ದೇಶದೆಲ್ಲೆಡೆ ಕಾಂಗ್ರೆಸ್‌ ಪಕ್ಷ ಧೂಳಿಪಟ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

ದೇಶದೆಲ್ಲೆಡೆ ಕಾಂಗ್ರೆಸ್‌ ಪಕ್ಷ ಧೂಳಿಪಟವಾಗಿದೆ. ಬರುವ ಚುನಾವಣೆಯಲ್ಲಿ ಬೈಲಹೊಂಗಲ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಮಲ ಅರಳಿಸಿ ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು.

Former CM BS Yediyurappa Outraged Against Congress At Belagavi gvd

ಬೈಲಹೊಂಗಲ (ಮಾ.05): ದೇಶದೆಲ್ಲೆಡೆ ಕಾಂಗ್ರೆಸ್‌ ಪಕ್ಷ ಧೂಳಿಪಟವಾಗಿದೆ. ಬರುವ ಚುನಾವಣೆಯಲ್ಲಿ ಬೈಲಹೊಂಗಲ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಮಲ ಅರಳಿಸಿ ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಪಟ್ಟಣದಲ್ಲಿ ನಡೆದ ಬೃಹತ್‌ ರೋಡ್‌ ಶೋ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ನಿಮ್ಮ ಆಟ ಕೊನೆಯಾಗಿದೆ. ರಾಜಕೀಯ ಡೊಂಬರಾಟ ಬಿಟ್ಟುಬಿಡಿ. ನರೇಂದ್ರ ಮೋದಿ ಅವರ ಟೀಕೆ ಮಾಡುವುದು ಬಿಟ್ಟು ನಿಮ್ಮ ಪರಿಸ್ಥಿತಿ ಏನಾಗಿದೆ. 

ಎಲ್ಲ ಚುನಾವಣೆಯಲ್ಲೂ ಜನತೆ ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ ನೋಡಿಕೊಳ್ಳಿ. ಯಾವ ಕಾಂಗ್ರೆಸ್‌ ಪಕ್ಷ ಹಣ ಬಲ, ತೋಳ ಬಲದಿಂದ ಜಾತಿಯ ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದೆಯೋ ಅದು ಇಂದು ಕೊನೆಯದಾಗ್ತಾಯಿದೆ. ರಾಜ್ಯದಲ್ಲಿ 140 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಅಧಿಕಾರ ಹಿಡಿಯುತ್ತೇವೆ. ಯಾವುದೇ ಸಂಶಯ ಬೇಡ. ಕಾರ್ಯಕರ್ತರು ನರೇಂದ್ರ ಮೋದಿ ಅವರ ಸಾಧನೆಗಳನ್ನು ತಿಳಿಸಿ ಬಿಜೆಪಿಗೆ ಹೆಚ್ಚೆಚ್ಚು ಗೆಲ್ಲಿಸಬೇಕು ಎಂದು ಕೋರಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಾಂಗ್ರೆಸ್‌ ಸುಳ್ಳು ಆಶ್ವಾಸನೆ ಪಕ್ಷ. ಯಾವುದೇ ಆಶ್ವಾಸನೆ ಈಡೇರಿಸಿಲ್ಲ. 

ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯ: ಸಂಸದ ಪ್ರತಾಪ್ ಸಿಂಹ ಕಿಡಿ

ಕಿಸಾನ್‌ ಸನ್ಮಾನ ಮೂಲಕ ಕೃಷಿಕರ ಖಾತೆಗೆ ಮೋದಿಜಿ ಮಾತಿನಂತೆ ಹಣ ನೀಡುತ್ತಿದ್ದಾರೆ. ವಿಜಯ ಸಂಕಲ್ಪಯಾತ್ರೆಯಲ್ಲಿ ಕಾಂಗ್ರೆಸ್‌ನ ಪ್ರಜಾಧ್ವನಿ ಸುಳ್ಳು ಧ್ವನಿಯಾಗಿ ಅಡಗಿ ಹೋಗಿದೆ ಎಂದು ಲೇವಡಿ ಮಾಡಿದರು. ಸಚಿವ ಭೈರತಿ ಬಸವರಾಜ ಮಾತನಾಡಿದರು. ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ, ಸಚಿವರಾದ ಮುರಗೇಶ ನಿರಾಣಿ, ಸಿ.ಸಿ.ಪಾಟೀಲ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ಅರುಣ ಶಹಾಪುರ, ಮಹಾಂತೇಶ ಕವಟಗಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶಾಸಕ ಮಹಾಂತೇಶ ದೊಡಗೌಡ್ರ ರಥಯಾತ್ರೆಯಲ್ಲಿದ್ದರು.

