Asianet Suvarna News Asianet Suvarna News

ಕುಂಟು ನೆಪ ಹೇಳಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ: ಸಿದ್ದು ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಅಕ್ಕಿ ನೀಡೋಕೆ ಆಗದೆ ಇದ್ರೆ ಜನರಿಗೆ ಹಣ ನೀಡಿ. ಡಿಬಿಟಿ ಮಾಡಿ. ಅಕೌಂಟ್ ಇದೆ. ಇಲ್ಲವಾದರೆ ಇದನ್ನು ದೋಖಾ ಸೀರಿಸ್ ಅಂತಾರೆ‌ ಅಂತ ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದ ಬೊಮ್ಮಾಯಿ‌ 

Former CM Basavaraj Bommai Slams CM Siddaramaiah grg
Author
First Published Jun 15, 2023, 12:59 PM IST

ಬೆಂಗಳೂರು(ಜೂ.15):  ಎಲ್ಲಾ ರಾಜ್ಯಗಳಿಗೆ ಫುಡ್ ಸೆಕ್ಯುರಿಟಿ ಆಕ್ಟ್ ಬಂದ ಮೇಲೆ ಐದು ಕೆಜಿ ಅಕ್ಕಿ ನೀಡುತ್ತಾ ಬಂದಿದೆ. ಟ್ರಾನ್ಸ್‌ಪೋರ್ಟ್‌ ಚಾರ್ಜ್ ಕೂಡ ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಮೊದಲು ರಾಜ್ಯ ಸರ್ಕಾರ ನೀಡಬೇಕಾಗಿತ್ತು. ಈಗ ಕೇಂದ್ರ ಭರಿಸುತ್ತಿದೆ. ಇದನ್ನು ಸಿಎಂ ಹೇಳ್ತಾ ಇಲ್ಲ. ಈಗಾಗಲೇ ಐದು ಕೆಜಿ ಅಕ್ಕಿ ಕೇಂದ್ರ ನೀಡ್ತಿದೆ. ಅದರ ಮೇಲೆ ಇವರು ಐದು ಕೆಜಿ ನೀಡ್ತೇವೆ ಎನ್ನಬೇಕು. ಅದನ್ನು ಸಿಎಂ ಹೇಳ್ತಾ ಇಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದಾರೆ.

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಡಿಸೆಂಬರ್ ತನಕ ಹತ್ತು ಕೆಜಿ ಅಕ್ಕಿ ನೀಡ್ತಾ ಇದ್ವಿ, ಬಳಿಕ ನಾನು ರಾಜ್ಯ ಸರ್ಕಾರದ ಬೊಕ್ಕಸದಿಂದ ಒಂದು ಕೆಜಿ ಅಕ್ಕಿ ಹೆಚ್ಚುವರಿ ನೀಡಿದೆ. ನಾನು ಅಂದೇ ಫೈಲ್‌ನಲ್ಲಿ ಕ್ಲೀಯರ್ ಆಗಿ ಬರೆದಿದ್ದೇನೆ. FCI ಅಥವಾ ಟೆಂಡರ್ ಮುಖಾಂತರ ಅಕ್ಕಿ ಖರೀದಿ ಮಾಡಬೇಕಾಗುತ್ತದೆ ಎಂದು ನಾನೇ ಫೈಲ್‌ನಲ್ಲಿ ಬರೆದಿದ್ದೆ. ನಮ್ಮ ಸರ್ಕಾರ ಇದ್ದಾಗಲೂ FCI ಅಕ್ಕಿ ನೀಡಲ್ಲ ಎಂದಿತ್ತು. ಹೀಗಾಗಿ ನಾನು ಅಂದೇ ಫೈಲ್‌ನಲ್ಲಿ ಬರೆದಿದ್ದೆ. FCI ಮೇಲೆ ಡಿಪೆಂಡ್ ಆಗಬೇಡಿ ಎಂದು ಹೇಳಿದ್ದೆ ಅಂತ ಹೇಳಿದ್ದಾರೆ. 

