Asianet Suvarna News Asianet Suvarna News

ಪ್ರತಿಪಕ್ಷವನ್ನು ಹಗುರವಾಗಿ ಪರಿಗಣಿಸಬೇಡಿ: ಬಿ.ಎಸ್‌.ಯಡಿಯೂರಪ್ಪ

*  ಹಿಂದೂ ಸಮಾಜದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ
*  ದಾವಣಗೆರೆ ಬಿಜೆಪಿ ಪಕ್ಷದ ಕೋಟೆ
*  ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲಬೇಕಿದೆ

Former CM BS Yediyurappa Talks Over Opposition Parties grg
Author
Bengaluru, First Published Sep 19, 2021, 2:02 PM IST

ದಾವಣಗೆರೆ(ಸೆ.19): ಪ್ರಪಂಚದಲ್ಲಿಯೇ ಅಚ್ಚರಿ ಪಡುವ ನಾಯಕತ್ವ ಪ್ರಧಾನಿ ಮೋದಿ ಅವರದಾಗಿದೆ. ಮೈಸೂರಿನಲ್ಲಿ ಮೋದಿಯವರ ನೆನಪಿಸುವ ಉತ್ತಮ ಕಾರ್ಯಕ್ರಮ ನಡೆದಿದೆ ಅಂತ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. 

ಇಂದು(ಭಾನುವಾರ) ನಗರದ ತ್ರಿಶೂಲ ಸಭಾಭವನದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಭಾಷಣ ಮಾಡಿದ ಬಿಎಸ್‌ವೈ, ಪ್ರತಿಪಕ್ಷವನ್ನು ಯಾರು ಹಗುರವಾಗಿ ಪರಿಗಣಿಸಬೇಡಿ. ಕಾಂಗ್ರೆಸ್ ಪಕ್ಷ ಬಿಜೆಪಿ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದೆ. ನಾವು ಮುಂದಿನ ಚುನಾವಣೆಯಲ್ಲಿ 140 ಸೀಟ್‌ಗಳನ್ನ ಗೆಲ್ಲಬೇಕಿದೆ. ಪರಿಶಿಷ್ಟ ಪಂಗಡ ಜಾತಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಮೋದಿಯವರ ಕೆಲಸಗಳ‌ನ್ನು ಮನೆ ಮನೆ ಬಾಗಿಲಿಗೆ ತಲುಪಿಸಬೇಕು ಅಂತ ತಿಳಿಸಿದ್ದಾರೆ. 

ಯಡಿಯೂರಪ್ಪ ಪ್ರವಾಸದ ಬಗ್ಗೆ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಒಟ್ಟಾಗಿ ಪ್ರವಾಸ ಮಾಡುತ್ತಾರೆ. ನಾನೊಬ್ಬನೆ ಪ್ರವಾಸ ಮಾಡುವ ಪರಿಸ್ಥಿತಿ ಬಂದಿಲ್ಲ. ನನ್ನ ಜೊತೆ ಸಂಸದರು, ಶಾಸಕರು ಸೇರಿದಂತೆ ಎಲ್ಲ ಸದಸ್ಯರಿರುತ್ತಾರೆ. ಸಂಘಟಿತವಾಗಿ ಪ್ರಯತ್ನ ಮಾಡಬೇಕಿದೆ. ಕಾಂಗ್ರೆಸ್ ಎದ್ದು ಕೂತಿದೆ. ಪ್ರತಿಯೊಂದು ಬೂತ್‌ನಲ್ಲಿ ಸಂಘಟನೆ ಪ್ರಭಲವಾಗಬೇಕು. ರಾಜ್ಯ ಸರ್ಕಾರ ಮೋದಿಯವರ ಕಾರ್ಯಕ್ರಮಗಳನ್ನ ಮ‌ನೆ ಮನೆಗೆ ತಲುಪಿಸಬೇಕಿದೆ ಅಂತ ಕರೆ ಕೊಟ್ಟಿದ್ದಾರೆ. 

