ಸನಾತನ ಧರ್ಮ ಇಲ್ಲ ಎನ್ನುವವರು ಭಾರತೀಯರೇ ಅಲ್ಲ: ಸೋಮಶೇಖರ ರೆಡ್ಡಿ
ಬಿಜೆಪಿ ಗೆದ್ದರೂ, ಸೋತರೂ ಪಕ್ಷದ ಚಟುವಟಿಕೆಗಳು ಹಾಗೂ ಸಂಘಟನಾ ಕೆಲಸ ನಿರಂತರವಾಗಿ ನಡೆಯುತ್ತವೆ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆ ಕೆಲಸ ಮತ್ತಷ್ಟೂ ಸಕ್ರೀಯಗೊಳಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸಜ್ಜಾಗುತ್ತಿದ್ದು, ತೆರೆಮರೆಯ ಸಂಘಟನಾ ಕೆಲಸ ನಡೆದಿದೆ: ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ
ಬಳ್ಳಾರಿ(ಸೆ.10): ಸನಾತನ ಧರ್ಮ ಇಲ್ಲ ಎನ್ನುವವರು ಭಾರತೀಯರೇ ಅಲ್ಲ ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟರು. ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿ ಜರುಗಿದ ನನ್ನ ಮಣ್ಣು-ನನ್ನದೇಶ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ದೇಶದಲ್ಲಿ ಹುಟ್ಟಿದವರೆಲ್ಲರೂ ಸನಾತನ ಧರ್ಮಕ್ಕೆ ಸೇರಿದವರು. ಈ ದೇಶ ಸನಾತನ ಧರ್ಮದ ಪುಣ್ಯಭೂಮಿ. ದೇಶದ ಅಭಿಮಾನ ಹಾಗೂ ಈ ನೆಲದ ಮಹತ್ವದ ಬಗ್ಗೆ ಜನರಲ್ಲಿ ಭಕ್ತಿ ಮೂಡಿಸುವ ಉದ್ದೇಶದಿಂದಲೇ ಬಿಜೆಪಿಯಿಂದ ನನ್ನ ಮಣ್ಣು-ನನ್ನ ದೇಶ ಅಭಿಯಾನ ನಡೆಸಲಾಗುತ್ತಿದೆ. ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಗತಿಪಥ ರಸ್ತೆ ನಿರ್ಮಾಣ ಬಳಿಕ ಅಲ್ಲಿ ಸ್ಥಾಪಿಸುವ ಸ್ಮಾರಕಕ್ಕೆ ದೇಶದ ಪ್ರತಿಯೊಂದು ಭಾಗದಿಂದ ಮಣ್ಣು ಸಂಗ್ರಹಿಸಿ ಕಳಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಗೆದ್ದರೂ, ಸೋತರೂ ಪಕ್ಷದ ಚಟುವಟಿಕೆಗಳು ಹಾಗೂ ಸಂಘಟನಾ ಕೆಲಸ ನಿರಂತರವಾಗಿ ನಡೆಯುತ್ತವೆ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆ ಕೆಲಸ ಮತ್ತಷ್ಟೂ ಸಕ್ರೀಯಗೊಳಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸಜ್ಜಾಗುತ್ತಿದ್ದು, ತೆರೆಮರೆಯ ಸಂಘಟನಾ ಕೆಲಸ ನಡೆದಿದೆ. ಲೋಕಸಭಾ ಚುನಾವಣೆಗೆ ಬಳ್ಳಾರಿ ಜಿಲ್ಲೆಯಿಂದ ಯಾರು ಸ್ಪರ್ಧಿಸಬೇಕು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ. ಯಾರು ಸ್ಪರ್ಧಿಸಿದರೂ ಗೆಲುವಿಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಖಾಕಿ ಚಡ್ಡಿ ಹಾಕೋದಿಲ್ಲ, ರಾಷ್ಟ ಭಕ್ತಿ ವಿಚಾರದಲ್ಲಿ ಗಟ್ಟಿಯಾಗಿಲ್ಲ: ಕೆ.ಎಸ್. ಈಶ್ವರಪ್ಪ
ಜೆಡಿಎಸ್‌ನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ಸೂಕ್ತವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಇಲ್ಲದಿದ್ದರೂ ಮೈಸೂರು, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್ ತನ್ನದೇ ಆದ ಸಂಘಟನೆ ಶಕ್ತಿ ಹೊಂದಿದ್ದು, ಹೊಂದಾಣಿಕೆಯಿಂದ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಜೆಡಿಎಸ್‌ನವರಾಗಿದ್ದು ಅವರು ಸಹ ನಮಗೆ ಬೆಂಬಲ ನೀಡುತ್ತಾರೆ ಎಂದರು.
ಶ್ರೀರಾಮುಲು ಅವರಿಗೆ ಟಿಕೆಟ್ ನೀಡುವಂತೆ ನೀವು ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ ರೆಡ್ಡಿ, ಟಿಕೆಟ್ ನೀಡುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.
ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಎಸ್ಟಿ ಆಗಿದ್ದರೆ ನಾನು ಸಹ ಟಿಕೆಟ್ ಕೇಳುತ್ತಿದ್ದೆ''''. ಯಾರಾದರೂ ಟಿಕೆಟ್ ಕೇಳಬಹುದು. ಅದರಲ್ಲಿ ತಪ್ಪೇನಿಲ್ಲ. ಆದರೆ, ಪಕ್ಷದ ಹಿರಿಯ ನಾಯಕರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.