ಅಕ್ಕಿ ಕೊಡುತ್ತೇವೆಂದು ಒಪ್ಪಿ ಈಗ ಕೈ ಕೊಟ್ಟ ಕೇಂದ್ರ ಸರ್ಕಾರ: ಸಿಎಂ ಸಿದ್ದು ಗಂಭೀರ ಆರೋಪ

ಶಾರ್ಟ್ ಟರ್ಮ್ ಟೆಂಡರ್ ಆದ್ರೂ ಕರೆಯಬೇಕಾಗಿತ್ತು. ಅಂದೇ ನೀವು ಟೆಂಡರ್ ಕರೆದಿದ್ರೆ ಸಮಸ್ಯೆ ಆಗ್ತಾ ಇರಲಿಲ್ಲ. ನೀವು ಮೊದಲ ಕ್ಯಾಬಿನೆಟ್‌ನಲ್ಲೇ ಟೆಂಡರ್ ಕರೆಯಬೇಕಿತ್ತು. ಈಗ ಕುಂಟು ನೆಪ ಹೇಳ್ತಾ ಇದ್ದಾರೆ. ಈಗ ನೆಪ ಹೇಳಿ, ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗ ರಾಜಕೀಯ ಮಾಡ್ತಾ ಇದ್ದೀರಾ?. ಕೇಂದ್ರದ ಆಹಾರ ಸಚಿವರಿಗೆ ಪತ್ರ ಬರೆಯಬೇಕಿತ್ತು. ಎರಡು ಮೂರು ತಿಂಗಳಾದರೂ ನೀಡಿ ಎಂದು ಹೇಳಬೇಕಿತ್ತು. ಅದನ್ನು ಮಾಡಿಲ್ಲ ನೀವು. FCI ಗೆ ಏನು ಅಥಾರಿಟಿ ಇಲ್ಲ. FCI ಕೇವಲ ಸ್ಟಾಕ್ ಮಾಡ್ತದೆ. ಅಕ್ಕಿ ಹಂಚಿಕೆ ಬಗ್ಗೆ ಗೊತ್ತಿರೋದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆಹಾರ ಇಲಾಖೆ ಸಚಿವರನ್ನು ಕಳಿಸಬೇಕಿತ್ತು. ಈಗ FCIಗೆ ಪತ್ರ ಬರೆದು ಅವರು ನೀಡಿದ ಉತ್ತರದ ಮೇಲೆ ರಾಜಕೀಯ ಮಾಡ್ತಾ ಇದ್ದೀರಿ. ಇದು ನಿಮಗೆ ಶೋಭೆ ತರಲ್ಲ ಅಂತ ಸಿಎಂ ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ಕೆಂಡ ಕಾರಿದ್ದಾರೆ. 

ಅಕ್ಕಿ ನೀಡೋಕೆ ಆಗದೆ ಇದ್ರೆ ಜನರಿಗೆ ಹಣ ನೀಡಿ

ಅಕ್ಕಿ ನೀಡೋಕೆ ಆಗದೆ ಇದ್ರೆ ಜನರಿಗೆ ಹಣ ನೀಡಿ. ಡಿಬಿಟಿ ಮಾಡಿ. ಅಕೌಂಟ್ ಇದೆ. ಇಲ್ಲವಾದರೆ ಇದನ್ನು ದೋಖಾ ಸೀರಿಸ್ ಅಂತಾರೆ‌ ಅಂತ ಸಿಎಂ ಸಿದ್ದರಾಮಯ್ಯ ಮೇಲೆ ಬೊಮ್ಮಾಯಿ‌ ವಾಗ್ದಾಳಿ ನಡೆಸಿದ್ದಾರೆ. 

ಮೇ. 12ಕ್ಕೆ ನಮ್ಮ ಸರ್ಕಾರ ಇತ್ತಾ?, ಆಗ ವಿದ್ಯುತ್ ಬಿಲ್‌ನ ಹೈಕ್ ಬಗ್ಗೆ ನೋಟಿಫಿಕೇಶನ್ ಆಗಿತ್ತು. ಆದರೆ ಜೂನ್ 2 ಕ್ಕೆ ಆದೇಶ ಆಗಿದೆ. ಆಗ ಯಾರ ಸರ್ಕಾರ ಇತ್ತು? ಅಂತ ಬೊಮ್ಮಾಯಿ‌ ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಮಾತೆತ್ತಿದ್ರೆ ಹಿಂದಿನ ಸರ್ಕಾರ ಮಾಡಿದ್ದು ಅಂತಾರೆ. ನಾವು ಹಿಂದೆ ಹೆಚ್ಚುವರಿ ಅಕ್ಕಿ ಖರೀದಿ ಮಾಡುವಾಗ ದುಡ್ಡು ಕೊಟ್ಟೇ ಅಕ್ಕಿ ಖರೀದಿ ಮಾಡಿದ್ದೇವೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದರು ದುಡ್ಡು ಕೊಟ್ಟೇ ಅಕ್ಕಿ ಖರೀದಿ ಮಾಡಿದ್ದೀವಿ. ಕೇಂದ್ರ ಆಹಾರ ಇಲಾಖೆಯಿಂದ ನೀವು ಖರೀದಿ ಮಾಡಬಹುದಿತ್ತಲ್ಲ. ಎರಡು ಸರ್ಕಾರ ಇಲ್ಲದೇ ಇದ್ದಾಗ ನೋಟೀಫಿಕೇಶನ್ ಮಾಡಿದ್ದಾರೆ ಅಂತ ತಿಳಿಸಿದ್ದಾರೆ. 

