ಕೋವಿಡ್ ಕಾಲದಲ್ಲೂ ರಾಜ್ಯದ ಖಜಾನೆ ತುಂಬಿತ್ತು. ಕಾಂಗ್ರೆಸ್ ಅಪಪ್ರಚಾರದ ನಡುವೆಯೂ ಬಿಜೆಪಿ ಸರ್ಕಾರ ಖಜಾನೆಯನ್ನು ಸುಸ್ಥಿತಿಯಲ್ಲಿಟ್ಟಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಖಜಾನೆ ಖಾಲಿಯಾಗಿದೆ ಎಂದು ಕಿಡಿ ಕಾರಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 

ಮೈಸೂರು(ಏ.21): ಕಾಂಗ್ರೆಸ್ ಸರ್ಕಾರ ನೀಡಿದ ಚೊಂಬು ಜಾಹೀರಾತಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಸರ್ಕಾರದ ರಾಜ್ಯ ಚೊಂಬು ಖಾಲಿಯಾಗಿದೆ. ಅದನ್ನು ತುಂಬಿಸಿಕೊಡಿ ಎಂದು ಮೋದಿ ಅವರ ಬಳಿ ರಾಜ್ಯ ಸರ್ಕಾರ ಭಿಕ್ಷೆ ಕೇಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕೋವಿಡ್ ಕಾಲದಲ್ಲೂ ರಾಜ್ಯದ ಖಜಾನೆ ತುಂಬಿತ್ತು. ಕಾಂಗ್ರೆಸ್ ಅಪಪ್ರಚಾರದ ನಡುವೆಯೂ ಬಿಜೆಪಿ ಸರ್ಕಾರ ಖಜಾನೆಯನ್ನು ಸುಸ್ಥಿತಿಯಲ್ಲಿಟ್ಟಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಖಜಾನೆ ಖಾಲಿಯಾಗಿದೆ ಎಂದು ಕಿಡಿ ಕಾರಿದ್ದಾರೆ. 

ದೇಶದಲ್ಲಿ ಮೋದಿ ಅಲೆ ಇದ್ಯಾ? ಈ ಬಾರಿ ಹಾಗೇನು ಕಾಣ್ತಿಲ್ಲ ಎಂದ ಜಮೀರ್ ಅಹ್ಮದ್

ಕಾಂಗ್ರೆಸ್ ಸರ್ಕಾರ ಕನ್ನಡಿಗರ ಕೈಗೆ ಚೊಂಬು ಕೊಟ್ಟಿದೆ. ಆ ಖಾಲಿ ಚೊಂಬು ತುಂಬಿಸಿಕೊಡಿ ಎಂದು ಈಗ ಪ್ರಧಾನಿ ಮೋದಿ ಬಳಿ ಕೇಳಲು ನಿಂತಿದ್ದಾರೆ ಎಂದು ಎಚ್ .ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.