ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಗದೀಶ್‌ ಶೆಟ್ಟರ್‌ ಸೋಲುತ್ತಾರೆ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ. ಯಾವ ನಾಯಕರು ರಕ್ತದ ಕೊರತೆ ಮಾಡಿಕೊಳ್ಳುವುದು ಬೇಡ. ರಕ್ತದಲ್ಲಿ ಬರೆದು ಕೊಡುವುದು ಮುಖ್ಯವಲ್ಲ, ಜನರ ಮತ ನೀಡುವುದು ಮುಖ್ಯ ಎಂದ ಕುಮಾರಸ್ವಾಮಿ 

ಬೆಂಗಳೂರು(ಏ.27): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು 150 ಸ್ಥಾನ ಕಾಂಗ್ರೆಸ್‌ಗೆ ಬರಲಿದ್ದು, ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿರುವುದನ್ನು ಗಮನಿಸಿದ್ದೇನೆ. ಅವರು ರಕ್ತದಲ್ಲಿ ಬರೆದುಕೊಡುವುದು ಬೇಡ. ಅವರಿಗೆ ರಕ್ತದ ಕೊರತೆಯಾಗಲಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಟಾಂಗ್‌ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಗದೀಶ್‌ ಶೆಟ್ಟರ್‌ ಸೋಲುತ್ತಾರೆ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ. ಯಾವ ನಾಯಕರು ರಕ್ತದ ಕೊರತೆ ಮಾಡಿಕೊಳ್ಳುವುದು ಬೇಡ. ರಕ್ತದಲ್ಲಿ ಬರೆದು ಕೊಡುವುದು ಮುಖ್ಯವಲ್ಲ, ಜನರ ಮತ ನೀಡುವುದು ಮುಖ್ಯ ಎಂದರು.

ಯಾರನ್ನೋ ಸೋಲಿಸಲು ನಾನು ಇಲ್ಲಿಗೆ ಪ್ರಚಾರಕ್ಕೆ ಬಂದಿಲ್ಲ; ಎಚ್‌ಡಿಕೆ

ಸೋಮಣ್ಣ ವಿರುದ್ಧ ಕಿಡಿ ಎಚ್‌ಡಿಕೆ ಕಿಡಿ

ಜೆಡಿಎಸ್‌ ಅಭ್ಯರ್ಥಿಗೆ ಆಮಿಷವೊಡ್ಡಿರುವ ವಸತಿ ಸಚಿವ ವಿ.ಸೋಮಣ್ಣ ವೈಖರಿ ಬಗ್ಗೆ ಕಟುವಾಗಿ ಟೀಕಿಸಿದ ಕುಮಾರಸ್ವಾಮಿ, ಸೋಮಣ್ಣ ಅವರ ಭಾಷೆ ನಮಗೆ ಗೊತ್ತಿಲ್ಲ. ಕಾಂಗ್ರೆಸ್‌ ನಾಯಕರು ನೋಡಿದರೆ, ಬಿಜೆಪಿ ಶವಯಾತ್ರೆ ಎನ್ನುತ್ತಾರೆ. ಇವರು ನೋಡಿದರೆ ಗೂಟದ ಕಾರು ಎನ್ನುತ್ತಾರೆ. ಇವರು ಯಾವ ಗೂಟದ ಕಾರ್‌ ಕೊಡುತ್ತಾರೆ ಎನ್ನುವುದು ಗೊತ್ತಿಲ್ಲ. ಇವೆಲ್ಲ ಈಗ ವರ್ಕ್ ಆಗುವುದಿಲ್ಲ. ಸೋಮಣ್ಣ ಬಳಸಿದ ಭಾಷೆ ನಮಗೆ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಆತಂಕ ಶುರುವಾಗಿದೆ. ಅವರ ಇವತ್ತಿನ ಸ್ಥಿತಿ ನೋಡಿದರೆ ನಮಗೆ ಅರ್ಥವಾಗುತ್ತದೆ. ಜೆಡಿಎಸ್‌ ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದರು.