ಬೆಂಗಳೂರು(ಜ.15): ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.

ಟ್ವಿಟ್ಟರ್ ಮೂಲಕ ಪ್ರಧಾನಿ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ, ‘ಚೌಕಿದಾರ್ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಅವರೇ, ನಮ್ಮ ರಾಜ್ಯದ ಶಾಸಕರನ್ನು ಹೋಟೆಲ್‌ ಕೋಣೆಯೊಳಗಿಟ್ಟು ಕಾವಲು ಕಾಯುತ್ತಿರುವ ಚೌಕಿದಾರ್‌ ಆಗಿಬಿಟ್ಟರಲ್ಲ..’ ಎಂದು ಕುಹುಕವಾಡಿದ್ದಾರೆ.

ಸಾಫ್ ನಿಯತ್ ಸಹಿ ವಿಕಾಸ್ ಎಂಬ ಘೋಷಣೆಗಳನ್ನು ಹೇಳಿಕೊಂಡರೆ ಸಾಲದು, ಮೊದಲು ನಿಮ್ಮ ನಿಯತ್ತು ಎಂತದ್ದು ಎಂಬುದನ್ನು ತೋರಿಸಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇದೇ ವೇಳೆ ನಿಮ್ಮದು ಗಂಧಾ ನಿಯತ್‌, ರೆಸಾರ್ಟ್‌ ವಿಕಾಸ್‌ ಎಂದು ಸಿದ್ದರಾಮಯ್ಯ ಜರೆದಿದ್ದಾರೆ.