್ಯ

* ಬಾದಾಮಿ ಬಿಟ್ಟು ಬೆಂಗಳೂರಲ್ಲಿ ಸ್ಪರ್ಧೆ ಸುಳಿವು?

Former CM Siddaramaiah Gives a Hint Of Contesting From Chamrajpet in Next election pod
Author
Bangalore, First Published Jul 6, 2021, 7:28 AM IST

ಬೆಂಗಳೂರು(ಜು.06): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದಿನದಿಂದ ದಿನಕ್ಕೆ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಮೇಲೆ ಪ್ರೀತಿ ಹೆಚ್ಚಾಗುತ್ತಿದ್ದು, ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ನಾನು ‘ಚಾಮರಾಜಪೇಟೆ ಅಳಿಯ’ ಎಂದಿದ್ದಾರೆ.

ಬಾದಾಮಿ ಕ್ಷೇತ್ರ ತ್ಯಜಿಸಿ ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿರುವ ಬೆನ್ನಲ್ಲೇ ನಾನು ‘ಚಾಮರಾಜಪೇಟೆ ಅಳಿಯ’ ಎಂದಿರುವುದು ಕುತೂಹಲ ಕೆರಳಿಸಿದೆ.

ಬೆಂಗಳೂರಿನಲ್ಲಿರುವ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ‘ಚಾಮರಾಜಪೇಟೆ 2ನೇ ಮುಖ್ಯ ರಸ್ತೆಯಲ್ಲಿ ನಮ್ಮ ಮಾವನವರ ಮನೆ ಇತ್ತು. ಈಗಲೂ ಬಾಡಿಗೆಗೆ ಕೊಟ್ಟಿದ್ದಾರೆ. ಹೀಗಾಗಿ ನಾನು ಚಾಮರಾಜಪೇಟೆ ಅಳಿಯ’ ಎಂದು ಹೇಳಿದರು.

‘ನಾನು ಶಾಸಕನಾಗುವ ಮೊದಲೂ ಸಹ ಇಲ್ಲಿಗೆ ಬರುತ್ತಿದ್ದೆ. ಹೀಗಾಗಿ ಈ ಭಾಗದ ಜನರೆಲ್ಲಾ ನನ್ನ ನೋಡಿದ್ದಾರೆ. ಇದು ನಮ್ಮ ಊರು. ಇಲ್ಲಿನ ಜನ ನಮ್ಮ ಊರಿನ ಜನ ಇದ್ದ ಹಾಗೆ. ಅಲ್ಲದೆ ಪ್ರತಿ ಶಿವರಾತ್ರಿಗೂ ಬೆಂಗಳೂರಿನ ಚಾಮರಾಜಪೇಟೆಯ ಮಲೆ ಮಹದೇಶ್ವರ ದೇವಾಲಯಕ್ಕೆ ಬರುತ್ತೇನೆ. ಈ ಬಾರಿಯೂ ಕೊರೋನಾ ತೊಲಗಲಿ ಎಂದು ಮಲೆ ಮಹದೇಶ್ವರನಲ್ಲಿ ಪ್ರಾರ್ಥಿಸಿದ್ದೇನೆ’ ಎಂದರು.

ನಾನು ಶಾಸಕನಾಗುವ ಮೊದಲೂ ಸಹ ಚಾಮರಾಜಪೇಟೆಗೆ ಬರುತ್ತಿದ್ದೆ. ಹೀಗಾಗಿ ಈ ಭಾಗದ ಜನರೆಲ್ಲಾ ನನ್ನ ನೋಡಿದ್ದಾರೆ. ಇದು ನಮ್ಮ ಊರು. ಇಲ್ಲಿನ ಜನ ನಮ್ಮ ಊರಿನ ಜನ ಇದ್ದ ಹಾಗೆ. ಪ್ರತಿ ಶಿವರಾತ್ರಿಗೂ ಇಲ್ಲಿನ ಮಲೆ ಮಹದೇಶ್ವರ ದೇವಾಲಯಕ್ಕೆ ಬರುತ್ತೇನೆ.

- ಸಿದ್ದರಾಮಯ್ಯ, ವಿಪಕ್ಷ ನಾಯಕ

Follow Us:
Download App:
  • android
  • ios