ಅಭೂತ್ವಪೂರ್ವ ಯಶಸ್ಸು ಕಂಡ ವಿಜಯ ಸಂಕಲ್ಪ ಯಾತ್ರೆ: ಚನ್ನಮ್ಮ ವೃತ್ತದಿಂದ ಆರಂಭವಾದ ರೋಡ್‌ ಶೋ ರಾಯಣ್ಣ ವೃತ್ತದ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತಕ್ಕೆ ತಲುಪಿತು. ಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನರು ತೆರಳಿ ಅಭೂತ್ವಪೂರ್ವ ಯಶಸ್ಸು ಕಂಡಿತು. ವಾದ್ಯಮೇಳಗಳು ಕಳೆ ತಂದವು. ಗೋ ಪೂಜೆಗೈದು, ವೀರಮಾತೆ ಚನ್ನಮ್ಮಾಜೀಗೆ ಗೌರವ ಸಮರ್ಪಿಸಲಾಯಿತು. ಪಟ್ಟಣವೆಲ್ಲ ಕೇಸರಿಮಯವಾಗಿತ್ತು. ಸ್ವಾಗತದ ಬ್ಯಾನರ ಅರ್ಬಟ ಜೋರಾಗಿತ್ತು. ಬಿಜೆಪಿ ಬಾವುಟ, ರೂಮಾಲು, ಟೊಪ್ಪಿಗೆ, ಪೇಟಾ ತೊಟ್ಟು ಮೆರವಣಿಗೆ ಮುಂದೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. 

ಬಡ್ಲಿ ಗ್ರಾಮದ ಲಂಬಾಣಿ ಮಹಿಳಾ ತಂಡದ ಲಂಬಾಣಿ ಕುಣಿತ ಆಕರ್ಷಣಿಯವಾಗಿತ್ತು. ಮುಖಂಡ ವಿಜಯ ಮೆಟಗುಡ್ಡ, ಬಿಜೆಪಿ ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ, ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ, ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ಬಸವರಾಜ ನೇಸರಗಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ದೇಸಾಯಿ, ಲಕ್ಕಪ್ಪ ಕಾರಗಿ, ಅಮಿತ ವಿಶ್ವನಾಥ ಪಾಟೀಲ, ಜಿಲ್ಲಾ ಮಾದ್ಯಮ ವಕ್ತಾರ ಎಫ್‌.ಎಸ್‌. ಸಿದ್ದನಗೌಡರ, ಮಹೇಶ ಹರಕುಣಿ, ಪ್ರಪುಲ ಪಾಟೀಲ, ಶ್ರೀಶೈಲ ಯಡಳ್ಳಿ, ಸುನೀಲ ಮರಕುಂಬಿ, ಸುಭಾಷ ತುರಮರಿ, ಮುರುಗೇಶ ಗುಂಡ್ಲೂರ, ರತ್ನಾ ಗೋದಿ, ಶಾಂತಾ ಮಡ್ಡಿಕಾರ, ಸಂತೋಷ ಹಡಪದ, ಶಿವಾನಂದ ಬಡ್ಡಿಮನಿ, ಸುನೀಲ ಈಟಿ, ರಮೇಶ ಯಲ್ಲಪ್ಪಗೌಡರ, ರಾಜು ಕುಡಸೋಮಣ್ಣವರ, ನಿಂಗಪ್ಪ ಚೌಡನ್ನವರ, ಸಾಗರ ಬಾಂವಿಮನಿ, ಮಹಾಂತೇಶ ಹೊಸಮನಿ ಸೇರಿ ಸಹಸ್ರಾರು ಕಾರ್ಯಕರ್ತರು ಇದ್ದರು.

ಶಾಸಕ ಮಾಡಾಳ ವಿರುದ್ಧ ಲೋಕಾಯುಕ್ತರು ಸೂಕ್ತ ಕ್ರಮ: ಲಂಚದ ಹಣ ಪಡೆದು ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿರುವ ಶಾಸಕ ಮಾಡಾಳ ವೀರುಪಾಕ್ಷಪ್ಪ ವಿರುದ್ಧ ಲೋಕಾಯುಕ್ತರು ಸೂಕ್ತಕ್ರಮ ಜರುಗಿಸಲಿದ್ದಾರೆ. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಅವರ ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ, ಕಾಂಗ್ರೆಸ್‌ ಅದನ್ನು ಮಾಡುವುದಿಲ್ಲ, ಕಾನೂನು ಮಾಡುತ್ತದೆ ಎಂದು ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಕಾಂಗ್ರೆಸ್‌ ಅವಧಿಯಲ್ಲಿ ಬಡವರಿಗೆ ಅನುಕೂಲವಾಗಿಲ್ಲ: ನಳಿನ್‌ ಕುಮಾರ್‌ ಕಟೀಲ್‌

ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಬರುವ ಚುನಾವಣೆಯಲ್ಲಿ ಬೈಲಹೊಂಗಲ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಮಲ ಅರಳಿಸಿ ಕಾಂಗ್ರೆಸ್‌ ಮುಕ್ತ -ಭಾರತ ಮಾಡಬೇಕು. ಬೈಲಹೊಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಠೇವಣಿ ಕಳೆಯಬೇಕು.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

Latest Videos
Follow Us:
Download App:
  • android
  • ios