ಸಾರಿಗೆ ನಿಗಮದಲ್ಲೇ ಉತ್ಪಾದನೆ ಆಗುವ ವೇತನ ನೀಡುವಂತೆ ಆದೇಶದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ,  ಮಹಿಳೆಯರ ಉಚಿತ ಪ್ರಯಾಣಕ್ಕೆ ನಾಲ್ಕೇ ದಿನಕ್ಕೆ 10 ಕೋಟಿಯಾಗಿದೆ. ಇದು ಸಾಧ್ಯವಿಲ್ಲ ಅಂತಿದೆ. ಇದು ಯಾಮಾರಿಸೋ ಕೆಲಸ. ಆಗಲ್ಲ ಅಂತ ಗೊತ್ತಿದ್ದರೂ ಈಗ ಆದೇಶ ಮಾಡಿದ್ದಾರೆ. ಐದು ಉಚಿತ ಯೋಜನೆ ಜಾರಿಗೆ ತರೋದು ಕಾಂಗ್ರೆಸ್ ಸರ್ಕಾರಕ್ಕೆ ದುಸ್ತರವಾಗಿದೆ. ಐದು ಗ್ಯಾರಂಟಿ ಅನುಷ್ಠಾನದಿಂದ 59 ಸಾವಿರ ಕೋಟಿ ಆಗುತ್ತೆ ಅಂತ ಸಿಎಂ‌ ಅವರೇ ಹೇಳಿಕೊಂಡಿದ್ದಾರೆ. ಮೊದಲೇ ಅವರಿಗೆ ಗೊತ್ತಿರಲಿಲ್ವಾ? ಅಂತ ಪ್ರಶ್ನೆ ಮಾಡಿದ್ದಾರೆ. 

ರಾಜ್ಯಗಳಿಗೆ ಅಕ್ಕಿ ಮಾರಾಟ ವಿಚಾರ: ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಸ್ಪಷ್ಟನೆ ನೀಡಿದ್ದು, ನಾನು ಜೀವಮಾನದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾರು ಏನೆ ಹೇಳಲಿ, ನಾನು ಆ ರೀತಿ ರಾಜಕೀಯ ಮಾಡಿಲ್ಲ. ಸಿದ್ದರಾಮಯ್ಯ ಮೇಲೆ ಫ್ರೆಶ್ ಆಗಿ ಅವರನ್ನೇ ಪಾರ್ಟಿ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಚಲವಾದಿ ನಾರಾಯಣ್ ಸ್ವಾಮಿ ದೂರು ನೀಡಿದ್ದಾರೆ. ನಾನು ದಾಖಲೆ ನೀಡೊಕೆ ಸಿದ್ಧನಿದ್ದೇನೆ ಅಂತ ಸವಾಲ್‌ ಹಾಕಿದ್ದಾರೆ. 

ಕೆಂಪಣ್ಣ ಆಯೋಗದ ವರದಿ ಟೇಬಲ್ ಮಾಡಿಲ್ಲ ಎನ್ನುವ ಪ್ರತಾಪ್ ಸಿಂಹ ಆರೋಪದ ಬಗ್ಗೆ ಮಾತನಾಡಿದ ಬೊಮ್ಮಾಯಿ, ಅವರಿಗೆ ಮಾಹಿತಿ ಕೊರತೆ ಇದೆ. ಕೆಂಪಣ್ಣ ವರದಿ ಟೇಬಲ್ ಮಾಡೋ ಅಗತ್ಯ ಇಲ್ಲ. ವರದಿ ಸ್ವೀಕಾರ ಮಾಡಿ. ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ತನಿಖೆ ಮಾಡಲು ಆದೇಶ ನೀಡಲಾಗಿತ್ತು. ಹೀಗಾಗಿ ಮರುತನಿಖೆ ಆದೇಶ ಮಾಡಿ ಕಾಲಹರಣ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. 

Follow Us:
Download App:
  • android
  • ios