ಮಂದಿರ ವಿಚಾರದಲ್ಲಿ ಕೆಲ ಭಕ್ತರಿಗೆ ನೋವಾಗಿದೆ: ಸಿಎಂ ಬೊಮ್ಮಾಯಿ

ದೇವಸ್ಥಾನ ಕೆಡುವುದಕ್ಕೆ ಅವಕಾಶ ಕೊಡಲ್ಲ

ಯಾವುದೇ ಕಾರಣಕ್ಕೆ ಯಾವುದೇ ದೇವಸ್ಥಾನಗಳನ್ನ ಕೆಡುವುದಕ್ಕೆ ಅವಕಾಶ ಕೊಡುವುದಿಲ್ಲ. ನಮ್ಮ ಕಾರ್ಯಕರ್ತರು ಚಿಂತೆ ಮಾಡುವ ಅಗತ್ಯವಿಲ್ಲ. ಅದಕ್ಕಾಗಿ ಸುಪ್ರಿಂ‌ಕೋರ್ಟ್‌ಗೆ ಸೂಕ್ತ ದಾಖಲೆಗಳೊಂದಿಗೆ ಮನವಿ ಮಾಡುತ್ತೇವೆ. ದೇವಸ್ಥಾನಗಳನ್ನು ಕೆಡವುದನ್ನು ನಿಲ್ಲಿಸಲು ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಒಂದೆರಡು ಘಟನೆಗಳಿಂದ ಯಾರು ಕೂಡ ನೋವು ಮಾಡಿಕೊಳ್ಳಬಾರದು ಅಂತ ತಿಳಿಸಿದ್ದಾರೆ. 

ಮೋದಿಯವರ ಕಾರ್ಯಕ್ರಮಗಳಿವೆ ಅಂತ ಮೈಮರೆಯಬೇಡಿ

ಬಿಜೆಪಿ ಕಾರ್ಯಕರ್ತರು ಯಾವುದೇ ಭ್ರಮೆಯಲ್ಲಿ ಇರೋದು ಬೇಡ. ಮೋದಿಯವರ ಕಾರ್ಯಕ್ರಮಗಳಿವೆ ಅಂತ ಮೈಮರೆಯಬೇಡಿ. ಸಿಂದಗಿ, ಹಾನಗಲ್ ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ನಾವು ಅಧಿಕಾರದಲ್ಲಿ‌ ಇದ್ದಾಗ ದಾವಣಗೆರೆಯಲ್ಲಿ ಬೃಹತ್ ಸಮವೇಶ ಮಾಡಿದ್ವಿ. ಮೊದಲೆಲ್ಲ ಐವತ್ತು ಅರವತ್ತು ಸಾವಿರ ಜನರು ಸೇರುತ್ತಿದ್ದರು. ಅವರೇ ಗಾಡಿಗಳನ್ನು ಮಾಡಿಕೊಂಡು ಬರ್ತಾ ಇದ್ರು. ಒಂದು ತಿಂಗಳ ಕಾಲ ನಿರಂತರ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಯಾರು ಸಹ ಪ್ರತಿಪಕ್ಷಗಳನ್ನು ಹಗುರವಾದ ತೆಗೆದುಕೊಳ್ಳಬೇಡಿ. ಅವರಿಗೆ ಆದಂತಹ ಶಕ್ತಿ, ತಂತ್ರಗಾರಿಕೆ‌ ಇರುತ್ತದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಗಬೇಕು. ಎಸ್ಸಿ, ಎಸ್ಟಿ ಹಿಂದುಳಿದ ಸಮುದಾಯದ ಜನರನ್ನು ಪಕ್ಷಕ್ಕೆ ಸೇರಿಸಬೇಕು. ಆಗ ಮತ್ತಷ್ಟು ಪಕ್ಷ ಬಲವಾಗುತ್ತದೆ. ಮೋದಿಯವರ ಹೆಸರು ಹೇಳಿಕೊಂಡು ಗೆಲುವು ಸಾಧಿಸದೇ ನಮ್ಮ ಕೆಲಸದಿಂದ‌ ಗೆಲುವು ಸಾಧಿಸೋಣ ಅಂತ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. 

ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲಬೇಕಿದೆ. ಆ ಕಾರಣಕ್ಕೆ ಕಾರ್ಯಕಾರಣಿ ಮುಗಿಸಿಕೊಂಡು ಎಲ್ಲರೂ ಮನೆಗೆ ಹೋಗಬೇಡಿ. ಮತಗಟ್ಟೆಗಳಿಗೆ ಹೋಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದ್ದಾರೆ. 

ಬಿಜೆಪಿಯಲ್ಲಿ ಮಹತ್ವ ಬೆಳವಣಿಗೆ: ಮತ್ತೊಮ್ಮೆ ಬೊಮ್ಮಾಯಿ ಸಚಿವ ಸಂಪುಟಕ್ಕೆ ಸರ್ಜರಿ ಆಗುತ್ತಾ?

ಅಧಿಕಾರಿಗಳ ತಪ್ಪು ನಿರ್ಧಾರದಿಂದ ನಂಜನಗೂಡಿನ ಘಟನೆ 

ಅಧಿಕಾರಿಗಳ ತಪ್ಪು ನಿರ್ಧಾರದಿಂದ ನಂಜನಗೂಡಿನ ಘಟನೆ ಜರುಗಿದೆ. ಅಧಿಕಾರಿಗಳ ಮೇಲೆ ಕ್ರಮ ಆಗುತ್ತದೆ ಅಂತ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ ಅಂತ ಕಟೀಲ್‌ ತಿಳಿಸಿದ್ದಾರೆ.  ರಾಜ್ಯದಲ್ಲಿ ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಎರಡು ವರ್ಷ ಆಗಿದೆ. ಇಲ್ಲಿಯವರೆಗೆ ಪೂರ್ಣ ಪ್ರಮಾಣದ ಸಭೆಯಾಗಿರಲಿಲ್ಲ. ಕೋವಿಡ್ ಕಾರಣದಿಂದ ಆಗಿರಲಿಲ್ಲ. ದಾವಣಗೆರೆ ಬಿಜೆಪಿ ಪಕ್ಷದ ಕೋಟೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನವನ್ನ ಗೆಲ್ಲಬೇಕು. ದೇಶ ಕಂಡ ಶ್ರೇಷ್ಟ ನಾಯಕ ಪ್ರಧಾನಿ ಮೋದಿ ಅವರಾಗಿದ್ದಾರೆ. ಕಳೆದ 7 ವರ್ಷಗಳಿಂದ ಅದ್ಭುತ ಸಾಧನೆಗಳನ್ನ ಮಾಡಿದ್ದಾರೆ. ಯಾವ ದೇಶ ವೀಸಾ ಕೊಡಲು ಹಿಂದೇಟು ಹಾಕಿತ್ತೋ ಈಗ ಅವರೇ ಕರೆಯುತ್ತಿದ್ದಾರೆ. ಭಾರತ ಅತಿ ಹೆಚ್ಚು ವಾಕ್ಸಿನೇಷನ್ ಮಾಡುವ ಮೂಲಕ ಪ್ರಪಂಚದಲ್ಲಿ ಮೊದಲ ಸ್ಥಾನ ಪಡೆದಿದೆ ಅಂತ ಹೇಳಿದ್ದಾರೆ. 

ಕಾಂಗ್ರೆಸ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ಸರ್ಕಾರ ಇದ್ದರೇ ಎತ್ತುಗಳು ಇರುತ್ತಿರಲಿಲ್ಲ. ಅವುಗಳನ್ನ  ಉಳಿಸಿದ್ದವರು ಯಡಿಯೂರಪ್ಪ ಮತ್ತು ಬೊಮ್ಮಾಯಿ‌. ಹಿಂದೂ ಸಮಾಜದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಹಿಂದೂ ದೇವಾಲಯಕ್ಕೆ ಹಾನಿಯಾಗಲು ಬಿಡುವುದಿಲ್ಲ. ಯಾವ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅವರಿಗೆ ತಕ್ಕ ಶಿಕ್ಷೆಯಾಗುತ್ತದೆ ಅಂತ ಭರವಸೆ ನೀಡಿದ್ದಾರೆ. 
 

Follow Us:
Download App:
  • android
  • ios